ಕೂಕನಪಳ್ಳಿ ಗ್ರಾಮದಲ್ಲಿ ಮತ್ತೆ ಶುರುವಾಯ್ತು ಕುರಿ ಸಂತೆ; 60 ವರ್ಷಗಳ ಹಿಂದಿನಿಂದ ನಡೆದು ಬಂದ ಪದ್ಧತಿಗೆ ಮತ್ತೆ ಚಾಲನೆ

ಇಂದಿನಿಂದ ಕುರಿ ಸಂತೆ ಕೂಕನಪಳ್ಳಿ ಗ್ರಾಮದಲ್ಲಿ ಆರಂಭಗೊಂಡಿದೆ. ಇನ್ನು ಕೂಕನಪಳ್ಳಿ ಗ್ರಾಮದಲ್ಲಿ ಕುರಿ ಸಂತೆ ಆರಂಭಗೊಂಡಿರುವುದು ನಮಗೆಲ್ಲ ಖುಷಿಯಾಗಿದ್ದು, ಕೂಕನಪಳ್ಳಿ ಕುರಿ ಸಂತೆಯ ಜಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿ ಇಲ್ಲಿಯೇ ಕುರಿ ಸಂತೆ ನಡೆಸಬೇಕು ಎಂದು ಕುರಿ ವ್ಯಾಪಾರಿ ಮುರ್ತುಜಾ ಮನವಿ ಮಾಡಿದ್ದಾರೆ.

ಕೂಕನಪಳ್ಳಿ ಗ್ರಾಮದಲ್ಲಿ ಮತ್ತೆ ಶುರುವಾಯ್ತು ಕುರಿ ಸಂತೆ; 60 ವರ್ಷಗಳ ಹಿಂದಿನಿಂದ ನಡೆದು ಬಂದ ಪದ್ಧತಿಗೆ ಮತ್ತೆ ಚಾಲನೆ
ಕುರಿ ಸಂತೆ

ಕೊಪ್ಪಳ: 60 ವರ್ಷಗಳಷ್ಟು ಹಳೆಯದಾದ ಕುರಿ ಸಂತೆ ಕಳೆದ 7 ವರ್ಷಗಳ ಹಿಂದೆ ರಾಜಕೀಯ ಕಾರಣಕ್ಕಾಗಿ ಬೇರೆ ಕಡೆ ಸ್ಥಳಾಂತರಗೊಂಡಿತ್ತು. ಆದರೆ ಇದೀಗ ಮತ್ತೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಸ್ಥಳದಲ್ಲಿಯೇ ಕುರಿ ಸಂತೆ ಆರಂಭಗೊಂಡಿದೆ. ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಇಂದಿನಿಂದ (ನವೆಂಬರ್ 26) ಮತ್ತೇ ಕುರಿ ಸಂತೆ ಆರಂಭಗೊಂಡಿದೆ. ಕಳೆದ ಕೂಕನಪಳ್ಳಿ ಗ್ರಾಮ ಸಂಸದ ಕರಡಿ ಸಂಗಣ್ಣ ಅವರ ಸ್ವಗ್ರಾಮವಾಗಿದ್ದು, 60 ವರ್ಷಗಳಿಂದ ಕೂಕನಪಳ್ಳಿ ಗ್ರಾಮದಲ್ಲಿ ಕುರಿ ಸಂತೆ (Sheep fair) ನಡೆಯುತ್ತಿತ್ತು. ಆದರೆ ಕಳೆದ 2014 ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಕೂಕ‌ನಪಳ್ಳಿ ಗ್ರಾಮದ ಹತ್ತಿರ ಸಂಸದ ಕರಡಿ ಸಂಗಣ್ಣ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರ ಮಧ್ಯೆ ವಿಜಯೋತ್ಸವದ ಕುರಿತಂತೆ ಗಲಾಟೆ ನಡೆದಿತ್ತು. ಈ ಹಿನ್ನಲೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ತಮ್ಮ ಪ್ರಭಾವ ಬಳಿಸಿ ಕೂಕನಪಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಕುರಿ ಸಂತೆಯನ್ನು ಪಕ್ಕದ ಬೂದಗುಂಪ ಗ್ರಾಮಕ್ಕೆ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಅಂದಿನಿಂದ ಸಂಸದ ಕರಡಿ ಸಂಗಣ್ಣ ಶತಾಯುಗತಾಯ ಮರಳಿ ಕುರಿ ಸಂತೆಯನ್ನು ತಮ್ಮ ಊರಿನಲ್ಲಿಯೇ ಮಾಡುವ ಪ್ರಯತ್ನ ಮಾಡುತ್ತಾ ಬಂದಿದ್ದರು. ಈ ಹಿನ್ನಲೆಯಲ್ಲಿ ಇಂದು ಮತ್ತೇ ಕೋರ್ಟ್ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಇಂದಿನಿಂದ ಕುರಿ ಸಂತೆ ಕೂಕನಪಳ್ಳಿ ಗ್ರಾಮದಲ್ಲಿ ಆರಂಭಗೊಂಡಿದೆ.

