ಪ್ರೀತಿಯ ಶ್ವಾನಕ್ಕೆ ಶಾಸಕರಿಂದ ಕಣ್ಣೀರಿನ ವಿದಾಯ ಹೇಳಿದ ಶಾಸಕ ನಾರಾಯಣಸ್ವಾಮಿ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 22, 2021 | 10:41 PM

ಪಗ್​ ಜಾತಿಗೆ ಸೇರಿದ ಲಿಯೋ ಕಳೆದ ಹನ್ನೊಂದು ವರ್ಷಗಳಿಂದ ಶಾಸಕ ನಾರಾಯಣಸ್ವಾಮಿಯವರ ಮನೆಯ ಸದಸ್ಯನಂತೆ ಇತ್ತು ಮುಂಜಾನೆಯಿಂದ ಸಂಜೆವರೆಗೂ ಮನೆಯಲ್ಲಿ ಮನೆಯ ಸದಸ್ಯರ ಜೊತೆಗೆ ಆಟವಾಡಿಕೊಂಡು ಎಲ್ಲರ ಪ್ರೀತಿ ಸಂಪಾದಿಸಿತ್ತು.

ಪ್ರೀತಿಯ ಶ್ವಾನಕ್ಕೆ ಶಾಸಕರಿಂದ ಕಣ್ಣೀರಿನ ವಿದಾಯ ಹೇಳಿದ ಶಾಸಕ ನಾರಾಯಣಸ್ವಾಮಿ
ಪ್ರೀತಿಯ ಶ್ವಾನದ ಸಮಾಧಿ ಬಳಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ

Follow us on

ಕೋಲಾರ: ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಮನೆಯಲ್ಲಿದ್ದ ಪ್ರೀತಿಯ ನಾಯಿ ಲಿಯೋ ಸೋಮವಾರ ಅನಾರೋಗ್ಯದಿಂದ ನಿಧನವಾಗಿದೆ. ತಮ್ಮ ಕುಟುಂಬದ ಸದಸ್ಯನಂತೆ ಇದ್ದ ಲಿಯೋ ಭಾನುವಾರ ಮಧ್ಯಾಹ್ನ ಮೃತಪಟ್ಟಿದೆ. ವಾತಾವರಣದಲ್ಲಿನ ಏರುಪೇರು ಹಾಗೂ ಹೃದಯಾಘಾತದಿಂದ ನಾಯಿ ಸಾವನ್ನಪ್ಪಿರಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ. ಪಗ್​ ಜಾತಿಗೆ ಸೇರಿದ ಲಿಯೋ ಕಳೆದ ಹನ್ನೊಂದು ವರ್ಷಗಳಿಂದ ಶಾಸಕ ನಾರಾಯಣಸ್ವಾಮಿಯವರ ಮನೆಯ ಸದಸ್ಯನಂತೆ ಇತ್ತು ಮುಂಜಾನೆಯಿಂದ ಸಂಜೆವರೆಗೂ ಮನೆಯಲ್ಲಿ ಮನೆಯ ಸದಸ್ಯರ ಜೊತೆಗೆ ಆಟವಾಡಿಕೊಂಡು ಎಲ್ಲರ ಪ್ರೀತಿ ಸಂಪಾದಿಸಿತ್ತು.

ಮನೆಯ ಸದಸ್ಯರಂತೆ ಇದು ಕೂಡಾ ಬೆಡ್​ ರೂಂ, ಹಾಲ್​, ಕಿಚನ್​ ಎಲ್ಲೆಡೆ ಓಡಾಡಿಕೊಂಡು ತುಂಬಾ ಮನೆಯ ಸದಸ್ಯರ ಪ್ರೀತಿ ಗಳಿಸಿದ್ದ ನಾಯಿ ಇಂದು ಅಚಾನಕ್ಕೆ ಮೃತಪಟ್ಟ ಹಿನ್ನೆಲೆ ಇಡೀ ಕುಟುಂಬ ನಾಯಿಗೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿ ಕಣ್ಣೀರಿನ ವಿದಾಯ ಹೇಳಿದ್ದಾರೆ.

ಲಿಯೋ ಕುರಿತು ಮಾತನಾಡಿದ ಶಾಸಕ ನಾರಾಯಣಸ್ವಾಮಿ ಮನೆಯಿಂದ ಹೊರಗೆ ಹೋಗುವಾಗ ಮನೆಯ ಗೇಟ್​ವರೆಗೂ ಬಂದು ನನ್ನನ್ನು ಕಳಿಸಿಕೊಟ್ಟು ಬರುತ್ತಿತ್ತು. ಇನ್ನು ಮನೆಗೆ ಬಂದಾಗಲೂ ಅಷ್ಟೇ ನನ್ನ ಕಾರ್​ ಹಾರ್ನ್​​ ಕೇಳಿದ ತಕ್ಷಣ ಬಾಗಿಲಲ್ಲಿ ಬಂದು ನಿಂತು ನನ್ನನ್ನು ಸ್ವಾಗತ ಮಾಡುತ್ತಿತ್ತು. ಇನ್ನು ನಾನು ಮುಂಜಾನೆ ವಾಕಿಂಗ್ ಹೋಗಿ ಬಂದಾಗ ನನ್ನ ಸಾಕ್ಸ್​ ಹಿಡಿದುಕೊಂಡು ನನ್ನನ್ನು ಆಟವಾಡಿಸುತ್ತಿತ್ತು. ನನ್ನ ಜೊತೆಗೆ ನಾನು ರಾತ್ರಿ ಮಲಗುವವರೆಗೂ ನನ್ನ ಜೊತೆಗೆ ಆಟವಾಡಿಕೊಂಡು ನನ್ನನ್ನು ಸಂತೋಷದಿಂದ ನೋಡಿಕೊಳ್ಳುತ್ತಿದ್ದ ಲಿಯೋ ಕಳೆದುಕೊಂಡಿರುವುದು ನನಗೆ ತುಂಬಾ ನೋವಾಗಿದೆ ಎಂದು ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ನಾನು ನನ್ನ ಕುಟುಂಬ ಸದಸ್ಯರೊಬ್ಬರನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ. ಇನ್ನು ನಮ್ಮ ಮನೆಯ ಸದಸ್ಯರು ಕೂಡಾ ಲಿಯೋನ ಸಾವಿನಿಂದ ಕಣ್ಣೀರಿನಲ್ಲಿ ಮುಳುಗಿದ್ದಾರೆ ಎಂದಿದ್ದಾರೆ. ಮೃತ ಶ್ವಾನ ಲಿಯೋಗೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿ ತಮ್ಮ ತೋಟದಲ್ಲಿ ಅದನ್ನು ಸಮಾದಿ ಮಾಡಲಾಗಿದ್ದು ಅದು ನಾವು ಎಂದು ಮರೆಯಲಾಗದ ನಮ್ಮ ಮನೆಯ ಸದಸ್ಯ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಪಾರ್ಟ್​ಮೆಂಟ್ ಜನರ ಜೀವ ಉಳಿಸಿದ ನಾಯಿ! ಮೂಕಪ್ರಾಣಿಯ ಸಮಯಪ್ರಜ್ಞೆಗೆ ಜನ ಬೆರಗು ಇದನ್ನೂ ಓದಿ: Viral Video: ಪುಟ್ಟ ಮಗುವಿಗೆ ತೆವಳಲು ಕಲಿಸುತ್ತಿರುವ ನಾಯಿ ಮರಿ; ಕ್ಯೂಟ್ ವಿಡಿಯೊ ವೈರಲ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada