ಉಗ್ರಗಾಮಿಗಳ ಜತೆಗೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್​ಗೆ ಲಿಂಕ್: ಎಂಎಲ್​ಸಿ ಸುನೀಲಗೌಡ ಗಂಭೀರ ಆರೋಪ

ವಿಜಯಪುರ ಎಸ್ಸಿ ಮೀಸಲು ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರದ ನಡುವೆ ಬಿಜೆಪಿ ಮುಖಂಡ ಹಾಗೂ ಪರಿಷತ್ ಸದಸ್ಯ ಮಧ್ಯೆ ಜೀವ ಬೆದರಿಕೆಗಳ ಆರೋಪ ಪ್ರತ್ಯಾರೋಪ ನಡೆದಿದೆ. ಆರೋಪದಲ್ಲಿ ಪರಿಷತ್ ಸದಸ್ಯ ಉಗ್ರರ ಜೊತೆಗೆ ಲಿಂಕ್ ಇರುವ ವ್ಯಕ್ತಿಗಳ ಜೊತೆಗೆ ಸಂಪರ್ಕವನ್ನು ಬಿಜೆಪಿ ಮುಖಂಡ ಹೊಂದಿದ್ದಾರೆಂಬ ಸಂಶಯವಿದೆ ಎಂದಿದ್ದಾರೆ. ಅಂತಹ ವ್ಯಕ್ತಿಯಿಂದಲೇ ನನಗೆ ಹಾಗೂ ನಮ್ಮ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ಈ ವಿಚಾರವಾಗಿ ನಾನು ಸಿಎಂ, ಹೋ ಮಿನಿಸ್ಟರ್ ಹಾಗೂ ಪೊಲೀಸ್ ಮಹಾ ನಿರ್ದೇಶಕ ಹಾಗೂ ಮಹಾ ನಿರೀಕ್ಷಕರಿಗೆ ದೂರು ನೀಡಿದ್ದಾಗಿ ಪರಿಷತ್ ಸದಸ್ಯ ಹೇಳಿದ್ದಾರೆ. ಈ ಕುರಿತು ವರದಿ ಇಲ್ಲಿದೆ ನೋಡಿ.

ಉಗ್ರಗಾಮಿಗಳ ಜತೆಗೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್​ಗೆ ಲಿಂಕ್: ಎಂಎಲ್​ಸಿ ಸುನೀಲಗೌಡ ಗಂಭೀರ ಆರೋಪ
ಸುನೀಲಗೌಡ, ವಿಜುಗೌಡ ಪಾಟೀಲ್
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on:May 03, 2024 | 9:15 PM

ವಿಜಯಪುರ, ಮೇ.03: ವಿಜಯಪುರ ಲೋಕಸಭಾ ಚುನಾವಣೆಯ ಭರಾಟೆಯ ನಡುವೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ (Vijugouda Patil) ಹಾಗೂ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್(Sunilgouda Patil) ಪರಸ್ಪರ ಜೀವ ಬೆದರಿಕೆಗಳ ಆರೋಪ ಪ್ರತ್ಯಾರೋಪ ಜಿಲ್ಲೆಯಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಬಿಜೆಪಿ ಮುಖಂಡ ಪಂಜಾಬಿನ ಸರ್ದಾರ್ಜಿಗಳನ್ನು ಇಲ್ಲಿ ಅಕ್ರಮವಾಗಿ ತಂದಿಟ್ಟುಕೊಂಡಿದ್ದಾರೆ. ಅವರ ಬಳಿ ಅಕ್ರಮ ಶಸ್ತ್ರಾಸ್ತ್ರಗಳಿವೆ. ಅವರಿಗೆ ಉಗ್ರಗಾಮಿಗಳ ಜೊಗೆತೆ ಲಿಂಕ್ ಇರುವ ಮಾಹಿತಿ ಇದೆ ಸಂಶಯವಿದೆ ಎಂದು ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸುನೀಲಗೌಡ ಪಾಟೀಲ್, ‘ಕಳೆದ ಏಪ್ರೀಲ್ 28 ರಂದು ನಗರದ ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಹೋಗಿದ್ದೇವು. ಅಲ್ಲಿ ಪಾರ್ಕ್ ಮಾಡಿದ್ದ ನಮ್ಮ ವಾಹನ ತೆಗೆಯುವಂತೆ ನಮ್ಮ ಚಾಲಕನಿಗೆ ಓರ್ವ ಪಂಜಾಬಿನ ಸರ್ದಾರ್ಜಿ ವೇಷದಲ್ಲಿದ್ದ ವ್ಯಕ್ತಿ ಬೆದರಿಕೆ ಹಾಕುತ್ತಿದ್ದ. ಆತನನ್ನು ನಾನು ಪ್ರಶ್ನೆ ಮಾಡಿದಾಗ ಆತ ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಬಿಡಲ್ಲ, ಕೊಲೆ ಮಾಡುತ್ತೇನೆ. ನಿನ್ನ ಕೊಲೆ ಮಾಡೋಕೆ ನಾನು ಬಂದಿದ್ದು ಎಂದು ಬೆದರಿಕೆ ಹಾಕಿದ್ದ. ಆಗ ಇದೇ ಪಂಜಾಬಿ ವ್ಯಕ್ತಿಗೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಸಾಥ್ ನೀಡಿ ನನಗೆ ಹಾಗೂ ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲಿದ್ದವರು ಅವರನ್ನು ಸಮಾಧಾನ ಮಾಡಿ ಕಳುಹಿಸಿದರು ಎಂದು ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಮೇಲೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಲೋಕಸಭಾ ಚುನಾವಣೆ 2024: ಕಲ್ಯಾಟ ಮಂಟಪದಿಂದ ನೇರವಾಗಿ ಬಂದು ಮತ ಚಲಾಯಿಸಿದ ನವದಂಪತಿಗಳು; ಇಲ್ಲಿವೆ ಫೋಟೋಸ್​

