Sunny Leon Boys ಕಡೆಯಿಂದ! ಕೊಪ್ಪಳದಲ್ಲಿ ಸನ್ನಿ ಫ್ಲೆಕ್ಸ್ ಹಾಕಿ ಜಾತ್ರೆಗೆ ಸ್ವಾಗತ ಕೋರಿದ ಪಡ್ಡೆ ಹುಡುಗರು!

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿಯ ಶ್ರೀ ಶರಣಬಸವೇಶ್ವರ ಜಾತ್ರಾ ನಿಮಿತ್ತ ಗ್ರಾಮದಲ್ಲಿ ಹಲವು ಬ್ಯಾನರ್‌ಗಳನ್ನು ಹಾಕಲಾಗಿದೆ. ಈ ಪೈಕಿ ಗಮನ ಸೆಳೆದ ಬ್ಯಾನರ್ ಎಂದರೆ ಸನ್ನಿಲಿಯೊನ್ ಅಭಿಮಾನಿಗಳು ಸ್ವಾಗತ ಕೋರಿದ ಫ್ಲೆಕ್ಸ್.

Sunny Leon Boys ಕಡೆಯಿಂದ! ಕೊಪ್ಪಳದಲ್ಲಿ ಸನ್ನಿ ಫ್ಲೆಕ್ಸ್ ಹಾಕಿ ಜಾತ್ರೆಗೆ ಸ್ವಾಗತ ಕೋರಿದ ಪಡ್ಡೆ ಹುಡುಗರು!
Sunny Leon Boys ಕಡೆಯಿಂದ! ಕೊಪ್ಪಳದಲ್ಲಿ ಸನ್ನಿ ಫ್ಲೆಕ್ಸ್ ಹಾಕಿ ಜಾತ್ರೆಗೆ ಸ್ವಾಗತ ಕೋರಿದ ಪಡ್ಡೆ ಹುಡುಗರು!
Edited By:

Updated on: Mar 21, 2022 | 5:08 PM

ಕೊಪ್ಪಳ: ಜಾತ್ರಾ ಮಹೋತ್ಸವ ಎಂದ ಮೇಲೆ ಭಕ್ತರು, ಗಣ್ಯರು ತಮ್ಮೂರ ಜಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕೋದು ಕಾಮನ್. ಆದ್ರೆ ಕೊಪ್ಪಳದಲ್ಲಿ ಒಂದೆಜ್ಜೆ ಮುಂದೋಗಿ ಪಡ್ಡೆ ಹುಡುಗರು, ತಮ್ಮ ಹಾಟ್ ಹಾಟ್ ಫೇವರೇಟ್ ಸನ್ನಿಲಿಯೋನ್(Sunny Leone) ಚಿತ್ರದ ಮೂಲಕ ಜಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿಸಿದ್ದಾರೆ. ಸದ್ಯ ಇದು ಈಗ ಹೆಚ್ಚಿನ ಜನರ ಗಮನ ಸೆಳೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿಯ ಶ್ರೀ ಶರಣಬಸವೇಶ್ವರ ಜಾತ್ರಾ ನಿಮಿತ್ತ ಗ್ರಾಮದಲ್ಲಿ ಹಲವು ಬ್ಯಾನರ್‌ಗಳನ್ನು ಹಾಕಲಾಗಿದೆ. ಈ ಪೈಕಿ ಗಮನ ಸೆಳೆದ ಬ್ಯಾನರ್ ಎಂದರೆ ಸನ್ನಿಲಿಯೊನ್ ಅಭಿಮಾನಿಗಳು ಸ್ವಾಗತ ಕೋರಿದ ಫ್ಲೆಕ್ಸ್. ಇಂದು ಹಾಬಲಕಟ್ಟಿ ಗ್ರಾಮದಲ್ಲಿ ಜಾತ್ರೆಯ ನಿಮಿತ್ತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಾತ್ರೆ ಹಾಗೂ ವಿವಾಹಕ್ಕೆ ಬರುವ ಜನರನ್ನು ಸನ್ನಿಲಿಯೋನ್ ಹೆಸರಲ್ಲಿ ಬ್ಯಾನರ್ ಹಾಕಿ ಸ್ವಾಗತ ಕೋರಲಾಗಿದೆ. ನಾಡಿನಲ್ಲಿ ಸನ್ನಿಲಿಯೋನ್ ಅಭಿಮಾನಿಗಳಿದ್ದಾರೆ ಎನ್ನುವುದಕ್ಕೆ ಹಾಬಲಿಕಟ್ಟಿ ಗ್ರಾಮದ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

ನೀಲಿತಾರೆ, ಬಹುಭಾಷಾ ನಟಿ ಸನ್ನಿಲಿಯೋನ್ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾವನ್ನು ಹೊರತು ಪಡಿಸಿ ಇವರು ಮಾಡಿರುವ ಒಂದಷ್ಟು ಸಾಮಾಜಿಕ ಸೇವೆಗಳಿಂದಾಗಿ ಅನೇಕರ ಹೃದಯ ಗೆದ್ದಿದ್ದಾರೆ. ಸದ್ಯ ಕೊಪ್ಪಳದಲ್ಲಿ ಹಾಕಿರುವ ಫ್ಲೆಕ್ಸ್ ಭಾರಿ ಗಮನ ಸೆಳೆದಿದೆ. ಸನ್ನಿಲಿಯೋನ್ ಬಾಯ್ಸ್ ಎಂಬ ಯುವಕರ ಸಂಘ ಸನ್ನಿ ಫ್ಲೆಕ್ಸ್ ಹಾಕಿ ಜಾತ್ರೆಗೆ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ: ಓಡುವ ಹುಡುಗನ ನಿಷ್ಠೆಗೆ ಸಿಕ್ತು ಪ್ರತಿಫಲ; ಪ್ರದೀಪ್​ ಸೇನೆ ಸೇರುವ ಕನಸನ್ನು ನನಸು ಮಾಡಲು ಮುಂದಾದ ನಿವೃತ್ತ ಲೆಫ್ಟಿನೆಂಟ್ ಜನರಲ್​

ಅಮಿತಾಬ್ ಬಚ್ಚನ್ ಹಾಗೂ ಸನ್ನಿಲಿಯೋನ್ ಒಂದೇ ಅಪಾರ್ಟ್​ಮೆಂಟ್​ನ ನೆರೆಹೊರೆಯವರು; ಕೋಟಿಕೋಟಿಯ ಫ್ಲ್ಯಾಟ್ ಖರೀದಿ

Published On - 4:56 pm, Mon, 21 March 22