AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಟ್ಕಾ ತಂದು ಕೊಡಲಿಲ್ಲ ಎಂದು ಏಳು ವರ್ಷದ ಬಾಲಕಿ ಕೊಲೆ; 2 ತಿಂಗಳ ಬಳಿಕ ಆರೋಪಿ ಅರೆಸ್ಟ್​

ಎರಡು ತಿಂಗಳ ನಂತರ ಏಳು ವರ್ಷದ ಬಾಲಕಿ ಕೊಲೆ (Murder) ಪ್ರಕರಣವನ್ನು ಕೊಪ್ಪಳ ಪೊಲೀಸರು (Koppal Police) ಭೇದಿಸಿದ ಘಟನೆ ನಡೆದಿದೆ. ಹೌದು, ಗುಟ್ಕಾ ತಂದು ಕೊಡಲಿಲ್ಲ ಎಂದು ಬಾಲಕಿಯನ್ನ ಹತ್ಯೆ ಮಾಡಿದ್ದ. ಇದೀಗ ಆರೋಪಿ ಸಿದ್ದಲಿಂಗಯ್ಯ (51) ಎಂಬಾತನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಗುಟ್ಕಾ ತಂದು ಕೊಡಲಿಲ್ಲ ಎಂದು ಏಳು ವರ್ಷದ ಬಾಲಕಿ ಕೊಲೆ; 2 ತಿಂಗಳ ಬಳಿಕ ಆರೋಪಿ ಅರೆಸ್ಟ್​
ಕೊಲೆಯಾದ ಬಾಲಕಿ, ಆರೋಪಿ
ಸಂಜಯ್ಯಾ ಚಿಕ್ಕಮಠ
| Edited By: |

Updated on:Jun 16, 2024 | 6:05 PM

Share

ಕೊಪ್ಪಳ, ಜೂ.16: ಎರಡು ತಿಂಗಳ ನಂತರ ಏಳು ವರ್ಷದ ಬಾಲಕಿ ಕೊಲೆ (Murder) ಪ್ರಕರಣವನ್ನು ಕೊಪ್ಪಳ ಪೊಲೀಸರು (Koppal Police) ಭೇದಿಸಿದ ಘಟನೆ ನಡೆದಿದೆ. ಹೌದು, ಗುಟ್ಕಾ ತಂದು ಕೊಡಲಿಲ್ಲ ಎಂದು ಬಾಲಕಿಯನ್ನ ಹತ್ಯೆ ಮಾಡಿದ್ದ. ಇದೀಗ ಆರೋಪಿ ಸಿದ್ದಲಿಂಗಯ್ಯ (51) ಎಂಬಾತನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಅನುಶ್ರಿ (07)ಕೊಲೆಯಾಗಿದ್ದ ಬಾಲಕಿ.

ಘಟನೆ ವಿವರ

ಕಳೆದ ಎಪ್ರಿಲ್ 18 ರಂದು ಮಧ್ಯಾಹ್ನ ಬಾಲಕಿ ನಾಪತ್ತೆಯಾಗಿದ್ದಳು. ಎಪ್ರಿಲ್ 20 ರಂದು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಅಂದರೆ ಎಪ್ರಿಲ್ 21 ರಂದು ಬಾಲಕಿ ಶವ ಆಕೆಯ ಮನೆ ಸಮೀಪದ ಪಾಳು ಬಿದ್ದ ಮನೆಯಲ್ಲಿ ಪತ್ತೆಯಾಗಿತ್ತು. ಬಳಿಕ ಜಿಲ್ಲೆಯಾದ್ಯಂತ ಬಾಲಕಿ ಸಾವು  ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ:ಕೊಲೆಗಡುಕರಿಗೆ ಶಿಕ್ಷೆ ಆಗಲಿ; ಎಂಎಲ್​ಎ ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ

ಸಾಕ್ಷಿ ಸಿಗದಂತೆ ಖತರ್ನಾಕ್​ ಪ್ಲಾನ್​; 2 ತಿಂಗಳ ಬಳಿಕ ಆರೋಪಿ ಅರೆಸ್ಟ್​

ಸಾಕ್ಷಿ ಸಿಗದಂತೆ ಬಾಲಕಿಯ ಶವವನ್ನ ಗೊಬ್ಬರ ಚೀಲದಲ್ಲಿ ಕಟ್ಟಿ ಎಸೆಯಲಾಗಿತ್ತು. ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಎರಡು ತಿಂಗಳ ನತರ ಬಾಲಕಿಯ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಗುಟ್ಕಾ ತರದ ಹಿನ್ನೆಲೆ ತನ್ನ ಮಾತನ್ನು ಕೇಳಲಿಲ್ಲ ಎಂದು ಕೋಪಗೊಂಡು ಕೋಲಿನಿಂದ ಬಾಲಕಿ ತಲೆಗೆ ದುಷ್ಕರ್ಮಿ ಹೊಡದಿದ್ದ. ತಲೆಗೆ ಜೋರಾದ ಪೆಟ್ಟು ಬಿದ್ದ ಹಿನ್ನೆಲೆ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಬಾಲಕಿ ಸಾವನ್ನಪ್ಪಿರುವ ಭಯದಲ್ಲಿ ಚೀಲದಲ್ಲಿ ಶವ ತುಂಬಿ ಮನೆಯ ಹಿಂದೆ ಇಟ್ಟಿದ್ದ.  ಶವದ ವಾಸನೆ ಬರಲು ಶುರುವಾದ ಹಿನ್ನೆಲೆ ಚೀಲ ಇಟ್ಟಿದ್ದ ಸ್ಥಳ ಬದಲಾವಣೆ ಮಾಡಿದ್ದಾನೆ. ಇದೀಗ ಪೊಲಿಸರು ಆತನನ್ನು ಹೆಡೆಮುರಿ ಕಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Sun, 16 June 24