ಪಂಚ ಭಾಷೆ ನಟಿ ದಿವಂಗತ ಸೌಂದರ್ಯ ಕಟ್ಟಿಸಿದ ಶಾಲೆಗೆ ಬಣ್ಣ ಬಣ್ಣದ ಚಿತ್ತಾರದ ಮೆರುಗು, ಹಾಳಾಗಿದ್ದ ಶಾಲೆಯನ್ನು ಹೊಸದಂತೆ ಮಾಡಿದ ಟ್ರಸ್ಟ್
ಶಾಲೆಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಎಂಬ ಸಂಸ್ಥೆಯ ಸದಸ್ಯರ ಶ್ರಮದ ಪ್ರತಿಫಲವಾಗಿ ಶಾಲೆಗೆ ಸುಣ್ಣಬಣ್ಣ ಬಳಿದು ಶಾಲೆಯ ಕಾಂಪೌಂಡ್ ಗೋಡೆಗಳಿಗೆ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸಿದ್ದಾರೆ.
ಕೋಲಾರ: ಚಲನ ಚಿತ್ರರಂಗದ ಖ್ಯಾತ ಮತ್ತು ಪಂಚ ಭಾಷೆ ನಟಿ ದಿವಂಗತ ಸೌಂದರ್ಯ ಅವರ ಹುಟ್ಟೂರು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಬಹುದಿನಗಳ ನಂತರ ಈಗ ಕಲರ್ ಪುಲ್ ಆಗಿ ಕಾಣುತ್ತಿದೆ. ಸೌಂದರ್ಯ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಬೆಳೆದಿದ್ರು ಸಹ ತನ್ನ ಹುಟ್ಟೂರು ಗಂಜಿಗುಂಟೆ ಗ್ರಾಮವನ್ನು ಮರೆತಿರಲಿಲ್ಲ. ಬಿಡುವಿನ ವೇಳೆ ಹುಟ್ಟೂರಿಗೆ ಅಗಮಿಸಿ ಹಲವು ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದರು.
ತಾನು ಓದಿದ ಶಾಲೆಯನ್ನು ಹೊಸದಾಗಿ ಕಟ್ಟಿಸಿಕೊಟ್ಟಿದ್ರು, ಆದರೆ ಸೌಂದರ್ಯ ನಿಧನ ನಂತರ ಶಾಲೆ ಕಳೆಗುಂದಿತ್ತು. ಈ ನಿಟ್ಟಿನಲ್ಲಿ ಶಾಲೆಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಎಂಬ ಸಂಸ್ಥೆಯ ಸದಸ್ಯರ ಶ್ರಮದ ಪ್ರತಿಫಲವಾಗಿ ಶಾಲೆಗೆ ಸುಣ್ಣಬಣ್ಣ ಬಳಿದು ಶಾಲೆಯ ಕಾಂಪೌಂಡ್ ಗೋಡೆಗಳಿಗೆ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸಿದ್ದಾರೆ. ಸೌಂದರ್ಯ ಕಟ್ಟಿಸಿದ ಶಾಲೆ ಇದೀಗ ಸುಂದರವಾಗಿ ಕಂಗೊಳಿಸುವಂತೆ ಮಾಡಿದ್ದಾರೆ. ವಿಶೇಷವಾಗಿ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ನಂತರದ ದಿನಗಳಲ್ಲಿ ಈ ಟ್ರಸ್ಟ್ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದೆ. ಪ್ರಗತಿ ಚಾರಿಟಬಲ್ ಟ್ರಸ್ಟ್ ಈವರೆಗೆ ಮುಳಬಾಗಿಲು ತಾಲೂಕಿನ 95ಕ್ಕೂ ಹೆಚ್ಚಿನ ಶಾಲೆಗಳಿಗೆ ಸುಣ್ಣ ಬಣ್ಣ ಹಚ್ಚಿ ಮೆರುಗು ತಂದುಕೊಟ್ಟಿದೆ. ಅಲ್ಲದೆ ರಾಜ್ಯಾದ್ಯಂತ ಹಲವು ಶಾಲೆಗಳ ಅಭಿವೃದ್ಧಿ ಕೆಲಸದಲ್ಲಿ ಈ ಟ್ರಸ್ಟ್ ಎಲೆ ಮೆರೆ ಕಾಯಿಯಂತೆ ಕೆಲಸ ಮಾಡುತ್ತಿದೆ. ಇವರ ಈ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳು ಬಣ್ಣ ಬಣ್ಣದ ಶಾಲೆಯಲ್ಲಿ ಓದಲು ಉತ್ಸಾಹಕರಾಗಿದ್ದಾರೆ. ಇದನ್ನೂ ಓದಿ: ಹಳ್ಳಿ ಹುಡುಗಿಯರ ಥ್ರೋಬಾಲ್ ಸಾಧನೆ; ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟ ದಾವಣಗೆರೆ ರೈತರ ಮಕ್ಕಳು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:08 am, Thu, 2 June 22