ಕೊಪ್ಪಳದಲ್ಲಿ ನಿಲ್ಲದ ಅಸ್ಪ್ರಶ್ಯತೆ: ದಲಿತರು ಬರ್ತಾರೆಂದು ಗ್ರಾಮದಲ್ಲಿ ಕಟ್ಟಿಂಗ್ ಶಾಪ್ ಕ್ಲೋಸ್

ಇದು ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆ. ಆ ಜಿಲ್ಲೆಯಲ್ಲಿ ಮೇಲು ಕೀಳು ಎನ್ನುವ ಭಾವನೆ ಇನ್ನು ಜೀವಂತವಾಗಿದೆ. ಒಂದಲ್ಲಾ ಒಂದು ಕಡೆ ಮೇಲ್ಜಾತಿ, ಕೆಳಜಾತಿಗಳ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಕೆಲ ಹಳ್ಳಿಗಳಲ್ಲಿ ಹೋಟೆಲ್ ಗೂ ಕೆಳ ಜಾತಿ ಜನರಿಗೆ ಪ್ರವೇಶ ಇಲ್ಲ‌. ಇದೀಗ ಇಲ್ಲೊಂದು ಗ್ರಾಮದಲ್ಲಿ ದಲಿತರು ಬರಬಾರದು ಎನ್ನುವ ಕಾರಣಕ್ಕೆ ಕಟಿಂಗ್ ಶಾಪ್ ಬಂದ್ ಮಾಡಲಾಗಿದೆ. ಹಾಗಾದ್ರೆ ಅದು ಯಾವ ಗ್ರಾಮ ಅಂತೀರಾ ಈ ಸ್ಟೋರಿ ನೋಡಿ..

ಕೊಪ್ಪಳದಲ್ಲಿ ನಿಲ್ಲದ ಅಸ್ಪ್ರಶ್ಯತೆ: ದಲಿತರು ಬರ್ತಾರೆಂದು ಗ್ರಾಮದಲ್ಲಿ ಕಟ್ಟಿಂಗ್ ಶಾಪ್ ಕ್ಲೋಸ್
Koppal Untouchability
Updated By: ರಮೇಶ್ ಬಿ. ಜವಳಗೇರಾ

Updated on: May 06, 2025 | 7:45 PM

ಕೊಪ್ಪಳ, (ಮೇ 06): ಕೊಪ್ಪಳ (Koppal) ಜಿಲ್ಲೆಯಲ್ಲಿ ಅಸ್ಪೃಶ್ಯತೆ (Untouchability) ಇನ್ನೂ ಜೀವಂತವಾಗಿದೆ. ಈ ಹಿಂದೆ ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ದಲಿತರಿಗೆ ಹೋಟೆಲ್​ಗೆ ಪ್ರವೇಶ ನಿಷೇಧಿಸಲಾಗಿತ್ತು. ಬಳಿಕ ಹೋಟೆಲ್​ನಲ್ಲಿ ದಲಿತರೊಂದಿಗೆ ಸವರ್ಣೀಯರು ಮತ್ತು ಅಧಿಕಾರಿಗಳು ಉಪಾಹಾರ ಸೇವಿಸುವ ಮೂಲಕ ಗ್ರಾಮದ ಎರಡು ಸಮುದಾಯಗಳ ಶಾಂತಿ ಸಭೆ ಯಶಸ್ವಿಯಾಗಿತ್ತು. ಆದ್ರೆ, ಮತ್ತೆ ಅಸ್ಪೃಶ್ಯತೆ ಪ್ರಕರಣ ಬೆಳಕಿಗೆ ಬಂದಿದೆ. ಕೊಪ್ಪಳ ನಗರ ಪ್ರದೇಶದಿಂದ ಕೂಗಳತೆ ದೂರದಲ್ಲಿರೋ ಮುದ್ದಾಬಳ್ಳಿ ಗ್ರಾಮದಲ್ಲಿ ದಲಿತರು ಬರಬಾರದು ಎನ್ನುವ ಕಾರಣಕ್ಕೆ ಕಟಿಂಗ್ ಶಾಪ್ ಬಂದ್ ಮಾಡಲಾಗಿದೆ. ಕಳೆದ ಎರಡು ತಿಂಗಳಿಂದ ಗ್ರಾಮದಲ್ಲಿ ಕಟಿಂಗ್ ಶಾಪ್ ಬಂದ್ ಮಾಡಲಾಗಿದೆ. ಗ್ರಾಮದಲ್ಲಿ ದಲಿತರಿಗೆ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳದಂತಾಗಿದೆ. ಇನ್ನು ಕ್ಷೌರಿಕರು ಮೇಲ್ಜಾತಿ ಜನರಿಗೆ ಅವರ ಮನೆಗೆ ಹೋಗಿ ಕಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ.

