ಶಿವರಾತ್ರಿ ಹಬ್ಬದ ಹಿನ್ನೆಲೆ ಕೊಪ್ಪಳದಲ್ಲಿ ಹಣ್ಣುಗಳ ಮೇಳ; ಗ್ರಾಹಕರು ಫುಲ್ ಖುಷ್
ಈ ಮುಂಚೆ ತೋಟಗಾರಿಕೆ ಇಲಾಖೆ ಕೇವಲ ದ್ರಾಕ್ಷಿ ಮೇಳ ಮಾತ್ರ ಆಯೋಜಿಸಿತ್ತು. ಆದರೆ ಇದೇ ಮೊದಲ ಬಾರಿಗೆ ದ್ರಾಕ್ಷಿ ಜೊತೆಗೆ ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣುಗಳ ಮೇಳವನ್ನು ಸಹ ಹಮ್ಮಿಕೊಂಡಿದೆ.
ಕೊಪ್ಪಳ: ಶಿವರಾತ್ರಿ (shivaratri) ಹಬ್ಬ ಅಂದರೆ ಅದು ಹಣ್ಣುಗಳ ಹಬ್ಬ. ಬೆಳಿಗ್ಗೆಯಿಂದ ಸಂಜೆವರೆಗೂ ಉಪವಾಸ (Fasting) ಇದ್ದು, ಸಂಜೆ ಹಣ್ಣುಗಳನ್ನು ತಿನ್ನುವ ಮೂಲಕ ಉಪವಾಸ ಅಂತ್ಯ ಮಾಡುತ್ತಾರೆ. ಹೀಗೆ ಶಿವರಾತ್ರಿ ಹಬ್ಬದಲ್ಲಿ ಹಣ್ಣುಗಳಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ. ಶಿವರಾತ್ರಿ ಹಬ್ಬದ ಹಿನ್ನೆಲೆ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಹಣ್ಣುಗಳ ಮೇಳ ಹಮ್ಮಿಕೊಂಡಿದೆ. ಈ ಮೇಳದಲ್ಲಿ ವಿಶೇಷವಾಗಿ ಕಲ್ಲಂಗಡಿ, ದ್ರಾಕ್ಷಿ, ಕರ್ಬೂಜ ಹಣ್ಣುಗಳ ಮೇಳವನ್ನು ಆಯೋಜಿಸಿದೆ. ಈ ಹಣ್ಣುಗಳ ಮೇಳಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಚಾಲನೆ ನೀಡಿದರು.
ಈ ಮುಂಚೆ ತೋಟಗಾರಿಕೆ ಇಲಾಖೆ ಕೇವಲ ದ್ರಾಕ್ಷಿ ಮೇಳ ಮಾತ್ರ ಆಯೋಜಿಸಿತ್ತು. ಆದರೆ ಇದೇ ಮೊದಲ ಬಾರಿಗೆ ದ್ರಾಕ್ಷಿ ಜೊತೆಗೆ ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣುಗಳ ಮೇಳವನ್ನು ಸಹ ಹಮ್ಮಿಕೊಂಡಿದೆ. ನಾಲ್ಕು ದಿನಗಳ ಕಾಲ ಹಣ್ಣಿನ ಮೇಳ ನಡೆಯುತ್ತಿದ್ದು, ಮೇಳದಲ್ಲಿ ದ್ರಾಕ್ಷಿ, ಕರ್ಬೂಜ, ಕಲ್ಲಂಗಡಿ, ಅಣಬೆ ಜೊತೆಗೆ ಅದರ ಉತ್ಪನ್ನಗಳು ಸಿಗುತ್ತಿವೆ. ದ್ರಾಕ್ಷಿಯಿಂದ ತಯಾರಿಸಿದ ವೈನ್ ಹಾಗೂ ಶುದ್ಧ ಜೇನುತುಪ್ಪ ಮಾರಾಟಕ್ಕೆ ಇಡಲಾಗಿದೆ. ನಾಲ್ಕು ದಿನಗಳ ಅವಧಿಯಲ್ಲಿ ಸುಮಾರು 40 ಲಕ್ಷ ವಹಿವಾಟ ಆಗಲಿದೆ ಅಂತ ಅಧಿಕಾರಿಗಳು ತಿಳಿದ್ದಾರೆ.
ಹಣ್ಣಿನ ಮೇಳದಲ್ಲಿ ಜಿಲ್ಲೆಯ ವಿವಿಧ 10 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದಾರೆ. ಇವರೆಲ್ಲ ತಮ್ಮ ತೋಟದಲ್ಲಿ ಬೆಳೆದ ದ್ರಾಕ್ಷಿ, ಕಲ್ಲಂಗಡಿ, ಕರ್ಬೂಜ, ಪೇರಲೆ, ಅಂಜೂರ ಹಣ್ಣುಗಳನ್ನು ಮಾರಾಟ ಮಾಡಲು ತಂದಿದ್ದಾರೆ. ಅದರಲ್ಲಿ ವಿಶೇಷವಾಗಿ ಅರಿಶಿನ ಬಣ್ಣದ ಕಲ್ಲಂಗಡಿ ಹಣ್ಣು ಎಲ್ಲರನ್ನು ಆಕರ್ಷಿಸುತ್ತಿದೆ. ವಿವಿಧ ಹಣ್ಣುಗಳಿಗೆ ಪ್ರತಿ ಕೆಜಿಗೆ ಇಂತಿಷ್ಟು ಅಂತ ತೋಟಗಾರಿಕೆ ಇಲಾಖೆ ದರನಿಗದಿ ಮಾಡಿದ್ದು, ರೈತರು ಗ್ರಾಹಕರಿಗೆ ನಿಗದಿ ಮಾಡಿರುವ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಹಣ್ಣುಗಳು ಒಂದೇ ಸೂರಿನಡಿ ಸಿಗುತ್ತಿರುವುದರಿಂದ ಜಿಲ್ಲೆಯಲ್ಲಿ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲ ಕಡಿಮೆ ಹಾಗೂ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಕೊಳ್ಳಲು ತೋಟಗಾರಿಕೆ ಇಲಾಖೆಯ ಆಯೋಜಿಸಿರುವ ಹಣ್ಣಿನ ಮೇಳಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ
Poetry: ಅವಿತಕವಿತೆ; ಕವಿತೆ ನನಗೆ ಬಿಕ್ಕುವ ಆಗಸದಿ ಬೆಳಕ ಹೊತ್ತು ಬರುವ ಸೂರ್ಯ