ಹಣ ನೀಡದೆ ಸತಾಯಿಸಿದ್ರಾ ಕಾಂಗ್ರೆಸ್​ ಶಾಸಕನ ಆಪ್ತರು? ಆತ್ಮಹತ್ಯೆ ಮಾಡಿಕೊಂಡ ಉಪಗುತ್ತಿಗೆದಾರ

ಉಪಗುತ್ತಿಗೆ ಕೆಲಸ ಮಾಡಿದ್ದಕ್ಕೆ ಬಿಲ್‌ಬಂದಿದ್ದರೂ ಗುತ್ತಿಗೆದಾರರು ಬಿಲ್‌ನೀಡಿಲ್ಲ. ಮತ್ತೆ ಕೆಲ ಸ್ನೇಹಿತರು ನನ್ನಿಂದ ಹಣ ತೆಗೆದುಕೊಂಡು ವಾಪಾಸ್‌ ನೀಡಿಲ್ಲ ಎಂದು ರವಿ ಬಗಾಡೆ ಕಿರಕುಳದ ಕುರಿತು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನು ಹಣ ಕೇಳಿದರೆ ಬೆದರಿಕೆ ಹಾಕಿದ್ದಾರೆ ಎಂದು ಬಗಾಡೆ ಕುಟುಂಬಸ್ಥರು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆರೋಪಿಗಳು ಕಾಂಗ್ರೆಸ್​ ಶಾಸಕ ರಾಘವೇಂದ್ರ ಹಿಟ್ನಾಳ್ ಆಪ್ತರು ಎಂದು ತಿಳಿದು ಬಂದಿದೆ.

ಹಣ ನೀಡದೆ ಸತಾಯಿಸಿದ್ರಾ ಕಾಂಗ್ರೆಸ್​ ಶಾಸಕನ ಆಪ್ತರು? ಆತ್ಮಹತ್ಯೆ ಮಾಡಿಕೊಂಡ ಉಪಗುತ್ತಿಗೆದಾರ
ರಾಜೀವ್ ಬಗಾಡೆ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ

Updated on:Oct 15, 2023 | 10:12 AM

ಕೊಪ್ಪಳ ಅ.15: ಹಣಕಾಸಿನ ವಿಷಯಕ್ಕೆ ವಿಷ ಸೇವಿಸಿದ್ದ ಉಪಗುತ್ತಿಗೆದಾರ (Subcontractor) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಪ್ಪಳದ (Koppal) ಬಿಟಿ ಪಾಟೀಲ್ ನಗರದ ರಾಜೀವ ಬಗಾಡೆ (50) ಮೃತ ಉಪಗುತ್ತಿಗೆದಾರ. ರಾಜೀವ ಬಗಾಡೆ ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡುತ್ತಿದ್ದರು. ಆದರೆ ಇವರಿಗೆ ಕೆಲ ಗುತ್ತಿಗೆದಾರರು ಕಿರುಕುಳ ನೀಡಿದ್ದಾರೆಂದು ಡೆತ್ ನೋಟ್​​ನಲ್ಲಿ (Death Note) ಬರೆದು ವಿಷಸೇವಿಸಿದ್ದರು. ಈ ಸಂಬಂಧ ಪ್ರಸನ್ನ ಗಡಾದ, ನಗರಸಭೆ ಸದಸ್ಯ ಚೆನ್ನಪ್ಪ ಕೋಟ್ಯಾಳ್ ಸೇರಿದಂತೆ ಏಳು ಜನರ ವಿರುದ್ಧ ಐಪಿಸಿ ಸೆ.306 ಅಡಿಯಲ್ಲಿ ಕೊಪ್ಪಳ‌ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜೀವ ಬಗಾಡೆ ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದರು. ಇವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ (ಅ.14) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುತ್ತಿಗೆದಾರ ರಾಜೀವ ಬಗಾಡೆ ಏಳು ಜನ ಪ್ರಭಾವಿಗಳ ಹೆಸರನ್ನು ಡೆತ್​ ನೋಟ್​​ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡರು. ದೊಡ್ಡಪ್ಪ ಹರಗುರಿ, ನಗರಸಭೆ ಸದಸ್ಯ ಚನ್ನಪ್ಪ ಕೋಟ್ಯಾಳ, ನಗರಸಭೆ ಮಾಜಿ ಸದಸ್ಯ ಡಾ.ಉಪೇಂದ್ರ ರಾಜು, ಮುನಿ ವಿಜಯಕುಮಾರ, ರಫಿ, ಮಲ್ಲಿಕಾರ್ಜುನ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: ಪ್ರೀತಿಸಿ ಕೈ ಕೊಟ್ಟ ಪ್ರೇಮಿ; ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

ಉಪಗುತ್ತಿಗೆ ಕೆಲಸ ಮಾಡಿದ್ದಕ್ಕೆ ಬಿಲ್‌ಬಂದಿದ್ದರೂ ಗುತ್ತಿಗೆದಾರರು ಬಿಲ್‌ನೀಡಿಲ್ಲ. ಮತ್ತೆ ಕೆಲ ಸ್ನೇಹಿತರು ಹಣವನ್ನು ಇಸಿದುಕೊಂಡು ವಾಪಾಸ್‌ನೀಡಿಲ್ಲ ಎಂದು ರಾಜೀವ ಬಗಾಡೆ ಕಿರಕುಳದ ಕುರಿತು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನು ಹಣ ಕೇಳಿದರೆ ಬೆದರಿಕೆ ಹಾಕಿದ್ದಾರೆ ಎಂದು ಬಗಾಡೆ ಕುಟುಂಬಸ್ಥರು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆರೋಪಿಗಳು ಕಾಂಗ್ರೆಸ್​ ಶಾಸಕ ರಾಘವೇಂದ್ರ ಹಿಟ್ನಾಳ್ ಆಪ್ತರು ಎಂದು ತಿಳಿದು ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 am, Sun, 15 October 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