AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಶಾಲಾ ಮಕ್ಕಳಿದ್ದ ಟಾಟಾ ಏಸ್‌ ಪಲ್ಟಿ, ಮೂವತ್ತು ಮಕ್ಕಳಿಗೆ ಗಾಯ

ಸಂಚಾರ ಪೊಲೀಸರು ಎಷ್ಟೇ ಕಠಿಣ ಕ್ರಮಕೈಗೊಂಡರು ಅಪಘಾತಗಳ ಸಂಖ್ಯೆ ಏರುತ್ತಲೇ ಇದೆ. ಇದೀಗ ಕೊಪ್ಪಳ(Koppal) ತಾಲೂಕಿನ ಹಾಲವರ್ತಿ ಕ್ರಾಸ್ ಬಳಿ ಶಾಲಾ ಮಕ್ಕಳಿದ್ದ ಟಾಟಾ ಏಸ್‌ ಪಲ್ಟಿಯಾಗಿ ಮೂವತ್ತು ಮಕ್ಕಳಿಗೆ ಗಾಯವಾದ ಘಟನೆ ನಡೆದಿದೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಕೊಪ್ಪಳ: ಶಾಲಾ ಮಕ್ಕಳಿದ್ದ ಟಾಟಾ ಏಸ್‌ ಪಲ್ಟಿ, ಮೂವತ್ತು ಮಕ್ಕಳಿಗೆ ಗಾಯ
ಶಾಲಾ ಮಕ್ಕಳಿದ್ದ ಟಾಟಾ ಏಸ್‌ ಪಲ್ಟಿ
ಸಂಜಯ್ಯಾ ಚಿಕ್ಕಮಠ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Sep 03, 2024 | 7:52 PM

Share

ಕೊಪ್ಪಳ, ಸೆ.03: ಶಾಲಾ ಮಕ್ಕಳಿದ್ದ ಟಾಟಾ ಏಸ್‌ ಪಲ್ಟಿಯಾಗಿ ಮೂವತ್ತು ಮಕ್ಕಳಿಗೆ ಗಾಯವಾದ ಘಟನೆ ಕೊಪ್ಪಳ(Koppal) ತಾಲೂಕಿನ ಹಾಲವರ್ತಿ ಕ್ರಾಸ್ ಬಳಿ ನಡೆದಿದೆ. ಕ್ರೀಡಾಕೂಟಕ್ಕೆಂದು ಬಂದಿದ್ದ ಗುಳದಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು, ಕೊಪ್ಪಳ ನಗರದ‌ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಮುಗಿಸಿಕೊಂಡು ಮರಳಿ ಹೋಗುತ್ತಿದ್ದ ವೇಳೆ ಟಾಟಾ ಏಸ್ ವಾಹನಕ್ಕೆ ಆರ್​ಟಿಓ ಅಧಿಕಾರಿ ನಿಲ್ಲಿಸಲು ಸೂಚನೆ ನೀಡಿದ್ದಾನೆ. ಹೀಗಾಗಿ ದಿಢೀರನೆ ನಿಲ್ಲಿಸಲು ಹೋಗಿದ್ದರಿಂದ ಟಾಟಾ ಏಸ್ ಪಲ್ಟಿಯಾಗಿದೆ ಎನ್ನಲಾಗುತ್ತಿದೆ.

ಆರ್ ಟಿ ಓ ಅಧಿಕಾರಿ ಜೊತೆ ಸ್ಥಳೀಯರ ವಾಗ್ವಾದ

ಇನ್ನು ದುರ್ಘಟನೆ ನಡೆಯುತ್ತಿದ್ದಂತೆ ಆರ್​ಟಿಓ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡ ಸ್ಥಳೀಯರು, ಅಧಿಕಾರಿಯನ್ನು ಹಿಡಿದು ತಳ್ಳಾಡಿದ್ದಾರೆ. ಆರ್​ಟಿಓ ಅಧಿಕಾರಿಯಿಂದಲೇ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಸಧ್ಯ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:ಮಧ್ಯರಸ್ತೆಯಲ್ಲಿ ಕುರ್ಚಿ ಹಾಕಿ ಕುಳಿತವನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಟ್ರಕ್

ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; ಸವಾರನಿಗೆ ಕಾಲು ಮುರಿತ

ರಾಯಚೂರು: ಯರಗೇರಾ ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರನ ಕಾಲು ಮುರಿದು ಹೋಗಿದೆ. ಬಸ್​ ನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಗಾಯಾಳು ಬೈಕ್ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯಲ್ಲಿ ರಾಯಚೂರಿನಿಂದ ಮಂತ್ರಾಲಯ ಕಡೆ ಹೊರಟಿದ್ದಾಗ ಬಸ್ ಡಿಕ್ಕಿಯಾದೆ. ಈ ಕುರಿತು ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕ್ಕಿ ಹೊಡೆದು ಬೀಳಿಸಿದನೆಂದು ಕಾರು ಚಾಲಕನಿಗೆ ಬೈಕ್​ ಸವಾರ ಥಳಿತ

ಬೆಂಗಳೂರು: ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಮುಂದುವರೆದಿದ್ದು, ಕನಕಪುರ ರಸ್ತೆಯ ಸಾರಕ್ಕಿ ಬಳಿ ಡಿಕ್ಕಿ ಹೊಡೆದು ಬೀಳಿಸಿದನೆಂದು ಕಾರು ಚಾಲಕನಿಗೆ ಬೈಕ್​ ಸವಾರ ಥಳಿಸಿದ ಘಟನೆ ನಡೆದಿದೆ. ದಿಢೀರ್​ ಸ್ವಿಪ್ಟ್ ಕಾರು ಡಿಕ್ಕಿಯಾಗಿ ಬೈಕ್​ನಿಂದ ಕೆಳಗೆ ಬಿದ್ದ ಸವಾರ, ಮೇಲೆದ್ದು ಬಂದು ಕಾರು ಚಾಲಕನಿಗೆ ಥಳಿಸಿದ ವಿಡಿಯೋ ಹಿಂಬದಿ ಕಾರಿನ ಡ್ಯಾಶ್​ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ವಿಡಿಯೋ ಎಕ್ಸ್​ ಖಾತೆಯಲ್ಲಿ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Tue, 3 September 24