ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಗಿಫ್ಟ್; ಪ್ರತಿ ಲೀಟರ್ ಹಾಲಿನ ದರ 2.10 ರೂ. ಹೆಚ್ಚಳ
ಹಾಲಿದ ದರ ಏರಿಸುವ ಮೂಲಕ ಕೋಲಾರ ಹಾಲು ಒಕ್ಕೂಟವು ಗೋವು ಸಾಕಾಣಿಕೆದಾರರಿಗೆ ಯುಗಾದಿ ಹಬ್ಬಕ್ಕೆ ಗಿಫ್ಟ್ ನೀಡಿದೆ. ಮಾರ್ಚ್ 16ರಿಂದ ಹಾಲು ಉತ್ಪಾದಕರಿಗೆ ಪರಿಷ್ಕರಣೆ ದರ ಅನ್ವಯ ಆಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದ್ದಾರೆ.
ಕೋಲಾರ: ಪ್ರತಿ ಲೀಟರ್ ಹಾಲಿನ ದರವನ್ನು 2 ರೂಪಾಯಿ 10 ಪೈಸೆ ಹೆಚ್ಚಳ (Milk Price Hike) ಮಾಡುವ ಮೂಲಕ ಹಾಲು ಉತ್ಪಾದಕರಿಗೆ ಕೋಲಾರ ಹಾಲು ಒಕ್ಕೂಟವು (Kolar Milk Union) ಯುಗಾದಿ ಹಬ್ಬಕ್ಕೆ ಗಿಫ್ಟ್ ನೀಡಿದೆ. ಕೋಲಾರ ಹಾಲು ಒಕ್ಕೂಟದಿಂದ ಲೀಟರ್‌ಗೆ 33 ರೂ. 90 ಪೈಸೆ ದರ ನಿಗದಿ ಮಾಡಲಾಗಿದ್ದು, ಮಾರ್ಚ್ 16ರಿಂದ ಹಾಲು ಉತ್ಪಾದಕರಿಗೆ ಪರಿಷ್ಕರಣೆ ದರ ಅನ್ವಯವಾಗಲಿದೆ ಎಂದು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದ್ದಾರೆ. ಹೈನುಗಾರಿಕೆ ಪೋತ್ಸಾಹಿಸುವ ನಿಟ್ಟಿನಲ್ಲಿ ಮೈಮುಲ್ ಯುಗಾದಿ ಹಬ್ಬದ ವಿಶೇಷವಾಗಿ ಮಾ. 16 ರಿಂದ ರೈತರು ಮಾರಾಟ ಮಾಡುವ ಹಾಲಿನ ದರವನ್ನು 1 ರೂ. ಹೆಚ್ಚಳ ಮಾಡಲಿದೆ. ಈ ಬಗ್ಗೆ ಪಿರಿಯಾಪಟ್ಟಣದಲ್ಲಿ ನಂದಿನಿ ಗೆಲಾಕ್ಸಿ ಉದ್ಘಾಟಿಸಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಅವರು ಮಾಹಿತಿ ನೀಡಿದರು.
ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ, ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಹಾಗೂ ಪ್ರತಿ ಕೆಜಿ ಮೊಸರಿಗೆ 2 ರೂಪಾಯಿ ಏರಿಕೆ ಮಾಡಲಾಗಿದೆ. ನೇರವಾಗಿ ರೈತರಿಗೆ ಈ ಹಣವನ್ನು ನೀಡಲಾಗುತ್ತಿದ್ದು ಗ್ರಾಹಕರು ಸಹಕಾರ ಕೊಡುವಂತೆ ಮನವಿ ಮಾಡಿದರು. ದರ ಹೆಚ್ಚಳದ ಬಗ್ಗೆ ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯ ಬಳಿಕ ಈ ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರಿಗೆ ಎದುರಾಗಲಿದೆ ಹಾಲಿನ ಕೊರತೆ; ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದು ಎಚ್ಚರಿಕೆ ನೀಡಿದ ಬಮುಲ್
ಕರ್ನಾಟಕದಲ್ಲಿ ಪ್ರತಿ ಲೀಟರ್ ಹಾಲಿನ ದರ 2 ರೂಪಾಯಿವರೆಗೆ ಏರಿಸುತ್ತಿರುವ ನಡುವೆ ಕೇರಳದಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನ 6 ರೂಪಾಯಿಗೆ ಏರಿಸಿದ್ದಾರೆ. ಕೇರಳ ಹಾಲು ಸಹಕಾರ ಒಕ್ಕೂಟವು ಬೆಲೆ ಏರಿಕೆ ಕುರಿತು ಘೋಷಣೆ ಮಾಡಿದೆ. ಪ್ರಸ್ತುತ ರಾಜ್ಯದಲ್ಲಿ ಪ್ರತೀ ಲೀಟರ್ 46 ರೂಪಾಯಿ ಇರುವ ಹಾಲಿನ ಬೆಲೆ 52 ರೂ.ಗೆ ಏರಿಕೆಯಾಗಲಿದೆ. ಮೂರು ವರ್ಷಗಳ ಹಿಂದೆ 4 ರೂ. ಏರಿಕೆ ಮಾಡಿದ್ದ ಒಕ್ಕೂಟವು ಬಳಿಕ ದರವನ್ನು ಏರಿಸಿರಲಿಲ್ಲ. ಆಗ ಹೆಚ್ಚಾದ ಹಾಲಿನ ದರದಲ್ಲಿ 3.35 ರೂ. ರೈತರಿಗೆ ಸೇರುತ್ತಿತ್ತು. ಈ ಬಾರಿ 5.025 ರೂ. ರೈತರಿಗೆ ಸೇರಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Sat, 11 March 23