ಕೊಪ್ಪಳ, ಮೇ 03: ಜಿಲ್ಲೆಯ ಕಾರಟಗಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಮತಯಾಚನೆ ಮಾಡಿದರು. ಎಪಿಎಂಸಿಯಿಂದ ಪಟ್ಟಣ ಪಂಚಾಯಿತಿವರೆಗೆ ರೋಡ್ಶೋ ಮಾಡಿದ್ದು, ರೋಡ್ಶೋನಲ್ಲಿ ಶಾಸಕ ಜನಾರ್ದನರೆಡ್ಡಿ, ಎಂಎಲ್ಸಿ ಹೇಮಲತಾ ಭಾಗಿ ಆಗಿದ್ದರು. ರೋಡ್ಶೋ ಬಳಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿಜೆಪಿಗೆ ವೋಟ್ ಹಾಕುವ ಮೂಲಕ ಕನ್ನಡ & ಸಂಸ್ಕೃತಿ ಸಚಿವ ತಂಗಡಗಿಗೆ (Shivaraj Tangadagi) ಕಪಾಳಕ್ಕೆ ಹೊಡೆದಂತಾಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ದೀಪ ಆರುವಾಗ ಉರಿಯುವ ರೀತಿ ಕಾಂಗ್ರೆಸ್ನವರು ಹಾರಾಡುತ್ತಿದ್ದಾರೆ. ಜೂನ್ 4ರ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಆಟ ನಡೆಯುವುದಿಲ್ಲ. ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ ಅಂತಾ ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗೂ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಕಿಡಿಕಾರಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ತಂಗಡಗಿ ನನ್ನ ಬಳಿ ಹಣ ತೆಗೆದುಕೊಂಡು ಬಂದು ಚುನಾವಣೆಯಲ್ಲಿ ಗೆದ್ದಿದ್ದ. ಶಿವರಾಜ ತಂಗಡಗಿಯನ್ನು ಮೊದಲ ಬಾರಿಗೆ ಮಂತ್ರಿಮಾಡಿದ್ದು ನಾನು. ಶಿವರಾಜ ತಂಗಡಗಿ ಅಧಿಕಾರದ ಮದದಿಂದ ವರ್ತನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಕೆಣಕಿದರೆ ಸುಮ್ಮನಿರಲ್ಲ ಅಂತ ಹೇಳುವ ಕುಮಾರಸ್ವಾಮಿ ನಾಗರಹಾವೇ ಇಲ್ಲ ಹೆಬ್ಬಾವೇ? ಚಲುವರಾಯಸ್ವಾಮಿ
ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿದ್ದಾನೆ. ತಮ್ಮ ತಂಗಡಗಿ.. ನಾನು ಕಾರಟಗಿ ಬಸ್ ನಿಲ್ದಾಣದ ಮುಂದೆ ನಿಂತಿದ್ದೇನೆ. ನಮ್ಮ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗ್ತಿದ್ದಾರೆ, ನಿನಗೆ ಧಮ್ ಇದ್ರೆ ಬಂದು ಬಿಜೆಪಿ ಕಾರ್ಯಕರ್ತರ ಕಪಾಳಕ್ಕೆ ಹೊಡಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರಿಗೆ ತಟ್ಟಿದ ಉತ್ತರ ಕರ್ನಾಟಕದ ಬಿಸಿಲಿನ ಝಳ: 1 ಗಂಟೆ ಮತದಾನದ ಅವಧಿ ವಿಸ್ತರಣೆಗೆ ಮನವಿ
ತಂಗಡಗಿ ಕೇವಲ ನೀನೊಬ್ಬ ಮಂತ್ರಿ, ಮೋದಿ ಬಗ್ಗೆ ಮಾತನಾಡುತ್ತೀಯಾ? ತಂಗಡಗಿ ನನ್ನನ್ನು ಬೆತ್ತಲು ಮಾಡುವುದಾಗಿ ಹೇಳಿಕೆ ನೀಡಿದ್ದಾನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ನನ್ನನ್ನು ಏನುಮಾಡಲು ಆಗಿಲ್ಲ. ತಂಗಡಗಿ ಸಚಿವಸ್ಥಾನ ಕಿತ್ತಾಕಲು ಬಸವರಾಜ ರಾಯರೆಡ್ಡಿ ಸಿದ್ಧನಿದ್ದಾನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:32 pm, Fri, 3 May 24