ಕೊಪ್ಪಳ: ಟೊಮೆಟೋ ದರ ಕುಸಿತ; ಬೆಳೆದ ಟೊಮೆಟೋವನ್ನೆಲ್ಲಾ ಬೀದಿಗೆ ಸುರಿದು ರೈತರಿಂದ ಆಕ್ರೋಶ
ಕೆಜಿ ಟೊಮೆಟೋವನ್ನು ಹತ್ತು ರೂಪಾಯಿಗೂ ಯಾರು ಕೇಳುತ್ತಿಲ್ಲ. ಬಾಡಿಗೆನೆ 40 ರೂಪಾಯಿ ಕೊಟ್ಟಿದ್ದೇವೆ. ಹೀಗಾಗಿ ಎಪಿಎಮ್ಸಿಗೆ ತಂದ ಅಷ್ಟು ಟೊಮೆಟೋ ರಸ್ತೆಗೆ ಚೆಲ್ಲಿದ್ದೇವೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ಟೊಮೆಟೋ ದರ ಕುಸಿತ ಹಿನ್ನೆಲೆ ಟೊಮೆಟೋ ರಸ್ತೆಗೆ ಚೆಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೊಪ್ಪಳ ಜಿಲ್ಲೆಯ ಬೆಳವಿನಾಳ ಎಪಿಎಮ್ಸಿ ಮಾರುಕಟ್ಟೆ ಬಳಿ ನಡೆದಿದೆ. ಕೆಜಿ ಟೊಮೆಟೋವನ್ನು ಹತ್ತು ರೂಪಾಯಿಗೂ ಯಾರು ಕೇಳುತ್ತಿಲ್ಲ. ಬಾಡಿಗೆನೆ 40 ರೂಪಾಯಿ ಕೊಟ್ಟಿದ್ದೇವೆ. ಹೀಗಾಗಿ ಎಪಿಎಮ್ಸಿಗೆ ತಂದ ಅಷ್ಟು ಟೊಮೆಟೋ ರಸ್ತೆಗೆ ಚೆಲ್ಲಿದ್ದೇವೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ: ಈರುಳ್ಳಿ ಬೆಳೆಗೆ ಕೊಳೆ ರೋಗದ ಭೀತಿ ಇಷ್ಟು ದಿನ ಬಾಗಲಕೋಟೆ ಜಿಲ್ಲೆಯ ರೈತರು ಪ್ರವಾಹಕ್ಕೆ ಸಿಲುಕಿ ಕಂಗಾಲಾಗಿದ್ದರು. ಬೆಳೆದು ನಿಂತ ಬೆಳೆಯ ಫಸಲು ಕೈಗೆ ಬರಬೇಕೆನ್ನುವಷ್ಟರಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಬೆಳೆ ಕೊಳೆತು ಹಾಳಾಗಿದೆ. ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ಗೂ ಅಧಿಕ ಬೆಳೆ ನಾಶವಾಗಿದೆ. ಆ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ರೈತರದ್ದಾಗಿದೆ. ಈ ಮಧ್ಯೆ ಮೋಡ ಕವಿದ ವಾತಾವರಣದಿಂದ ರೈತರು ಬೆಳೆದ ಈರುಳ್ಳಿ ಬೆಳೆ ಕೂಡ ಹಾಳಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬೀಳಗಿ ತಾಲೂಕಿನಲ್ಲಿ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ ಶುರುವಾಗಿದ್ದು, ರೈತರೇ ಈರುಳ್ಳಿ ಬೆಳೆ ನಾಶ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಮೋಡ ಮುಸುಕಿದ ವಾತಾವರಣ ರೈತರ ಪಾಲಿಗೆ ಸಂಕಷ್ಟ ತಂದಿದೆ. ಈರುಳ್ಳಿಯನ್ನು ಬಿತ್ತಿ ನಾಟಿ ಮಾಡಿದಾಗಿನಿಂದಲೂ ಆಗಾಗ ಸುರಿಯುವ ಜಿಟಿಜಿಟಿ ಮಳೆ, ಮೋಡ ಮುಸುಕಿದ ವಾತಾವರಣದ ಹಿನ್ನೆಲೆ, ಈರುಳ್ಳಿ ಬೆಳೆಗೆ ಸೂರ್ಯನ ಕಿರಣಗಳ ಸ್ಪರ್ಶ ತೀವ್ರ ಕಡಿಮೆಯಾಗಿದೆ. ಇದರಿಂದ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ರೋಗಬಾಧೆ ಕಾಣಿಸಿಕೊಂಡಿದೆ.
ಈರುಳ್ಳಿ ನಾಟಿ ಮಾಡಿ ಸುಮಾರು ಒಂದೆರಡು ತಿಂಗಳು ಕಳೆದಿದೆ. ಆರಂಭದಲ್ಲಿ ಚೆನ್ನಾಗಿಯೇ ಬಂದ ಈರುಳ್ಳಿ ಬೆಳೆಗೆ ಮಳೆರಾಯ ಕಂಟಕವಾಗಿದ್ದಾನೆ. ಹಲವೆಡೆ ಈರುಳ್ಳಿ ಬೆಳೆಯಲ್ಲಿ ಕೀಟಗಳು ಕೂಡ ಕಾಣಿಸಿಕೊಂಡಿವೆ. ಈರುಳ್ಳಿ ಗರಿಗಳ ಮೇಲೆ ಬಿಳಿ ಚುಕ್ಕಿ, ಗರಿ ಮುದುಡಿ ಬೀಳುವುದು, ಬಿಳಿ-ಹಳದಿ ಬಣ್ಣಕ್ಕೆ ತಿರುಗುವುದು. ಕೆಲವು ಈರುಳ್ಳಿ ಗರಿ ತುಂಡರಿಸಿ ನೆಲಕ್ಕೆ ಬೀಳುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ:
ಬೀದಿಗೆ ಬಂದ ಹೂವು ಬೆಳೆಗಾರರ ಬದುಕು; ರಸ್ತೆಯಲ್ಲಿಯೇ ಹೂವುಗಳನ್ನು ಸುರಿದು ರೈತರ ಆಕ್ರೋಶ
ಲಾಕ್ಡೌನ್ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