ಕೊಪ್ಪಳ: ಹಾಲಪ್ಪ ಆಚಾರ್ ಸೋಲಬೇಕೆಂದು ಹೆಸರು ಬರೆದಿಟ್ಟು ವಾಮಾಚಾರ; ಪತ್ತೆಯಾದ ವಸ್ತುಗಳನ್ನು ನೋಡಿ ಶಾಕ್ ಆದ ಗ್ರಾಮಸ್ಥರು

ಹಾಲಪ್ಪ ಆಚಾರ್ ಸೋಲಬೇಕು ಎಂದು ಹೆಸರು ಬರೆದು ಕೆಲ ವಿರೋಧಿಗಳು ವಾಮಾಚಾರ ಮಾಡಿಸಿದ್ದು ಯಲಬುರ್ಗಾ ಕ್ಷೇತ್ರದ ಎರಡ್ಮೂರು ಕಡೆಗಳಲ್ಲಿ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ.

ಕೊಪ್ಪಳ: ಹಾಲಪ್ಪ ಆಚಾರ್ ಸೋಲಬೇಕೆಂದು ಹೆಸರು ಬರೆದಿಟ್ಟು ವಾಮಾಚಾರ; ಪತ್ತೆಯಾದ ವಸ್ತುಗಳನ್ನು ನೋಡಿ ಶಾಕ್ ಆದ ಗ್ರಾಮಸ್ಥರು
ವಾಮಾಚಾರದ ವಸ್ತುಗಳು
ಆಯೇಷಾ ಬಾನು

Updated on: Mar 25, 2023 | 1:18 PM

ಕೊಪ್ಪಳ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Elections 2023) ಹೊತ್ತಲ್ಲೆ ಮಾಟ ಮಂತ್ರದ ಚಾಳಿ ಶುರುವಾಗಿದೆ. ಸಚಿವ ಹಾಲಪ್ಪ ಆಚಾರ್(Halappa Achar) ಸೋಲಿಸಲು ವಾಮಾಚಾರ ಮಾಡಿಸಲಾಗಿದೆ. ಹಾಲಪ್ಪ ಆಚಾರ್ ಸೋಲಬೇಕು ಎಂದು ಹೆಸರು ಬರೆದು ಕೆಲ ವಿರೋಧಿಗಳು ವಾಮಾಚಾರ ಮಾಡಿಸಿದ್ದು ಯಲಬುರ್ಗಾ ಕ್ಷೇತ್ರದ ಎರಡ್ಮೂರು ಕಡೆಗಳಲ್ಲಿ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ನಿಲೋಗಲ್, ಮಲಕಸಮುದ್ರ ಗ್ರಾಮದಲ್ಲಿ ತಾಮ್ರದ ವಸ್ತುವಿನಲ್ಲಿ ಸಚಿವ ಹಾಲಪ್ಪ ಆಚಾರ್, ಅವರ ಅಳಿಯ ಗೌರ ಬಸವರಾಜ ಹೆಸರು ಬರೆದು ವಾಮಾಚಾರ ಮಾಡಿಸಲಾಗಿದೆ.

ವಾಮಾಚಾರದ ವಸ್ತುಗಳನ್ನು ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಸಚಿವ ಹಾಲಪ್ಪ ಆಚಾರ್ ಹಾಗೂ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ವಿರುದ್ದ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ನೇರವಾಗಿ ಬಂದು ಚುನಾವಣೆ ಎದುರಿಸಿ. ಈ ರೀತಿ ವಾಮಾಚಾರ ಮಾಡಿ ಏನು ಸಾಧಿಸಲಾಗದು ಎಂದು ಕಿಡಿಕಾರಿದ್ದಾರೆ. ಇಂತಹ ಕೃತ್ಯ ಎಸಗಿರುವವರ ವಿರುದ್ದ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Shocking News: ವಾಮಾಚಾರ ಮಾಡುತ್ತಿದ್ದಾರೆ ಎಂದು ಮಹಿಳೆಯರಿಗೆ ಬಲವಂತವಾಗಿ ಮಲಮೂತ್ರವನ್ನು ತಿನ್ನಿಸಿದ ಗ್ರಾಮಸ್ಥರು

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us