ಕೆರೆ ತುಂಬವ ಮೊದಲೇ ಬೇರೆ ಗ್ರಾಮಕ್ಕೆ ಕೆ.ಸಿ.ವ್ಯಾಲಿ ನೀರು ಹರಿಸಿದ್ದಕ್ಕೆ ವಿರೋಧ

ಕೋಲಾರ: ಕೆರೆ‌ ಪೂರ್ತಿಯಾಗಿ ತುಂಬುವ ಮೊದಲೇ ನೀರನ್ನು ಬೇರೆ ಗ್ರಾಮದ ಕೆರೆಗೆ ಹರಿಸಿದ್ದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಸಿ.ವ್ಯಾಲಿ ಯೋಜನೆಯ ನೀರು ಕೋಲಾರ ತಾಲೂಕಿನ ಎಸ್.ಅಗ್ರಹಾರ ಗ್ರಾಮದ ಕೆರೆಗೆ ಬರುತ್ತಿತ್ತು. ಕೆರೆ ತುಂಬುವ ಮೊದಲೇ ಜನಘಟ್ಟ ಕೆರೆಗೆ ನೀರು ಹರಿಸಲು‌ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಪೊಲೀಸರು ಗ್ರಾಮಸ್ಥರನ್ನು ಸ್ಥಳದಿಂದ ಚದುರಿಸಿದ ಬಳಿಕ ಬಿಗಿ ಬಂದೋಬಸ್ತ್ ನಡುವೆ ತಹಶೀಲ್ದಾರ್ ಶೋಭಿತಾ […]

ಕೆರೆ ತುಂಬವ ಮೊದಲೇ ಬೇರೆ ಗ್ರಾಮಕ್ಕೆ ಕೆ.ಸಿ.ವ್ಯಾಲಿ ನೀರು ಹರಿಸಿದ್ದಕ್ಕೆ ವಿರೋಧ
ಸಾಧು ಶ್ರೀನಾಥ್​

Updated on: Apr 26, 2020 | 1:50 PM

ಕೋಲಾರ: ಕೆರೆ‌ ಪೂರ್ತಿಯಾಗಿ ತುಂಬುವ ಮೊದಲೇ ನೀರನ್ನು ಬೇರೆ ಗ್ರಾಮದ ಕೆರೆಗೆ ಹರಿಸಿದ್ದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಸಿ.ವ್ಯಾಲಿ ಯೋಜನೆಯ ನೀರು ಕೋಲಾರ ತಾಲೂಕಿನ ಎಸ್.ಅಗ್ರಹಾರ ಗ್ರಾಮದ ಕೆರೆಗೆ ಬರುತ್ತಿತ್ತು. ಕೆರೆ ತುಂಬುವ ಮೊದಲೇ ಜನಘಟ್ಟ ಕೆರೆಗೆ ನೀರು ಹರಿಸಲು‌ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಪೊಲೀಸರು ಗ್ರಾಮಸ್ಥರನ್ನು ಸ್ಥಳದಿಂದ ಚದುರಿಸಿದ ಬಳಿಕ ಬಿಗಿ ಬಂದೋಬಸ್ತ್ ನಡುವೆ ತಹಶೀಲ್ದಾರ್ ಶೋಭಿತಾ ಅವರು ಕೆರೆಯ ತೂಬನ್ನು ಓಪನ್ ಮಾಡಿಸಿ ನೀರನ್ನು ಹರಿಸಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us