AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ವ್ಯಕ್ತಿಗೆ ಚಪ್ಪಲಿ ಹಾಕಿ ಮೆರವಣಿಗೆ! 55 ಜನರ ವಿರುದ್ಧ ದೂರು ದಾಖಲು

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಪ್ರಕಾಶ್ ಪೂಜಾರ್ ಎಂಬುವವರಿಗೆ ಚಪ್ಪಲಿಯಿಂದ ಥಳಿಸಿ, ನಂತರ ಚಪ್ಪಲಿ ಹಾಕಿ ಮೆರವಣಿಗೆ ಮಾಡಿದ್ದರು. ರತ್ನವ್ವ ಎಂಬ ಮಹಿಳೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆ ಪ್ರಕಾಶ್ ಪೂಜಾರ್ ಸೇರಿ 28 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಕೊಪ್ಪಳದಲ್ಲಿ ವ್ಯಕ್ತಿಗೆ ಚಪ್ಪಲಿ ಹಾಕಿ ಮೆರವಣಿಗೆ! 55 ಜನರ ವಿರುದ್ಧ ದೂರು ದಾಖಲು
ವ್ಯಕ್ತಿಗೆ ಚಪ್ಪಲಿ ಹಾಕಿ ಮೆರವಣಿಗೆ ಮಾಡಿದ್ದಾರೆ
TV9 Web
| Updated By: sandhya thejappa|

Updated on: Dec 15, 2021 | 10:24 AM

Share

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳದಲ್ಲಿ ವ್ಯಕ್ತಿಗೆ ಚಪ್ಪಲಿ ಹಾಕಿ ಮೆರವಣಿಗೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಹನುಮಸಾಗರ ಠಾಣೆಯಲ್ಲಿ ಸುಮಾರು 55 ಜನರ ವಿರುದ್ಧ ದೂರು ದಾಖಲಾಗಿದೆ. ಮಹಿಳೆಯ ಜತೆ ಪ್ರಕಾಶ್ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಪ್ರಕಾಶ್ಗೆ ಚಪ್ಪಲಿಯಿಂದ ಥಳಿಸಿ ಮೆರವಣಿಗೆ ಮಾಡಿದ್ದರು. ಚಪ್ಪಲಿ ಹಾಕಿ ಮೆರವಣಿಗೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಆರೋಪಿ ಪ್ರಕಾಶ್ ಸೇರಿ 55 ಜನರ ವಿರುದ್ಧ ದೂರು ದಾಖಲಾಗಿದೆ.

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಪ್ರಕಾಶ್ ಪೂಜಾರ್ ಎಂಬುವವರಿಗೆ ಚಪ್ಪಲಿಯಿಂದ ಥಳಿಸಿ, ನಂತರ ಚಪ್ಪಲಿ ಹಾಕಿ ಮೆರವಣಿಗೆ ಮಾಡಿದ್ದರು. ರತ್ನವ್ವ ಎಂಬ ಮಹಿಳೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆ ಪ್ರಕಾಶ್ ಪೂಜಾರ್ ಸೇರಿ 28 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಅತ್ಯಾಚಾರ ಮಾಡಲು ಯತ್ನಿಸಿದ್ದ ಆರೋಪದಡಿ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ. 28 ಜನರ ವಿರುದ್ಧ 143, 147, 354, 376, 504, 506 ಹಾಗೂ IPC 149 ಅಡಿಯಲ್ಲಿ ದೂರು ದಾಖಲಾಗಿದೆ.

ಪ್ರತಿಯಾಗಿ ಪ್ರಕಾಶ್ ಪತ್ನಿಯೂ 27 ಜನರ ವಿರುದ್ಧ ದೂರು ನೀಡಿದ್ದಾರೆ. ಜಮೀನಿಗೆ ಬಂದಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಚಪ್ಪಲಿ ಇಂದ ಹೊಡೆದು ಮೆರವಣಿಗೆ ಮಾಡಿದ್ದಾರೆ ಅಂತ ಪ್ರಕಾಶ್ ಪತ್ನಿ ದೂರು ಸಲ್ಲಿಸಿದ್ದಾರೆ. ಸಿದ್ದಪ್ಪು ಕುರಿ ಸೇರಿ 27 ಜನರ ವಿರುದ್ಧ ಹನುಮ ಸಾಗರ ಪೊಲೀಸ್ ಠಾಣೆಯಲ್ಲಿ 143, 147, 307, 354, 355 ಹಾಗೂ ಎಸ್​ಸಿ, ಎಸ್​ಟಿ ಕಾಯ್ದೆ 2015 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಉತ್ತರಪ್ರದೇಶದಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಒಗ್ಗಟ್ಟು ಪ್ರದರ್ಶನ; ಇಂದು ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆಯಲಿರುವ 12 ಸಿಎಂಗಳು

ಆಪರೇಶನ್​ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್​ ಆಗಿ ಡ್ರಗ್ ಪೆಡ್ಲರ್ ಆಗಿಬಿಟ್ಟಿದ್ದ, ಆದ್ರೆ ಆಪರೇಶನ್ ಮಾಡಿದ್ದು ಬೆಂಗಳೂರು ಪೊಲೀಸರು!