ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಆಧಾರ್ ಕಾರ್ಡ್ ತಿದ್ದುಪಡಿ: ದುಡಿಮೆ ಬಿಟ್ಟು ಗಂಟೆಗಟ್ಟಲೇ ಕ್ಯೂ ನಿಂತ ಜನರು

ರೇಷನ್ ಕಾರ್ಡ್ ಇ-ಕೆವೈಸಿ ಕಡ್ಡಾಯ ಹಿನ್ನೆಲೆ ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಜನ ಪರದಾಡುತ್ತಿದ್ದಾರೆ. ಸರ್ವರ್ ಸಮಸ್ಯೆಗಳಿಂದಾಗಿ ಆಧಾರ್ ಕೇಂದ್ರಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಬೆಳಗಿನ ಜಾವ 4ರಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರೂ, ಸಿಗುತ್ತಿರುವುದು 50 ಕೂಪನ್‌ಗಳು ಮಾತ್ರ. ಇನ್ನೊಂದೆಡೆ ದುಡಿಮೆ ಬಿಟ್ಟು ಬರುವ ಜನರಿಗೆ ಸರ್ವರ್ ಕೈಕೊಡುತ್ತಿರುವುದು ಆಕ್ರೋಶ ಹೆಚ್ಚಿದೆ.

ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಆಧಾರ್ ಕಾರ್ಡ್ ತಿದ್ದುಪಡಿ: ದುಡಿಮೆ ಬಿಟ್ಟು ಗಂಟೆಗಟ್ಟಲೇ ಕ್ಯೂ ನಿಂತ ಜನರು
ಆಧಾರ್​ ಕಾರ್ಡ್​ ತಿದ್ದುಪಡಿಗಾಗಿ ಕ್ಯೂ ನಿಂತಿರುವ ಜನರು
Image Credit source: tv9 kannada
Edited By:

Updated on: Sep 23, 2026 | 4:09 PM

ಕೊಪ್ಪಳ, ಸೆಪ್ಟೆಂಬರ್​​ 23: ಇದೀಗ ರಾಜ್ಯದ ಬಹುತೇಕ ಕಡೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸುವುದು ಬಹಳ ಮುಖ್ಯವಾಗಿದೆ. ರೇಷನ್ ಅಂಗಡಿಗಳ ಮುಂದೆ ಇ-ಕೆವೈಸಿ ಮಾಡಲು ಬಹುತೇಕ ಜನ ಕ್ಯೂ ನಿಲ್ಲುವಂತಾಗಿದೆ. ಸರ್ಕಾರ ಇ-ಕೆವೈಸಿ ಮಾಡಿಸಲು ದಿನಾಂಕವನ್ನು ಮುಂದೂಡಿದೆ. ಇ-ಕೆವೈಸಿಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಅದುವೇ ಆಧಾರ್ ಕಾರ್ಡ್. ಇದೀಗ ಆಧಾರ್ ಕಾರ್ಡ್ ತಿದ್ದುಪಡಿಗೆ ಜನ ಬೆಳಗ್ಗೆಯಿಂದಲೇ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ದುಡಿಮೆ ಬಿಟ್ಟು ಆಧಾರ್ ಕಾರ್ಡ್ ತಿದ್ದುಪಡಿಗೆ  ಜನ ಆಧಾರ್ ಸೆಂಟರ್​​ನಲ್ಲಿ ಕಾಯುತ್ತಿದ್ದಾರೆ.

ಬೆಳಗಿವ ಜಾವದಿಂದಲೇ ಕೇಂದ್ರಗಳ ಮುಂದೆ ಜನರು ಕ್ಯೂ 

ಕೊಪ್ಪಳದ ಡಿಸಿ ಕಚೇರಿಯಲ್ಲಿರುವ ಗ್ರಾಮ ಒನ್​​ ಕೇಂದ್ರದಲ್ಲಿ ಆಧಾರ್ ತಿದ್ದುಪಡಿಗಾಗಿ ಜನರು ಬೆಳಗ್ಗೆ ನಾಲ್ಕು ಗಂಟೆಯಿಂದ ಕಾಯುತ್ತಿದ್ದರೆ, ಇತ್ತ ಕೊಪ್ಪಳದ ತಹಶೀಲ್ದಾರ್ ಕಚೇರಿಯಲ್ಲಿರುವ ಆಧಾರ್ ಸೆಂಟರ್ ಮುಂಭಾಗದಲ್ಲಿ ಬೆಳಗಿನ ಜಾವ 6 ಗಂಟೆಯಿಂದಲೇ ಸಾರ್ವಜನಿಕರು ಕ್ಯೂ ನಿಲ್ಲುವಂತಾಗಿದೆ. ಸಣ್ಣಸಣ್ಣ ಮಕ್ಕಳನ್ನು ಎತ್ತಿಕೊಂಡು ದುಡಿಮೆಯನ್ನು ಬದಿಗೊತ್ತಿ ಆಧಾರ್ ತಿದ್ದುಪಡಿಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಹೊಸ ಮಾರ್ಗಸೂಚಿ: ಫಲಾನುಭವಿ ಮಹಿಳೆ ಜೊತೆಗೆ ಪತಿ ಆಧಾರ್​​ ಲಿಂಕ್​​ ಕೂಡ ಕಡ್ಡಾಯ