ಕೊಪ್ಪಳ ನಗರ ಪ್ರದೇಶದಿಂದ ಕೂಗಳತೆ ದೂರದಲ್ಲಿರೋ ಮುದ್ದಾಬಳ್ಳಿಯಲ್ಲಿ ಗ್ರಾಮದ ಸವರ್ಣಿಯರು ಅಸ್ಪ್ರಶ್ಯತೆ ಜೀವಂತವಾಗಿಟ್ಟಿದ್ದಾರೆ. ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಕಟಿಂಗ್ ಶಾಪ್ ಕ್ಲೋಸ್ ಮಾಡಲಾಗಿದೆ.ಗ್ರಾಮದ ಬಸ್ ನಿಲ್ದಾಣದ ಪಕ್ಕ ಇರೋ ಎರಡು ಕಟಿಂಗ್ ಶಾಪ್ ಗೆ ಬೀಗ ಹಾಕಲಾಗಿದೆ. ಕಾರಣ ದಲಿತರು ಕಟಿಂಗ್ ಮಾಡಿಸಲು ಬರಬಾರದು ಎನ್ನುವ ಉದ್ದೇಶ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇನ್ನು ಮೇಲ್ಜಾತಿಯವರಿಗೆ ಅವರ ಮನೆಗಳು ತೆರಳಿ ಕಟಿಂಗ್ ಮಾಡಿ ಬರುತ್ತಿದ್ದಾರೆ. .ದಲಿತರಿಗೆ ಮಾತ್ರ ಗ್ರಾಮದಲ್ಲಿ‌ ಕಟಿಂಗ್ ಮಾಡಿಸೋ ಸೌಲಭ್ಯ ಇಲ್ಲ.. ಹೀಗಾಗಿ ದಲಿತರು ಕೊಪ್ಪಳಕ್ಕೆ ಬಂದು ಕಟಿಂಗ್ ಮಾಡಿಸಿಕೊಂಡು ಹೋಗುತ್ತಿದ್ದಾರೆ.ಜಿಲ್ಲಾ ಕೇಂದ್ರದಿಂದ ಕೂಗಳತೇ ದೂರದಲ್ಲಿರೋ ಮುದ್ದಾಬಳ್ಳಿಯಲ್ಲಿ ಆಸ್ಪ್ರಶ್ಯತೆ ಇನ್ನು ಜೀವಂತವಾಗಿರೋದಕ್ಕೆ ಇದು ಸಾಕ್ಷಿಯಾಗಿದೆ‌.

ಇದನ್ನು ಓದಿ: ಕೊಪ್ಪಳ: ಹಾಲವರ್ತಿ ಗ್ರಾಮದಲ್ಲಿ ಅಸ್ಪಶ್ಯತೆ ಜೀವಂತ, ದಲಿತರ ಕಟಿಂಗ್​ಗೆ ನಿರಾಕರಣೆ, ಹೋಟೆಲ್​​ನಲ್ಲಿ ತಟ್ಟೆ ನೀಡದ ಸಿಬ್ಬಂದಿ

ಅಂಬೇಡ್ಕರ ಭಾವಚಿತ್ರಕ್ಜೆ ಚಪ್ಪಲಿ ಹಾರ

ಇದು ಮುದ್ದಾಬಳ್ಳಿ ಕಥೆಯಾದರೆ ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಕವಳಕೇರಾ ಗ್ರಾಮದಲ್ಲಿ ಅಂಬೇಡ್ಕರ ಭಾವಚಿತ್ರಕ್ಜೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದಾರೆ..ಹೌದು ಕೆಲ ಕಿಡಗೇಡಿಗಳು ಅಂಬೇಡ್ಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರದಿದ್ದಾರೆ.ಗ್ರಾಮದಲ್ಲಿ ಭಗೀರಥ ವೃತ್ತದ ವಿಚಾರವಾಗಿ ಎರಡು ದಿನಗಳ ಹಿಂದೆ ಗಲಾಟೆಯಾಗಿತ್ತು. ಅದೇ ಜಗಳದಿಂದ ನಿನ್ನೆ ಕಿಡಗೇಡಿಗಳು ಅಂಬೇಡ್ಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ ಭಾವಚಿತ್ರಕ್ಕೆ ಚಪ್ಪಲಿ ಹಾಕಿದ್ದು,ಸಹಜವಾಗಿ ಗ್ರಾಮಸ್ಥರ ನ್ನು ಕೆರಳಿಸಿತ್ತು.ಕೆಲ ಕಾಲ ದಲಿತ ಸಮುದಾಯದ ಜನ ಪ್ರತಿಭಟನೆ ಮಾಡಿದ್ರು. ಕೊನೆಗೆ ಪೊಲೀಸರು ಬಂದು ಚಪ್ಪಲಿ ತಗೆದರು.ಇನ್ನು ಈಗಾಗಲೇ ಘಟನೆ ಸಂಭಂಧ ಕುಕನೂರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ
ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ವಾರದಲ್ಲಿ ಎರಡೆರೆಡು ಬಾಲ್ಯ ವಿವಾಹ
ಕೊಪ್ಪಳ ದಲಿತರ ಮೇಲೆ ದೌರ್ಜನ್ಯ ಪ್ರಕರಣ: 101 ಜನ ಅಪರಾಧಿಗಳಲ್ಲಿ ಓರ್ವ ಸಾವು
ಕೊಪ್ಪಳದಲ್ಲಿ ಅಸ್ಪೃಶ್ಯತೆ​: ಎರಡೂ ಸಮುದಾಯಗಳ ಶಾಂತಿ ಸಭೆ ಯಶಸ್ವಿ
ಕೊಪ್ಪಳ ಹಾಲವರ್ತಿ ಗ್ರಾಮದಲ್ಲಿ ಅಸ್ಪಶ್ಯತೆ ಜೀವಂತ

ಒಟ್ಟಾರೆ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಅನ್ನೋ ಪೆಡಂಭೂತ ಇನ್ನು ಜೀವಂತವಾಗಿದೆ. ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಸವರ್ಣಿಯರು,ದಲಿತರ ನಡುವಿನ ಅಂತರ ಇದೆ. ದಲಿತರು ಬರಬಾರದು ಅನ್ನೋದಕ್ಕೆ ಕಟಿಂಗ್ ಶಾಪ್ ಬಂದ್ ಮಾಡಿರೋದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸೋ ಕೆಲಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