ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಗಾದಿಗೆ ಕಿತ್ತಾಟ: ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ ಬಿ.ವೈ.ವಿಜಯೇಂದ್ರ

ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಯಾವುದೇ ಗೊಂದಲಯಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದು, ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಶಿಕಾರಿಪೂರದೊಂದಿಗೆ ಅವಿನಾಭವ ಸಂಬಂಧ ಇದೆ.

ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಗಾದಿಗೆ ಕಿತ್ತಾಟ: ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 25, 2022 | 11:39 AM

ಕೊಪ್ಪಳ: ರಾಜ್ಯದ ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಚುನಾವಣೆ (election) ಇನ್ನು ಎಂಟು ಹತ್ತು ತಿಂಗಳ ಇದೆ. ಇಗಲೇ ಕಿತ್ತಾಡತಿರೋದು ಹಾಸ್ಯಾಸ್ಪದ ಎಂದು ಜಿಲ್ಲೆಯಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದರು. ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಕಿತ್ತಾಟ ವಿಚಾರವಾಗಿ ಮಾತನಾಡಿದ ಅವರು ಈ ಕಿತ್ತಾಟದಿಂದ ನಮಗೆ ಲಾಭ ಎಂದು ಹೇಳಿದರು. ನಾವೇನು ವಿರೋಧ ಪಕ್ಷದವರ ಜಗಳದ ಮೇಲೆ ಅಧಿಕಾರಕ್ಕೆ ಬರಲ್ಲ‌. ಅವರ ಕಿತ್ತಾಡೋದು ನಮಗೆ ಸಂತೋಷ. ನಾನು ರಾಜ್ಯದ ಉಪಾಧ್ಯಕ್ಷ, ಮಂತ್ರಿ ಅಲ್ಲ. ನಾನು ಪಕ್ಷ ಒಪ್ಪಿಗೆ ಕೊಟ್ಟರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಯಾವುದೇ ಗೊಂದಲಯಿಲ್ಲ

ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಯಾವುದೇ ಗೊಂದಲಯಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದು, ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಶಿಕಾರಿಪೂರದೊಂದಿಗೆ ಅವಿನಾಭವ ಸಂಬಂಧ ಇದೆ. ಈ ಹಿನ್ನಲೆ ಅವರು ಘೋಷಣೆ ಮಾಡಿದ್ದಾರೆ. ಜೊತೆಗೆ ಪಕ್ಷ ಹೈಕಮಾಂಡ್ ತೀರ್ಮಾನ ಅಂತಾನೂ ಹೇಳಿದಾರೆ. ಸೂಕ್ತ ಸಮಯದಲ್ಲಿ ಪಕ್ಷ ತೀರ್ಮಾನ ಮಾಡತ್ತೆ. ಇದು ಭಾರತೀಯ ಜನತಾ ಪಾರ್ಟಿ. ಇಲ್ಲಿ ಉತ್ತರಾಧಿಕಾರಿ ಪ್ರಶ್ನೆ ಇಲ್ಲ. ಯಡಿಯೂರಪ್ಪನವರು 30/ 40 ವರ್ಷಗಳಿಂದ ಜೀವನ ಧಾರೆ ಎರೆದಿದ್ದಾರೆ. ಭಾರತೀಯ ಜನತಾ ಪಾರ್ಟಿ ಅವರಿಗೆ ಗೌರವ ಕೊಟ್ಟಿದೆ. ಬರೋ ದಿನಗಳಲ್ಲಿ ಯಡಿಯೂರಪ್ಪ ಶಕ್ತಿ ಉಪಯೋಗಿಸಿಕೊಂಡು ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಶಿಕಾರಿಪೂರ ಅಷ್ಟೆ ಅಲ್ಲ,224 ಕ್ಷೇತ್ರದ ಬಗ್ಗೆ ತೀರ್ಮಾನ ಮಾಡುತ್ತಾರೆ. ನನಗೆ ಇಡೀ ಕರ್ನಾಟಕದ ಒಲವು ಇದೆ. ನಿಮ್ಮ ಕ್ಷೇತ್ರ ಯಾವದೂ ಎಂದು ಮಾಧ್ಯಮದವರ ಪ್ರಶ್ನೆಗೆ ಇಡೀ ಕರ್ನಾಟಕವೇ ಎಂದು ವಿಜಯೇಂದ್ರ‌ ಹೇಳಿದರು.

ಗವಿ ಮಠಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ

ಕೊಪ್ಪಳದ ಗವಿ ಸಿದ್ದೇಶ್ವರ ಮಠಕ್ಕೆ ಬಿ.ವೈ ವಿಜಯೇಂದ್ರ ಭೇಟಿ ನೀಡಿದ್ದು, ಅಭಿನವ ಗವಿ ಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳೊಂದಿಗೆ ವಸತಿ ನಿಲಯದ ಬಗ್ಗೆ ವಿಜಯೇಂದ್ರ‌ ಚರ್ಚೆ ನಡೆಸಿದರು. ಬಿ.ಎಸ್ ಯಡಿಯೂರಪ್ಪ ಆರೋಗ್ಯ ಹೇಗಿದೆ ಎಂದು ಗವಿ ಸಿದ್ದೇಶ್ವರ ಶ್ರೀಗಳು‌ ಕೇಳಿದರು. ನಿತ್ಯ ವಾಕ್ ಮಾಡುತ್ತಾರೆ, ಚೆನ್ನಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಮಳೆ ಬಗ್ಗೆ ಗವಿ ಶ್ರೀಗಳೊಂದಿಗೆ ಚರ್ಚೆ ಮಾಡಿದ್ದು, ಸನ್ಮಾನ ಮಾಡಲು ವಿಜಯೇಂದ್ರ‌ ಮುಂದಾದಾಗ ಸನ್ಮಾನ ನಿರಕಾರಸಿ ಅದೇ ಹೂವಿನ ಹಾರದಿಂದ ವಿಜಯೇಂದ್ರ‌ಗೆ ಶ್ರೀಗಳು‌ ಸನ್ಮಾನ ಮಾಡಿದರು. ಈ ಪವಿತ್ರ ಕ್ಷೇತ್ರಕ್ಕೆ ಬರೋದೆ ಒಂದು ರೋಮಾಂಚನ. ಇಲ್ಲಿ ಬಂದ್ರೆ ನಮಗೆ ಶಕ್ತಿ ಬರತ್ತೆ ಎಂದು ವಿಜಯೇಂದ್ರ‌ ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada