AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppal News: ಸ್ವಂತ ಖರ್ಚಿನಲ್ಲೆ ಅಂಗನವಾಡಿ, ಸರ್ಕಾರಿ ಶಾಲೆಗಳಿಗೆ ಅಭಿವೃದ್ಧಿಯ ಸ್ಪರ್ಶ ನೀಡಿದ ಕೊಪ್ಪಳ ಜಿಪಂ ಕಾರ್ಯದರ್ಶಿ

ಪ್ರಾಥಮಿಕ ಶಿಕ್ಷಣದ ಕಲಿಕೆ ಸಂದರ್ಭದಲ್ಲಿ ಶಾಲೆಯ ಕಟ್ಟಡದ ಛಾವಣಿ ತುಣುಕು ಕುಸಿದು ತಲೆಮೇಲೆ ಬಿದ್ದು ಗಾಯಗೊಂಡಿದ್ದ ಅವರು, ಈ ಘಟನೆಯಿಂದಲೇ ಪ್ರೇrಣೆಗೊಂಡು, ಸ್ವ-ಇಚ್ಛೆ ಹಾಗೂ ಸ್ವಂತ ಖರ್ಚಿನಲ್ಲಿ ಸರಕಾರಿ ಶಾಲೆಗಳನ್ನು ಸುಸಜ್ಜಿತವಾಗಿಡಲು ಮುಂದಾಗಿದ್ದಾರೆ.

Koppal News: ಸ್ವಂತ ಖರ್ಚಿನಲ್ಲೆ ಅಂಗನವಾಡಿ, ಸರ್ಕಾರಿ ಶಾಲೆಗಳಿಗೆ ಅಭಿವೃದ್ಧಿಯ ಸ್ಪರ್ಶ ನೀಡಿದ ಕೊಪ್ಪಳ ಜಿಪಂ ಕಾರ್ಯದರ್ಶಿ
ಸಾಂದರ್ಭಿಕ ಚಿತ್ರ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Jul 22, 2023 | 6:20 PM

Share

ಕೊಪ್ಪಳ: ಕರ್ತವ್ಯದ ಜತೆಗೆ ಸ್ವಂತ ಖರ್ಚಿನಲ್ಲಿ ಸರಕಾರಿ ಶಾಲೆಗಳ (government Schools) ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಇಲ್ಲೊಬ್ಬರು ಅಧಿಕಾರಿ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ. ಹೌದು, ಕೊಪ್ಪಳ ಜಿಲ್ಲಾ (Koppal) ಪಂಚಾಯಿತಿಯ ಉಪ ಕಾರ್ಯದರ್ಶಿಯಾಗಿರೋ ಮಲ್ಲಪ್ಪ ತೊದಲಬಾಗಿ ಸರಕಾರಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಮಾಡಲುತ್ತಿದ್ದಾರೆ. ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಶಾಳೆಗಳಿಗೆ ಜೀವಕಳೆ ನೀಡಿದ್ದ ಈ ಅಧಿಕಾರಿ, ಸದ್ಯ ಕೊಪ್ಪಳ ಜಿಲ್ಲೆಯಲ್ಲೂ ಇಂದಿನಿಂದ ತಮ್ಮ ಕನಸು ನನಸಾಗಿಸಲು ಆರಂಭಿಸಲಿದ್ದು, ಅದಕ್ಕಾಗಿ ಕೊಪ್ಪಳ ತಾಲೂಕಿನ ಕುಟುಗನಹಳ್ಳಿಯ ಅಂಗನವಾಡಿ‌ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತಮ್ಮ ಪ್ರಾಥಮಿಕ ಶಿಕ್ಷಣದ ಕಲಿಕೆ ಸಂದರ್ಭದಲ್ಲಿ ಶಾಲೆಯ ಕಟ್ಟಡದ ಛಾವಣಿ ತುಣುಕು ಕುಸಿದು ತಲೆಮೇಲೆ ಬಿದ್ದು ಗಾಯಗೊಂಡಿದ್ದ ಅವರು, ಈ ಘಟನೆಯಿಂದಲೇ ಪ್ರೇrಣೆಗೊಂಡು, ಸ್ವ-ಇಚ್ಛೆ ಹಾಗೂ ಸ್ವಂತ ಖರ್ಚಿನಲ್ಲಿ ಸರಕಾರಿ ಶಾಲೆಗಳನ್ನು ಸುಸಜ್ಜಿತವಾಗಿಡಲು ಮುಂದಾಗಿದ್ದಾರೆ.

ನಾನಾ ಕಾರ್ಯಕ್ರಮಗಳು

ಜಿಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಅವರು, ಸ್ವ ಇಚ್ಛೆಯಿಂದ ಬರುವ ಸರಕಾರಿ ನೌಕರರನ್ನು ಮಾತ್ರ ಒಗ್ಗೂಡಿಸಿಕೊಂಡು, ಶಾಲಾ ಮೈದಾನ ಸ್ವಚ್ಛತೆ, ಶಾಲೆಗಳಿಗೆ ಬಣ್ಣ ಹಚ್ಚುವುದು, ಸಸಿ ನೆಡುವುದು, ಹೆಣ್ಣು ಮಕ್ಕಳಿಗೆ ಸಸಿಗಳನ್ನು ದತ್ತು ನೀಡಿ ಪೋಷಿಸಲು ಪ್ರೇರೇಪಿಸುವುದು, ಉಚಿತ ಆರೋಗ್ಯ ತಪಾಸಣಾ ಶಿಬಿರ, ಆಟೋಟಪಗಳು, ಭಾರತೀಯ ಸಂಸ್ಕೃತಿ, ಕಲೆಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