ಮುಂದುವರೆದು ಮಾತನಾಡಿ, ‘ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಅಂದು ನಡೆದ ಘಟನೆಯ ಕುರಿತು ಎಸ್ಪಿ ಅವರ ಗಮನಕ್ಕೆ ತಂದೇವು. ಪಂಜಾಬಿನ ಅಪರಿಚಿತ ವ್ಯಕ್ತಿ ಜೀವ ಬೆದರಿಕೆ ಹಾಕಿರುವ ವ್ಯಕ್ತಿಯ ಕುರಿತು ಮಾಹಿತಿ ನೀಡಿ ಅವರ ಸೂಚನೆ ಮೇರೆಗೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ನಮ್ಮ ವಾಹನ ಚಾಲಕ ಅಪರಿಚಿತ ವ್ಯಕ್ತಿಯ ಮೇಲೆ ದೂರು ನೀಡಿದ್ದೇವೆ. ಈ ವ್ಯಕ್ತಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಜೊತೆಗೆ ಓಡಾಡುತ್ತಿದ್ದಾನೆ. ಆತ ಎಲ್ಲಿಂದ ಬಂದಾ, ಯಾರ ಜೊತೆಗೆ ಬಂದಾ. ಆತನ ಬಳಿ ಅಕ್ರಮ ಶಸ್ತ್ರಾಸ್ತ್ರಗಳಿಗೆ, ಜೊತೆಗೆ ಆತನಿಗೆ ಉಗ್ರಗಾಮಿಗಳ ಜೊತೆಗೆ ಸಂಪರ್ಕವಿದೆ ಎಂಬ ಸಂಶಯ ಹಾಗೂ ಮಾಹಿತಿ ಬಂದಿದೆ. ಸಂಶಯ ಬಂದಿರೋ ಕಾರಣ ಹಾಗೂ ಆತನಿಂದ ನನಗೆ ಹಾಗೂ ನಮ್ಮ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದು, ಪಂಜಾಬಿನ ಈ ವ್ಯಕ್ತಿ ಜೊತೆಗೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಗನ್ ಮ್ಯಾನ್ ಆಗಿ ಓಡಾಡಿರೋದು ನಮ್ಮ ಬಳಿ ದಾಖಲೆ ಇದೆ. ಹಾಗಾಗಿ ಈ ಪ್ರಕರಣದ ಕುರಿತು ತನಿಖೆಯಾಗಬೇಕೆಂದು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ಅವರಿಗೆ, ಮುಖ್ಯ ಕಾರ್ಯದರ್ಶಿಗೆ, ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದೇನೆ. ಅವರಿಗೆ ಉಗ್ರರ ಜೊತೆಗೆ ಲಿಂಕ್ ಇರೋ ಸಾಧ್ಯತೆಯಿದೆ ಎಂದು ಸುನೀಲಗೌಡ ಪಾಟೀಲ್ ಆರೋಪ ಮಾಡಿದರು.