ಕೂಕನಪಳ್ಳಿ ಕುರಿ ಸಂತೆ ಬಹಳ ಫೇಮಸ್ ಆಗಿದೆ. ಅಷ್ಟೇ ಅಲ್ಲ ಇಲ್ಲಿ ಸಿಗುವ ಕುರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆಂಧ್ರ, ತಮಿಳುನಾಡು, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಇಲ್ಲಿಂದ ಕುರಿಗಳು ಹೋಗುತ್ತವೆ.ಇನ್ನು ಈ ಹಿಂದೆ ಬೂದಗುಂಪ ಗ್ರಾಮದಲ್ಲಿದ್ದ ಕುರಿ ಸಂತೆಯನ್ನು ಮರಳಿ ಕೂಕನಪಳ್ಳಿ ಗ್ರಾಮದಲ್ಲಿ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಆದರೆ ಕೃಷಿ ಕಾಯ್ದೆ ತಿದ್ದುಪಡಿ ಹಿನ್ನಲೆಯಲ್ಲಿ ಬೂದಗುಂಪ ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿ ಜಿಲ್ಲಾಧಿಕಾರಿಗಳ ಆದೇಶ ರದ್ದು ಮಾಡಿಸಿದ್ದರು. ಆದರೆ ಇದೀಗ ಕೃಷಿ ಕಾಯ್ದೆ ತಿದ್ದುಪಡಿ ಹಿಂದಕ್ಕೆ ತೆಗೆದುಕೊಂಡ ಹಿನ್ನಲೆಯಲ್ಲಿ ಹಾಗೂ ಧಾರವಾಡ ಹೈಕೋರ್ಟ್ ಆದೇಶದ ಜೊತೆಗೆ ಜಿಲ್ಲಾಧಿಕಾರಿಗಳು ಮರಳಿ ಕೂಕನಪಳ್ಳಿ ಗ್ರಾಮದಲ್ಲಿ ಕುರಿ ಸಂತೆ ನಡೆಸಲು ಆದೇಶ ಮಾಡಿದ್ದರೆ.

ಇಂದಿನಿಂದ ಕುರಿ ಸಂತೆ ಕೂಕನಪಳ್ಳಿ ಗ್ರಾಮದಲ್ಲಿ ಆರಂಭಗೊಂಡಿದೆ. ಇನ್ನು ಕೂಕನಪಳ್ಳಿ ಗ್ರಾಮದಲ್ಲಿ ಕುರಿ ಸಂತೆ ಆರಂಭಗೊಂಡಿರುವುದು ನಮಗೆಲ್ಲ ಖುಷಿಯಾಗಿದ್ದು, ಕೂಕನಪಳ್ಳಿ ಕುರಿ ಸಂತೆಯ ಜಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿ ಇಲ್ಲಿಯೇ ಕುರಿ ಸಂತೆ ನಡೆಸಬೇಕು ಎಂದು ಕುರಿ ವ್ಯಾಪಾರಿ ಮುರ್ತುಜಾ ಮನವಿ ಮಾಡಿದ್ದಾರೆ.

ಕೂಕನಪಳ್ಳಿ ಗ್ರಾಮದಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ಇದ್ದು, ಸ್ವಂತ ಜಾಗವಿದೆ. ಆದರೆ ಬೂದಗುಂಪ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿ ಕುರಿ ಸಂತೆ ನಡೆಯುತ್ತಿತ್ತು. ಹೀಗಾಗಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿ ಕುರಿ ಸಂತೆ ಸ್ಥಳಾಂತರಗೊಂಡಿತ್ತು. ಈಗ ಮತ್ತೇ ಕೂಕನಪಳ್ಳಿ ಗ್ರಾಮದಲ್ಲಿ ಕುರಿ ಸಂತೆ ಆರಂಭಗೊಂಡಿರುವುದು ಸಹಜವಾಗಿಯೇ ಕೂಕನಪಳ್ಳಿ ಗ್ರಾಮಸ್ಥರಲ್ಲಿ ಹರ್ಷವನ್ನುಂಟು ಮಾಡಿದೆ.

ವರದಿ: ಶಿವಕುಮಾರ್​ ಪತ್ತಾರ್​

ಇದನ್ನೂ ಓದಿ:
ಕೊರೊನಾ ಭೀತಿ ಮರೆತ ಮಂಡ್ಯ ಜನ; ಭಾನುವಾರದ ಕುರಿ ಸಂತೆಯಲ್ಲಿ ಜನ ಜಂಗುಳಿ

ಕೊರೊನಾ ನಿಯಮಗಳ ನಡುವೆಯೂ ಯಾದಗಿರಿ ಜಿಲ್ಲೆಯಲ್ಲಿ ನಡೆಯುತ್ತಿದೆ ಬೃಹತ್​ ಮಟ್ಟದ ಕುರಿ ಸಂತೆ

Click on your DTH Provider to Add TV9 Kannada