
ಕೊಪ್ಪಳ, ಜೂನ್ 29: ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ವೆಂಕಟಗಿರಿ ಗ್ರಾಮದ ಹೊರವಲಯದಲ್ಲಿ ನಾಗರಾಜ್ ಎಂಬುವರ ಕೊಲೆಯಾಗಿತ್ತು. ಹನುಮಂತಪ್ಪ ಎಂಬವನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದನು. ಕೊಲೆ ಮಾಡಿದ ನಂತರ ಹನುಮಂತಪ್ಪ ಕೇಕೆ ಹಾಕುತ್ತಾ ಬಂದು ಕನಕಗಿರಿ ಪೊಲೀಸ್ ಠಾಣೆ ಪೊಲೀಸರ ಎದುರು ಶರಣಾಗಿದ್ದಾನೆ.
ಹತ್ಯೆಯಾದ ನಾಗರಾಜ್ ಹಾಗೂ ಕೊಲೆ ಮಾಡಿದ ಆರೋಪಿ ಹನುಮಂತಪ್ಪ ಗಂಗಾವತಿ ತಾಲೂಕಿನ ವೀಠಲಾಪುರ ಗ್ರಾಮದ ನಿವಾಸಿಗಳು. ಇಬ್ಬರೂ ಅಕ್ಕ-ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ಸ್ನೇಹಿತರಾಗಿದ್ದರು, ಒಂದೇ ತಟ್ಟೆಯಲ್ಲಿ ಊಟ ಮಾಡಿ ಬೆಳೆದವರು. ಏಳು ವರ್ಷಗಳ ಹಿಂದೆ ಆರೋಪಿ ಹನುಮಂತಪ್ಪನ ಮದುವೆಯಾಗಿತ್ತು. ಮದುವೆಯಾದ ಕೆಲ ದಿನಗಳ ಕಾಲ ದಂಪತಿ ಚೆನ್ನಾಗಿಯೇ ಇದ್ದರು. ಆದರೆ, ಒಂದು ದಿನ ಆರೋಪಿ ಹನುಮಂತಪ್ಪ ಕುರಿ ಮೇಯಿಸಲು ಹೋದಾಗ ತನ್ನ ಹೆಂಡತಿ ನಾಗರಾಜ್ ಜೊತೆ ಇದ್ದಿದ್ದನ್ನು ಕಂಡಿದ್ದಾನೆ. ಅಲ್ಲಿಂದ ಸ್ನೇಹಿತರ ನಡುವೆ ಹಗೆತನ ಬೆಳೆದಿತ್ತು.
ಶನಿವಾರ (ಜೂ.29) ರಂದು ನಾಗರಾಜ್ ಗಂಗಾವತಿಗೆ ಹೋಗುತ್ತಿದ್ದಾನು. ಈ ವಿಚಾರ ತಿಳಿದ ಹನುಮಂತಪ್ಪ ಮತ್ತು ಈತನ ಸಹೋದರ ಸಿದ್ದರಾಮೇಶ, ನಾಗರಾಜ್ನ ಬೈಕ್ಗೆ ಅಡ್ಡ ಹಾಕಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ ಹನುಮಂತಪ್ಪ ಕನಕಗಿರಿ ಠಾಣೆಗೆ ಬಂದು ಶರಣಾಗಿದ್ದಾನೆ. ರವಿವಾರ (ಜೂ.29) ಇನ್ನೋರ್ವ ಆರೋಪಿ ಸಿದ್ದರಾಮೇಶನನ್ನು ಪೊಲೀಸರು ಬಂಧಿಸಿದ್ದಾರೆ.
ನನ್ನ ಮಗನನ್ನು ಆರು ಜನ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೃತ ನಾಗರಾಜ್ ತಾಯಿ ಆರೋಪಿಸಿದ್ದಾರೆ. ಯಾವದೇ ಅಕ್ರಮ ಸಂಭಂದ ಇಲ್ಲ, ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.
ನಾಗರಾಜ್ ಕಳೆದ ಕೆಲವು ವರ್ಷಗಳಿಂದ ಹನುಮಂತಪ್ಪನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ತನ್ನ ಪತ್ನಿಯ ಸಹವಾಸ ಬಿಡುವಂತೆ ಹನುಮಂತಪ್ಪ ಹಲವು ಬಾರಿ ನಾಗರಾಜ್ಗೆ ವಾರ್ನಿಂಗ್ ಕೂಡ ಮಾಡಿದ್ದನಂತೆ. ಮಾತು ಕೇಳದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲೂ ರಾಜಿ ಸಂಧಾನ ಮಾಡಲಾಗಿತ್ತು. ಆದರೂ ಕೂಡ ತನ್ನ ಪತ್ನಿಯ ಸಹವಾಸ ಬಿಡದ ಹಿನ್ನೆಲೆಯಲ್ಲಿ ಶನಿವಾರ ಸಂಜೆ 4 ಗಂಟೆಗೆ ನಾಗರಾಜ್ ಗಂಗಾವತಿಗೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಹೋದ ಹನುಮಂತಪ್ಪ ಬೈಕ್ಗೆ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ.
ನಾಗರಾಜ್ ಸ್ಥಳದಲ್ಲಿ ಬೈಕ್ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನು ಹತ್ತಿದ ಹನುಮಂತಪ್ಪ ಹಾಗೂ ಆತನ ಸಹೋದರ ಸಿದ್ದರಾಮೇಶ ಹಿಂಬಾಲಿಸಿಕೊಂಡು ಹೋಗಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯ ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ….ಅದೇನು ಕಿಲಾಡಿತನ: ಬುರ್ಖಾ ಮಹಿಳೆಯರ ಕರಾಮತ್ತು ಸಿಸಿಟಿವಿಯಲ್ಲಿ
ನಾಗರಾಜ್, ನನ್ನ ಸೊಸೆ ಜೊತೆ ಅಕ್ರಮ ಸಂಬಂಧ ಹೊಂದಿದ್ದು ನಿಜ. ಕೆಲವು ಬಾರಿ ಸಿಕ್ಕಿಹಾಕಿಕೊಂಡಿದ್ದರು. ಹೀಗಾಗಿ ಸಿಟ್ಟಿತ್ತು ಎಂದು ಆರೋಪಿ ಹನುಮಂತಪ್ಪ ತಂದೆ ಹೇಳಿದ್ದಾರೆ. ತನ್ನ ಹೆಂಡತಿ ಇದ್ದರೂ, ಪಕ್ಕದ ಮನೆಯವರ ಹೆಂಡತಿ ಮೇಲೆ ಕಣ್ಣ ಹಾಕಿದವ ಬರ್ಬರವಾಗಿ ಕೊಲೆಯಾಗಿದ್ದಾನೆ. ಸದ್ಯ ನಾಗರಾಜ್ನನ್ನು ಕೊಲೆ ಮಾಡಿದ ಅಣ್ಣ-ತಮ್ಮಂದಿರು ಪೊಲೀಸರ ಅತಿಥಿಯಾಗಿದ್ದಾರೆ. ಈ ಭೀಕರ ಕೊಲೆಯಿಂದ ಇಡೀ ವಿಠಲಾಪೂರ ಗ್ರಾಮವೇ ಸ್ತಬ್ಧವಾಗಿತ್ತು.