ಇದಕ್ಕೆ ನೇರವಾಗಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಕಾರಣ. ವಿಜಯಪುರ ಕೇಂದ್ರ ಕಾರಾಗೃಹದಲ್ಲಿರೋ ಕೆಲ ರೌಡಿ ಶೀಟರ್ಸ್ಗಳ ಜೊತೆಗೆ ಕೈದಿಗಳ ಜೊತೆಗೆ ಬಿಜೆಪಿ ಲೀಡರ್ ವಿಜುಗೌಡ ಲಿಂಕ್ ಇಟ್ಟುಕೊಂಡಿದ್ದಾರೆ. ಜೈಲಿನಲ್ಲಿರುವ ಅವರಿಗೆ ಊಟ, ಮದ್ಯ, ಗಾಂಜಾ ಅಕ್ರಮವಾಗಿ ವಿಜುಗೌಡ ಪಾಟೀಲ್ ಸರಬರಾಜು ಮಾಡುತ್ತಾರಂತೆ. ಹಾಗಾಗಿ ಜೈಲಿನಲ್ಲಿರುವ ಪಂಜಾಬ್ ಮೂಲದ ವ್ಯಕ್ತಿಗಳಿಂದ ವಿಜುಗೌಡ ಪಂಜಾಬಿನಿಂದ ಶಾರ್ಪ್ ಶೂಟರ್ಸ್ ಗಳನ್ನು ಇಲ್ಲಿ ಕರೆಸಿಕೊಂಡಿದ್ದಾರೆ. ನಮ್ಮ ಚಾಲಕ ನೀಡಿದ ದೂರಿನ ಪ್ರಕಾರ ಆದರ್ಶ ನಗರ ಪೊಲೀಸರು ವಿಜುಗೌಡ ಪಾಟೀಲ್ ಗೆ ಪಂಜಾಬಿ ವ್ಯಕ್ತಿಗಳ ಬಗ್ಗೆ ಮಾಹಿತಿ ಕೇಳಿದರೆ ಅವರು ನಗೆ ಗೊತ್ತಿಲ್ಲಾ ಮದುವೆಗೆ ಬಂದಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನಾಯಕರು ಗಿಫ್ಟ್​​​​ ಕಾರ್ಡ್​​ಗಳನ್ನು ವಿತರಿಸುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ನಿನ್ನೆಯ ಸುದ್ದಿಗೋಷ್ಟಿಯಲ್ಲಿ ಅವರು ನನ್ನ ಹುಡುಗರು ಎಂದು ಹೇಳಿದ್ದಾರೆ. ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪಂಜಾಬಿನ ವ್ಯಕ್ತಿಗಳೊಂದಿಗೆ ಇರೋ ಸಂಬಂಧ ಹಾಗೂ ಜೈಲಿನಲ್ಲಿರೋ ಕೆಲ ಕೈದಿಗಳ ಜೊತೆಗಿನ ಸಂಬಂಧಪಟ್ಟಂತೆ ತನಿಖೆಗೆ ಒತ್ತಾಯ ಮಾಡಿದ್ದೇನೆ. ಪೊಲೀಸರ ತನಿಖೆಯಲ್ಲಿ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಹೇಳಿದರು. ಪಂಜಾಬಿನ ವ್ಯಕ್ತಿ ಜೊತೆಗೆ ವಿಜುಗೌಡ ಪಾಟೀಲ್ ಇರುವ ಪೋಟೋಗಳು ವಿಡಿಯೋಗಳು ಇವೆ. ತನಿಖೆಯಲ್ಲಿ ಪೊಲೀಸರು ಎಲ್ಲವನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಾರೆ. ಪೊಲೀಸರ ತನಿಖೆಯಲ್ಲಿ ಸತ್ಯಾಸತ್ಯತೆ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.

ಸದ್ಯ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಮೇಲೆ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಮಾತ್ರ ಗಂಭೀರ ಆರೋಪವನ್ನೇ ಮಾಡಿದ್ದಾರೆ. ಬಿಜೆಪಿ ಮುಖಂಡರ ಗನ್ ಮ್ಯಾನ್ ಎಂದು ಹೇಳಿರೋ ವ್ಯಕ್ತಿ ಪಂಜಾಬಿನಿಂದ ಬಂದಿದ್ದಾನೆ. ಇದೆಲ್ಲಾ ವಿಚಾರ ಕುರಿತು ದೂರು ದಾಖಲು ಆಗುತ್ತಿದ್ದಂತೆ ಇಲ್ಲಿಂದ ನಾಪತ್ತೆಯಾಗಿದ್ದಾನೆ. ಆತ ಯಾರೊಂದಿಗೆ ಬಂದ, ಯಾರ ಸೂಚನೆಯಿಂದ ಇಲ್ಲಿಗೆ ಕೆಲವರೊಂದಿಗೆ ಬಂದಿದ್ದ. ಆತ ಶಾರ್ಪ್ ಶೂಟರ್ ಇದ್ದು ಉಗ್ರರ ಜೊತೆಗೆ ಲಿಂಕ್ ಹೊಂದಿದ್ದಾನಾ? ಪಂಜಾಬಿನ ವ್ಯಕ್ತಿ ಬಿಜೆಪಿ ಮುಖಂಡ ವಿಜುಗೌಡ ಗನ್ ಮ್ಯಾನ್ ಆಗಿದ್ದು ಇದೆಲ್ಲಾ ಕುರಿತು ಸಮಗ್ರ ತನಿಖೆಗೆ ಸುನೀಲಗೌಡ ಪಾಟೀಲ್ ಒತ್ತಾಯ ಮಾಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಇಡೀ ಘಟನೆಯ ಸತ್ಯಾಂಶ ಬಯಲಿಗೆ ಬರಲಿದೆ. ಆಗ ಈ ಆರೋಪ ಪ್ರತ್ಯಾರೋಪಕ್ಕೆ ಬ್ರೇಕ್ ಬೀಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Fri, 3 May 24

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM