ಕೋಲಾರ: ಕೇಂದ್ರ ಕೃಷಿ ಸಚಿವೆ ಶೋಭಾ ಕರಾಂದ್ಲಾಜೆಯಿಂದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನೂತನ ಕೆವಿಕೆ ಉದ್ಘಾಟನೆ

ಕೆವಿಕೆ ಕಚೇರಿ ಉದ್ಘಾಟನೆ ಬಳಿಕ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭ ಕರೆಂದ್ಲಾಜೆ ಮಾತನಾಡಿದ್ದು, ದೇಶದ ಲಸಿಕೆ ಅಭಿಯಾನ ಇಡೀ ವಿಶ್ವಕ್ಕೆ ಮಾದರಿ. ವಿಶ್ವದಲ್ಲೇ ಮೊದಲು ದೇಶದಲ್ಲಿ ಲಸಿಕೆ ಕಂಡು ಹಿಡಿದಿದ್ದು, ಇದರಲ್ಲಿ ದೇಶದ ಪ್ರಧಾನಿ‌ ಮೋದಿ ಶ್ರಮ ಬಹಳಷ್ಟಿದೆ. ಆದರೆ ವಿರೋಧ ಪಕ್ಷದವರು ಲಸಿಕೆ ಅಭಿಯಾನವನ್ನು ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೋಲಾರ: ಕೇಂದ್ರ ಕೃಷಿ ಸಚಿವೆ ಶೋಭಾ ಕರಾಂದ್ಲಾಜೆಯಿಂದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನೂತನ ಕೆವಿಕೆ ಉದ್ಘಾಟನೆ
ಶೋಭಾ ಕರಾಂದ್ಲಾಜೆ
Follow us
TV9 Web
| Updated By: preethi shettigar

Updated on:Oct 22, 2021 | 1:30 PM

ಕೋಲಾರ: ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ನೂತನ ಕೆವಿಕೆ ಕಚೇರಿಯನ್ನು ಇಂದು (ಅಕ್ಟೋಬರ್ 22) ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭ ಕರೆಂದ್ಲಾಜೆ ಉದ್ಘಾಟನೆ ಮಾಡಿದ್ದಾರೆ. ಕೋಲಾರದ ಟಮಕದಲ್ಲಿರುವ ಕೆವಿಕೆ ನೂತನ ಕೇಂದ್ರದ ಉದ್ಘಾಟನೆಯಲ್ಲಿ ಶೋಭಾ ಕರಂದ್ಲಾಜೆಗೆ ಸಂಸದ ಮುನಿಸ್ವಾಮಿ, ಶಾಸಕ ವೈ.ಎ.ನಾರಾಯಣಸ್ವಾಮಿ, ಶಾಸಕ ಶ್ರೀನಿವಾಸಗೌಡ, ಗೋವಿಂದರಾಜು ಸಾತ್ ನೀಡಿದ್ದಾರೆ.

ಕೆವಿಕೆ ಕಚೇರಿ ಉದ್ಘಾಟನೆ ಬಳಿಕ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭ ಕರೆಂದ್ಲಾಜೆ ಮಾತನಾಡಿದ್ದು, ದೇಶದ ಲಸಿಕೆ ಅಭಿಯಾನ ಇಡೀ ವಿಶ್ವಕ್ಕೆ ಮಾದರಿ. ವಿಶ್ವದಲ್ಲೇ ಮೊದಲು ದೇಶದಲ್ಲಿ ಲಸಿಕೆ ಕಂಡು ಹಿಡಿದಿದ್ದು, ಇದರಲ್ಲಿ ದೇಶದ ಪ್ರಧಾನಿ‌ ಮೋದಿ ಶ್ರಮ ಬಹಳಷ್ಟಿದೆ. ಆದರೆ ವಿರೋಧ ಪಕ್ಷದವರು ಲಸಿಕೆ ಅಭಿಯಾನವನ್ನು ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಲಸಿಕೆ ಕುರಿತು ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಿಗೂ ಸಿಎಂ ರಷ್ಟೇ ಅಧಿಕಾರ ಇದೆ. ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಮಾತನಾಡಿ. ಈ ರೀತಿ ಮಾತನಾಡಿ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಹೇಳಿದ್ದಾರೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರ ವೇದಿಕೆ ದರ್ಬಾರ್ ಕೋಲಾರ ಹೊರ ವಲಯದ ಟಮಕ ಬಳಿ ಆಯೋಜಿಸಲಾದ ಕೃಷಿ ವಿಜ್ಞಾನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ. ವೇದಿಕೆಯಲ್ಲಿ ಸಂಸದ ಮುನಿಸ್ವಾಮಿ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ತುಂಬಿ ತುಳುಕಿತ್ತಿದ್ದರು. ವೇದಿಕೆ ಮೇಲಿನ ಎರಡು ಲೈನ್​ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕುಳಿತಿದ್ದಾರೆ. ವೇದಿಕೆ ಅಕ್ಕ ಪಕ್ಕ ಹಾಗೂ ಮುಂಭಾಗದಲ್ಲಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಕೈಕಟ್ಟಿ‌ ನಿಂತಿದ್ದಾರೆ.

ಇದನ್ನೂ ಓದಿ: ವಾಜಪೇಯಿಯವರೂ ಎತ್ತಿನಗಾಡಿಯಲ್ಲಿ ಸಂಸತ್​ಗೆ ಬಂದಿದ್ದರು, ಶೋಭಾ ಕರಂದ್ಲಾಜೆ ಈಗೆಲ್ಲಿದ್ದಾರೆ? ಸಿದ್ದರಾಮಯ್ಯ ಸವಾಲ್

ಬೆಂಗಳೂರು: ಮಾಡ್ಯೂಲರ್ ಆಸ್ಪತ್ರೆ ಉದ್ಘಾಟನೆ; ಕೇಂದ್ರ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯ!

Published On - 1:20 pm, Fri, 22 October 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್