ಡಿಸಿ ಅನುಮತಿ ನಿರಾಕರಣೆ ನಡುವೆಯೂ ನಿಲ್ಲದ ಗವಿಮಠ ಜಾತ್ರೆಯ ಸಿದ್ಧತೆ
ಲಕ್ಷಲಕ್ಷ ಜನ ಗವಿಮಠದ ಜಾತ್ರೆಗೆ ಸೇರುತ್ತಿದ್ದರು. ಈ ಬಾರಿ ಕೋವಿಡ್ ಕರಿನೆರಳು ಜಾತ್ರೆಯ ಮೇಲೆ ಬಿದ್ದಿದೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಜಾತ್ರೆಗೆ ನೋ ಪರ್ಮಿಶನ್ ಎಂದು ಖಡಕ್ ಆಗಿ ಹೇಳಿದ್ದಾರೆ.
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರುವಾಸಿಯಾದ ಗವಿಮಠ ಜಾತ್ರೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇತ್ತ ಗವಿಮಠ ಜಾತ್ರೆ ಮಾಡೋದಾಗಿ ಹಠಕ್ಕೆ ಬಿದ್ದಿದೆ. ಈಗಾಗಲೇ ಜಾತ್ರೆಯ ಅಂಗವಾಗಿ ದೇಣಿಗೆ, ಹಾಗೂ ಕಟ್ಟಿಗೆ ಸಂಗ್ರಹ ಕಾರ್ಯ ಆರಂಭವಾಗಿದೆ. ಜಾತ್ರೆ ಹಾಗೂ ಕಟ್ಟಿಗೆ ಸಂಗ್ರಹಿಸೋ ರಶೀದಿ ವೈರಲ್ ಆಗ್ತಿವೆ.
ಲಕ್ಷಲಕ್ಷ ಜನ ಗವಿಮಠದ ಜಾತ್ರೆಗೆ ಸೇರುತ್ತಿದ್ದರು. ಈ ಬಾರಿ ಕೋವಿಡ್ ಕರಿನೆರಳು ಜಾತ್ರೆಯ ಮೇಲೆ ಬಿದ್ದಿದೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಜಾತ್ರೆಗೆ ನೋ ಪರ್ಮಿಶನ್ ಎಂದು ಖಡಕ್ ಆಗಿ ಹೇಳಿದ್ದಾರೆ.
ಹದಿನೈದು ದಿನಗಳ ಹಿಂದೆ ಕೊಪ್ಪಳ ಜಿಲ್ಲಾಧಿಕಾರಿ ಜಾತ್ರೆಗೆ ನೋ ಪರ್ಮಿಶನ್ ಎಂದಿದ್ರು. ಇದಾದ ಬಳಿಕ ಜಿಲ್ಲೆಯ ಜನರಲ್ಲಿ ಗೊಂದಲ ಉಂಟಾಗಿತ್ತು. ಯಾಕಂದ್ರೆ ಇದುವರೆಗೂ ಗವಿ ಮಠ ಜಾತ್ರೆ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಕೋವಿಡ್ ಎರಡನೇ ಅಲೆ ಹಿನ್ನಲೆ ಜಿಲ್ಲಾಧಿಕಾರಿ ಜಾತ್ರೆಯ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಮಠದ ಆವರಣದಲ್ಲಿ ಸಂಕ್ಷಿಪ್ತ ಜಾತ್ರೆಗೆ ನಮ್ಮದೇನೂ ತಕರಾರು ಇಲ್ಲ ಅಂತ ಅವರು ಹೇಳಿದ್ರು. ಈ ಒಂದು ಹೇಳಿಕೆ ಸಹಜವಾಗಿ ಗವಿ ಮಠವನ್ನ ಕೆರಳಿಸಿತ್ತು. ಜಿಲ್ಲಾಧಿಕಾರಿ ಮತ್ತು ಗವಿಮಠದ ನಡುವೆ ಕೋಲ್ಡ್ ವಾರ್ ಆರಂಭವಾಗಿತ್ತು.
ಗವಿ ಮಠ ಜಾತ್ರೆ ಪರ ವಿರೋಧ ಚರ್ಚೆ..
ಗವಿ ಮಠದ ಜಾತ್ರೆ ಕುರಿತು ಪರ ವಿರೋಧ ಚರ್ಚೆ ಆರಂಭವಾಯ್ತು. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಜಾತ್ರೆ ಆಗಬೇಕು ಅನ್ನೋರ ಸಂಖ್ಯೆ ಜಾಸ್ತಿಯಾಯ್ತು. ಇದೊಂದು ವರ್ಷ ಸರಳವಾಗಿ ನಡೆಯಲಿ ಅನ್ನೋದು ಕೆಲವರ ಅಭಿಪ್ರಾಯವಾಗಿತ್ತು. ಜನ ಗವಿಮಠ ಜಾತ್ರೆಯ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ಮಾಡಿದ್ರು. ಗವಿಮಠ ಮಾತ್ರ ಇಂದಿಗೂ ಯಾವುದೊಂದು ಮಾತಾಡಿಲ್ಲ. ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಜಾತ್ರೆಯ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. ಕೊರೊನಾ ಸಮಯದಲ್ಲಿ ಜನರಲ್ಲಿ ಅರಿವು ಮೂಡಿಸಿದ ಸ್ವಾಮೀಜಿ ಜಾತ್ರೆಯ ಕುರಿತು ಮಾತಾನಾಡದೆ ಇರೋದು ಜನರಲ್ಲಿ ಗೊಂದಲ ಮೂಡಿಸಿದೆ.