ಕೊಪ್ಪಳ ಸೇರಿ ಅಕ್ಕ ಪಕ್ಕದ ಹಳ್ಳಿಗಳಿಂದ ಬರುವ ಜನ ಆಧಾರ್ ಕಾರ್ಡ್ ತಿದ್ದುಪಡಿಗೆ ಕಾದು ಕುಳಿತಿದ್ದಾರೆ. ಜಿಲ್ಲಾಡಳಿತ ಭವನ ಹಾಗೂ ತಹಶೀಲ್ದಾರ್ ಕಚೇರಿ ಎರಡು ಕಡೆ ಜನ ಕ್ಯೂನಲ್ಲಿ ನಿಂತು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ.

ಕೈಕೊಟ್ಟಿ ಸರ್ವರ್: ಜನರು ಕಂಗಾಲು 

ಇನ್ನು ಜನರು ಸಾಲಿನಲ್ಲಿ ನಿಂತು ಗಂಟೆಗಟಲೇ ಕಾದರೂ ಆಧಾರ್ ತಿದ್ದುಪಡಿ ಕೆಲಸ ಮಾತ್ರ ಆಗುತ್ತಿಲ್ಲ. ಏಕೆಂದರೆ ಆಧಾರ್ ಸೆಂಟರ್‌ನಲ್ಲಿ ಸರ್ವರ್ ಕೈಕೊಟ್ಟಿದೆ. ಸರ್ವರ್​​​ ಇಲ್ಲದೆ ಕಾರಣ ಆಧಾರ್ ಅಪ್​ಡೇಟ್​  ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದ್ದು, ಬಂದ ದಾರಿಗೆ ಸುಂಕವಿಲ್ಲದಂತೆ ಜನರು ವಾಪಸ್​​ ಆಗುತ್ತಿದ್ದಾರೆ.

ಇದನ್ನೂ ಓದಿ: ಇ-ಅಸ್ತಿ 2.0 ಆಸ್ತಿ ದಾಖಲೆ ವ್ಯವಸ್ಥೆ ಲೋಕಾರ್ಪಣೆ: ನೀವಿರುವಲ್ಲಿಂದಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಕೊಪ್ಪಳ ನಗರದಲ್ಲಿ ಸುಮಾರು 11 ಕಡೆ ಆಧಾರ್ ಸೆಂಟರ್​ಗಳಿವೆ ಬಹುತೇಕ ಕಡೆ ಸರ್ವರ್​​ ಸಮಸ್ಯೆ ಉಂಟಾಗಿದೆ. ಇನ್ನೊಂದೆಡೆ ಆಧಾರ್ ಕಾರ್ಡ್ ತಿದ್ದುಪಡಿಗೆ ದಿನಕ್ಕೆ 50 ಕೂಪನ್​ ಮಾತ್ರ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಬೆಳಗಿನ ಜಾವ ನಾಲ್ಕು ಗಂಟೆಗೆ ಸಾರ್ವಜನಿಕರು ಕ್ಯೂ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆಧಾರ್ ಸೆಂಟರ್ ಸಿಬ್ಬಂದಿ ಹೇಳುವುದೇನು?

ರೇಷನ್ ಕಾರ್ಡ್ ಹಾಗೂ ಸಿಲಿಂಡರ್​ಗಾಗಿ ಇ-ಕೆವೈಸಿ ಮಾಡಿಸಲು ಜನರು ಮುಂದಾಗಿದ್ದಾರೆ. ಆದರೆ ಅದಕ್ಕೂ ಮೊದಲು ಆಧಾರ್ ತಿದ್ದುಪಡಿ ಮಾಡಿಕೊಂಡು ಬನ್ನಿ ಎಲ್ಲಾಗುತ್ತಿದೆ. ಹೀಗಾಗಿ ಬಹುತೇಕ ಜನ ಇದೀಗ ಆಧಾರ್ ತಿದ್ದುಪಡಿಗೆ ಮುಂದಾಗಿದ್ದಾರೆ. ‘ಸರ್ವರ್ ಇದ್ದರೆ ಒಂದು ತಿದ್ದುಪಡಿಗೆ 7ರಿಂದ 8 ನಿಮಿಷ ಬೇಕು. ಸರ್ವರ್ ಕೈ ಕೊಟ್ಟರೆ 15 ನಿಮಿಷ ಬೇಕು ತೆಗೆದುಕೊಳ್ಳುತ್ತದೆ’ ಎನ್ನುತ್ತಿದ್ದಾರೆ ಆಧಾರ್ ಸೆಂಟರ್ ಸಿಬ್ಬಂದಿ ಪ್ರದೀಪ್ ಅವರು.

ಹೆಚುವರಿ ಕೇಂದ್ರಗಳನ್ನ ತೆರೆಲು ಒತ್ತಾಯ 

ನಿತ್ಯ ಇದೇ ರೀತಿ ಸರ್ವರ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣ ಹೆಚುವರಿ ಕೇಂದ್ರಗಳನ್ನು ತೆರೆದು, ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

Aadhaar Correction Rush In Koppal: People Queue Up From 4 AM For Tokens
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us