ಕೊಪ್ಪಳ ಎಸ್​​ಪಿ ವರ್ಗಾವಣೆಗೆ ಕಾಂಗ್ರೆಸ್​ ಶಾಸಕರಿಂದಲೇ ವಿರೋಧ: ಶಿವರಾಜ್ ತಂಗಡಗಿ ವಿರುದ್ಧ ಆಕ್ರೋಶ

2023ರ ಫೆಬ್ರವರಿ 24ರಿಂದ ಕೊಪ್ಪಳ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಯಶೋಧಾ ಎಸ್​. ವಂಟಗೋಡಿ ಅವರನ್ನು ಕರ್ನಾಟಕ ಸರ್ಕಾರ ಗುರುವಾರ ವರ್ಗಾವಣೆ ಮಾಡಿದೆ. ಆದರೆ, ಈ ವರ್ಗಾವಣೆಗೆ ಕಾಂಗ್ರೆಸ್​ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದೆ.

ಕೊಪ್ಪಳ ಎಸ್​​ಪಿ ವರ್ಗಾವಣೆಗೆ ಕಾಂಗ್ರೆಸ್​ ಶಾಸಕರಿಂದಲೇ ವಿರೋಧ: ಶಿವರಾಜ್ ತಂಗಡಗಿ ವಿರುದ್ಧ ಆಕ್ರೋಶ
ಎಸ್​ಪಿ ಯಶೋಧಾ ಎಸ್​. ವಂಟಗೋಡಿ
Edited By: ವಿವೇಕ ಬಿರಾದಾರ

Updated on: Jul 05, 2024 | 11:57 AM

ಕೊಪ್ಪಳ, ಜುಲೈ 05: ಕರ್ನಾಟಕ ಸರ್ಕಾರ (Karnataka Government) ಗುರುವಾರ (ಜು.04) ರಂದು ಕೊಪ್ಪಳ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (Koppal SP) ಯಶೋಧಾ ಎಸ್​. ವಂಟಗೋಡಿ ಅವರನ್ನು ಲೋಕಾಯುಕ್ತದ (Lokayukta) ಎಸ್​ಪಿ ಸ್ಥಾನಕ್ಕೆ ಮಾಡಿ ಆದೇಶ ಹೊರಡಿಸಿದೆ. ಜಿಲೆಯ ನೂತನ ಎಸ್​​ಪಿಯಾಗಿ ರಾಮ್​ ಎಲ್​​. ಅರಸಿದ್ದಿ ಅವರನ್ನು ನೇಮಕ ಮಾಡಿದೆ. ಆದರೆ, ಯಶೋಧಾ ಎಸ್​. ವಂಟಗೋಡಿ ವರ್ಗಾವಣೆ ವಿಚಾರವಾಗಿ ಜಿಲ್ಲೆಯ ಕಾಂಗ್ರೆಸ್ (Congress)​ ಶಾಸಕರ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ.

ಯಶೋಧಾ ಎಸ್​. ವಂಟಗೋಡಿ ವರ್ಗಾವಣೆಗೆ ಜಿಲ್ಲೆಯ ಕೆಲ ಕಾಂಗ್ರೆಸ್​ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೆ ವರ್ಗಾವಣೆಯನ್ನು ತಡೆಹಿಡಿಯಬೇಕೆಂದು, ಹಾಲಿ ಎಸ್ಪಿಯವರನ್ನೇ ಮುಂದುವರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್​ ಅವರಿಗೆ ಮನವಿ ಮಾಡಿದ್ದಾರೆ. ಹೀಗಾಗಿ, ರಾಮ್​ ಎಲ್. ಅರಸಿದ್ದಿ ಅವರು ಅಧಿಕಾರ ಸ್ವೀಕಾರ ಮಾಡದಂತೆ ಗೃಹ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ ಬಯಲು ಮಾಡಿದ ಮೈಸೂರು ಡಿಸಿ ಕೆವಿ ರಾಜೇಂದ್ರ ವರ್ಗ

ಯಾವುದೇ ಕಾರಣಕ್ಕೂ ಹಾಲಿ ಎಸ್​ಪಿ ಅವರನ್ನು ಬದಲಾವಣೆ ಮಾಡಬಾರದು. ಹಾಲಿ ಎಸ್​ಪಿ ಅವರ ವರ್ಗಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾಡಿಸಿದ್ದಾರೆ. ತಮ್ಮ ತವರು ಕ್ಷೇತ್ರ ಇಲಕಲ್ ಮೂಲದವರನ್ನು ಎಸ್ಪಿಯಾಗಿ ಕರೆತಂದಿದ್ದಾರೆ ಅಂತ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚಿಗೆ ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಯಲ್ಲಿ ಮೇಜರ್​ ಸರ್ಜರಿ ನಡೆಸಿತ್ತು. ಬುಧವಾರ (ಜು.03) ರಂದು 25 ಐಪಿಎಸ್​ ಅಧಿಕಾರಿಗಳುನ್ನು ವರ್ಗಾವಣೆಗೊಳಿಸಿತ್ತು. ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತೆಯಾಗಿದ್ದ ರೇಣುಕಾ ಸುಕುಮಾರ್​ ಅವರನ್ನು ವರ್ಗಾವಣೆ ಮಾಡಿತ್ತು. ಈ ಜಾಗಕ್ಕೆ ಎನ್​. ಶಶಿಕುಮಾರ್​ ಅವರನ್ನು ನೇಮಕ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us