ರಸೀದಿ ವೈರಲ್ ಜಾತ್ರೆ ಇನ್ನು ನಡೆಯುತ್ತೆ ಅನ್ನೋ ಗೊಂದಲ ಇದೆ. ಇದ್ರ ಮಧ್ಯೆ ಗವಿಮಠ 2021ರ ಜಾತ್ರೆ ಅಂಗವಾಗಿ ದೇಣಿಗೆ ಕಲೆಕ್ಟ್ ಮಾಡೋಕೆ ಮುಂದಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ದೇಣಿಕೆ ಕೆಲಸ ಆರಂಭವಾಗಿದೆ. ಜೊತೆಗೆ ಗವಿಮಠದ ಪ್ರಸಾದಕ್ಕೆ ಕಟ್ಟಿಗೆ ನೀಡೋರು ಒಂದು ತಿಂಗಳ ಮುಂಚೆ ನೀಡಬೇಕು ಅನ್ನೋ ಚೀಟಿ ವೈರಲ್ ಆಗ್ತಿದೆ. ಇದನ್ನೆಲ್ಲ ನೋಡಿದ್ರೆ ಗವಿಮಠವು ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿದೆ. ಮೂಲಗಳ ಪ್ರಕಾರ ಯಾವಾಗ ಅನುಮತಿ ನೀಡಿದ್ರೂ ಗವಿಮಠ ಜಾತ್ರೆ ಮಾಡಲು ರೆಡಿ ಇದೆ. ಆದ್ರೆ ಜನರಲ್ಲಿ ದೇಣಿಗೆ ನೀಡಬೇಕಾ? ಬೇಡವಾ? ಅನ್ನೋ ಗೊಂದಲ ಮನೆ ಮಾಡಿದೆ. ಜಾತ್ರೆ ನಡೆಯುತ್ತೆ ಅನ್ನೋ ಅನುಮಾನ ಇರೋವಾಗ ಯಾಕೆ ದೇಣಿಗೆ ಕಟ್ಟಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ.
ಶಾಸಕರು, ಸ್ಥಳೀಯರ ಪ್ರತಿಕ್ರಿಯೆ ಗವಿಮಠದ ಜಾತ್ರೆ ಹಿನ್ನೆಲೆ ಜಿಲ್ಲಾಧಿಕಾರಿ ನಿರ್ಧಾರ ಸ್ವಾಗತ ಮಾಡುತ್ತೇನೆ. ಈ ಬಾರಿ ಸರಳವಾಗಿ ಜಾತ್ರೆ ಆಗಲಿ. ಜೀವ ಮುಖ್ಯ ಅಂತಾರೆ ಕುಷ್ಟಗಿಯ ಶಾಸಕ ಅಮರೇಗೌಡ ಬಯ್ಯಾಪುರ.
ಈ ಬಾರಿ ಕೊರೊನಾ ಎರಡನೇ ಅಲೆ ಇದೆ. ಈಗಾಗಲೇ ಕೋವಿಡ್ ಸಂಖ್ಯೆ ಹೆಚ್ಚಾಗ್ತಿದೆ. ಇಂಥ ಸಮಯದಲ್ಲಿ ಆಡಂಭರದ ಜಾತ್ರೆಯ ಅವಶ್ಯತೆ ಇಲ್ಲ. ಸ್ವಾಮೀಜಿಗಳು ಕೊರೊನಾ ಸಮಯದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಿದ್ದಾಗಲೂ ಜಾತ್ರೆಗೆ ಸಿದ್ಧತೆ ನಡೆದಿರೋದು ಆಶ್ಚರ್ಯವಾಗಿದೆ ಎಂದು ಪ್ರಗತಿಪರ ಚಿಂತಕ ಬಸವರಾಜ್ ಶೀಲವಂತರ್ ಹೇಳುತ್ತಾರೆ.
ಅಪೌಷ್ಟಿಕತೆ ಸಮಸ್ಯೆ: ಕಲ್ಯಾಣ ಕರ್ನಾಟಕದ ಮಕ್ಕಳಿಗೆ ರಾಮಬಾಣವಾದ ಕೊಪ್ಪಳದ ನುಗ್ಗೆ ಪುಡಿ