ಇನ್ಸ್ಟಾಗ್ರಾಮ್ ಗಲಾಟೆ: ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಥಳಿಸಿದ ಹುಡುಗಿ ಸಂಬಂಧಿಕರು
ಕೊಪ್ಪಳ ತಾಲೂಕಿನ ಶಿವಪುರದಲ್ಲಿರುವ ಬೋರುಕ ಪ್ರೌಢಶಾಲೆಯಲ್ಲಿ ಇನ್ಸ್ಟಾಗ್ರಾಮನಲ್ಲಿ ಪೋಸ್ಟ್ ವಿಚಾರವಾಗಿ ನಡೆದ ಗಲಾಟೆ ಸಂಬಂಧ ವಿದ್ಯಾರ್ಥಿನಿ ಸಂಬಂಧಿಗಳು ಶಾಲೆಗೆ ಆಗಮಿಸಿ ನಾಲ್ವರು ವಿದ್ಯಾರ್ಥಿಗಳಿಗೆ ಥಳಿಸಿದ ಘಟನೆ ನಡೆದಿದೆ. ಈ ಹಿನ್ನಲೆ ಗಾಯಾಳು ವಿದ್ಯಾರ್ಥಿ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ, ಫೆ.22: ಇನ್ಸ್ಟಾಗ್ರಾಮನಲ್ಲಿ ಪೋಸ್ಟ್ ವಿಚಾರವಾಗಿ ನಡೆದ ಗಲಾಟೆ ಸಂಬಂಧ ವಿದ್ಯಾರ್ಥಿನಿ ಸಂಬಂಧಿಗಳು ಶಾಲೆಗೆ ಆಗಮಿಸಿ ನಾಲ್ವರು ವಿದ್ಯಾರ್ಥಿಗಳಿಗೆ ಥಳಿಸಿದ ಘಟನೆ ಕೊಪ್ಪಳ (Koppala) ತಾಲೂಕಿನ ಶಿವಪುರದಲ್ಲಿರುವ ಬೋರುಕ ಪ್ರೌಢಶಾಲೆಯಲ್ಲಿ ನಡೆದಿದೆ. ಇಪ್ಪತ್ತು ಜನ ಯುವಕರು ಸೇರಿಕೊಂಡು ನಿನ್ನೆ ಶಾಲೆಗೆ ಆಗಮಿಸಿದ್ದ ಎಸ್ಎಸ್ಎಲ್ಸಿಯ ನಾಲ್ಕು ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಇಂದು ಕೂಡ ವಿದ್ಯಾರ್ಥಿನಿ ಸಂಬಂಧಿಗಳು ಕೆಲ ವಿದ್ಯಾರ್ಥಿಗಳಿಗೆ ಹೊಡೆದು, ಬೆದರಿಕೆ ಹಾಕಿದ್ದಾರೆ.
ಘಟನೆ ವಿವರ
ಕಳೆದ ಮಂಗಳವಾರ ವಿದ್ಯಾರ್ಥಿಯೋರ್ವ ಶಾಲೆಯ ವಿದ್ಯಾರ್ಥಿನಿಯ ಪೋಟೋ ಹಾಕಿ, ಅದಕ್ಕೆ ಒಂದು ಹಾಡನ್ನು ಹಾಕಿ ಪೋಸ್ಟ್ ಮಾಡಿದ್ದ. ಇದನ್ನು ಕೆಲ ವಿದ್ಯಾರ್ಥಿಗಳು ಕೂಡ ಲೈಕ್ ಮಾಡಿದ್ದರು. ಆದರೆ, ವಿದ್ಯಾರ್ಥಿನಿ ಪೋಷಕರು, ನಮ್ಮನೇ ಯುವತಿಯ ಕುರಿತು ಅಸಭ್ಯ ಪೋಸ್ಟ್ ಮಾಡಿದ್ದಾರೆ ಎಂದು ಪೋಸ್ಟ್ ಹಾಕಿದ್ದ ವಿದ್ಯಾರ್ಥಿ ಮತ್ತು ಲೈಕ್ ಮಾಡಿದ ವಿದ್ಯಾರ್ಥಿಗಳನ್ನು ಹಿಡಿದು ಥಳಿಸಿದ್ದಾರೆ. ಬಿಡಿಸಲು ಹೋದ ಶಿಕ್ಷಕರ ಮೇಲೆ ಕೂಡ ಹಲ್ಲೆ ಯುವಕರು ಮಾಡಿದ್ದು, ಶಾಲೆಗೆ ಆಗಮಿಸಿ ಶಿಕ್ಷಕರ ವಿರುದ್ಧ ಗಾಯಾಳು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಯಚೂರು: ಮನೆ ಮುಂದೆ ಕುಳಿತಿದ್ದ ವೃದ್ಧನನ್ನು ಕಂಬಕ್ಕೆ ಕಟ್ಟಿಹಾಕಿ ಕ್ರೂರವಾಗಿ ಥಳಿತ, ವಿಡಿಯೋ ವೈರಲ್
ಪೇಪರ್ ಬಾಕ್ಸ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ
ಬೆಂಗಳೂರು: ಪೇಪರ್ ಬಾಕ್ಸ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫ್ಯಾಕ್ಟರಿಯಲ್ಲಿದ್ದ ಪೇಪರ್ ಬಾಕ್ಸ್, ವಸ್ತುಗಳು ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Thu, 22 February 24