66 ಶಾಲೆಗಳಿಗೆ ಅಭಿವೃದ್ಧಿ ಸ್ಪರ್ಶ

ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲೂ ಜಿಲ್ಲಾ ಪಂಚಾಯತ್ ಉಪ‌ ಕಾರ್ಯದರ್ಶಿಯಾಗಿದ್ದ ಮಲ್ಲಪ್ಪ ತೊದಲಬಾಗಿ ಅವರು, ನಾಲ್ಕು ಜನರೊಂದಿಗೆ ತಂಡವನ್ನು ಮಾಡಿ, 200ಕ್ಕೂ ಹೆಚ್ವು ನೌಕರರ ಗುಂಪನ್ನು ರಚಿಸಿದ್ದಾರೆ. ಈ ಮೂಲಕ ಆ ಜಿಲ್ಲೆಯಲ್ಲಿ 66 ಸರಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ, ಸಸಿಗಳ ಪೋಷಣೆ ಹೀಗೆ ಅನೇಕ ಕಾರ್ಗಯಳನ್ನು ಯಶಸ್ವಿಯಾಗಿ‌ ಮಾಡಿದ್ದು, ಖಾಸಗಿ ಮಾಧ್ಯಮ ಸಂಸ್ಥೆಗಳು, ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಕೊರಳೊಡ್ಡಿದ್ದಾರೆ. ಇದೀಗ ಮೊನ್ನೆಯಷ್ಟೆ ಕೊಪ್ಪಳ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿರೋ ಮಲ್ಲಪ್ಪ ಅವರು,ಇಲ್ಲಿಯು ತಮ್ಮ ಸೇವೆ ಮುಂದುವರೆಸಿದ್ದಾರೆ. ತಾವು ಯಾವ ಜಿಲ್ಲೆಗೂ ಹೊದ್ರು ಸರಿ ಸರ್ಕಾರಿ ಶಾಲೆಗಳನ್ನ ಉನ್ನತಿಕರಣಗೊಳಿಸೋದು,ಅವುಗಳಿಗೆ ಬಣ್ಣದ ಮೂಲಕ ಹೊಸ ಸ್ಪರ್ಶ ನೀಡೊದನ್ನ ತಮ್ಮ ಕಾಯವನ್ನಾಗಿಸಿದ್ದಾರೆ.

ನಗದು ರೂಪದ ಸಹಾಯ ಬೇಡ

ಯಾವುದೇ ರಾಜಕೀಯ ವ್ಯಕ್ತಿಗಳಿಂದ ಅಥವಾ ಪ್ರಭಾವಿಗಳ ಬಳಿ ಸಹಾಯ ಕೇಳದೇ, ಸರಕಾರಿ ನೌಕರರ ಸಹಾಯದಿಂದ ಮಾತ್ರ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತದೆ. ಅಲ್ಲದೇ ಯಾರ ಬಳಿಯಿಂದಲೂ ನಗದು ಹಣ ಪಡೆಯದೇ ನೌಕರರೇ ಖುದ್ದು ಸ್ವ-ಇಚ್ಛೆಯಿಂದ ತರುವ ಬಣ್ಣ, ಸಸಿಗಳು ಹಾಗೂ ಇನ್ನೀತರ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ. ಇನ್ನೂ ಈ ಅಭಿವೃದ್ಧಿ ಕಾಯಕ ಸರಕಾರಿ ರಜೆ ದಿನಗಳಲ್ಲಷ್ಟೇ ಮಾಡಲಾಗುತ್ತದೆ.

ಸರಕಾರಿ ನೌಕರಿ ಇದ್ದರೆ ನಿಶ್ಚಿಂತೆಯಿಂದ ಕುಟುಂಬದೊಡನೆ ಬದುಕಬಹುದು ಎನ್ನುವ ಹಲವರ ಮಧ್ಯೆ ಸರಕಾರಿ ರಜಾ ದಿನಗಳಲ್ಲಿ ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಕೆಎಎಸ್ ಅಧಿಕಾರಿ ಮಲ್ಲಪ್ಪ ತೊದಲಬಾಗಿ ಇತರೆ ಸರಕಾರಿ ನೌಕರರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: Yadagiri News: ಯಾದಗಿರಿ ದೊಡ್ಡ ತಾಂಡದ ಸರ್ಕಾರಿ ಶಾಲೆಯಲ್ಲಿ ರಾತ್ರಿ ವೇಳೆ ಶಿಕ್ಷಕರೇ ಮಕ್ಕಳ ಜೊತೆ ವಾಸ್ತವ್ಯ ಹೂಡುತ್ತಾರೆ! ಯಾಕೆ ಗೊತ್ತಾ?

ಮಕ್ಕಳ ಕಲಿಕೆಗೆ ಸರಕಾರಿ ಶಾಲೆಗಳು ಸುಸಜ್ಜಿತವಾಗಿರಬೇಕೆಂಬ ಉದ್ದೇಶದಿಂದ ಈ‌ ಕಾರ್ಯವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಯಾರಿಂದಲೂ‌ ಹಣ ಪಡೆಯುತ್ತಿಲ್ಲ. ಇಲ್ಲಿವರೆಗೂ ಮಾಡಿದ ಕಾರ್ಯಗಳಿಗೆ ಸಹಾಯದ ಅಭಾವ ಎದುರಾಗಿಲ್ಲ‌ ಎನ್ನುತ್ತಾರೆ ಮಲ್ಲಪ್ಪ ತೊದಲಬಾಗಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Sat, 22 July 23