AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ವೆಯಾಗಿದ್ದರೂ ಅನೈತಿಕ ಸಂಬಂಧ, ಇಬ್ಬರು ಜಗತ್ತಿನಿಂದ ದೂರ ಆಗುತ್ತೇವೆಂದು ಸಾವಿನ ಹಾದಿ ಹಿಡಿದ ಜೋಡಿ

ಇಬ್ಬರೂ ಒಂದೇ ಗ್ರಾಮದವರು. ಆದ್ರೆ, ಜಾತಿ ಮಾತ್ರ ಬೇರೆ-ಬೇರೆ. ಇಬ್ಬರಿಗೂ ಈಗಾಗಲೇ ಮದುವೆಯಾಗಿದ್ದರೂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಾವಿನ ಹಾದಿ ಹಿಡಿದಿದ್ದಾರೆ.

ಮದ್ವೆಯಾಗಿದ್ದರೂ ಅನೈತಿಕ ಸಂಬಂಧ, ಇಬ್ಬರು ಜಗತ್ತಿನಿಂದ ದೂರ ಆಗುತ್ತೇವೆಂದು ಸಾವಿನ ಹಾದಿ ಹಿಡಿದ ಜೋಡಿ
ಸಾಂದರ್ಭಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on:May 31, 2023 | 3:12 PM

ಕೊಪ್ಪಳ: ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಮೃತರನ್ನ ಪೀರಸಾಬ್ ನದಾಫ್ (33), ಶಾರದಾ ಶರಣಪ್ಪ ಬಸಾಪೂರ (30) ಎಂದು ಗುರುತಿಸಲಾಗಿದೆ.  ಪೀರಸಾಬ್ ನದಾಫ್ ಹಾಗೂ ಶಾರದಾ ಇವರಿಬ್ಬರು ಮಾಲಗಿತ್ತಿ ಗ್ರಾಮದವರು. ಇವರಿಬ್ಬರಿಗೂ ಮದುವೆಯಾಗಿದೆ. ಆದರೂ ಸಹ ಈ ಇಬ್ಬರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ವಿಚಾರ ಗ್ರಾಮದಲ್ಲಿ ಎಲ್ಲರಿಗೂ ಗೊತ್ತಾಗಿದ್ದು, ಹಿರಿಯರು ಬುದ್ಧಿ ಹೇಳಿದ್ದರು. ಆದರೂ ಬಿಡದ ಇವರು ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇದೇ ವಿಚಾರಕ್ಕೆ ಪೀರಸಾಬ್ ನದಾಫ್​ನ ಹೆಂಡತಿ ತನ್ನ ಗಂಡನ ಸಹವಾಸ ಬಿಡು ಎಂದು ಶಾರದಾ ಜೊತೆ ಆಗಾಗ ಜಗಳ ಮಾಡುತ್ತಿದ್ದಳು. ಇವರಿಬ್ಬರ ಸಂಬಂಧ ವಿರೋಧಗಳು ಹೆಚ್ಚಾಗುತ್ತಿದ್ದಂತೆಯೇ  ದೂರ ಆಗುವುದಾದರೇ ಇಬ್ಬರು ಜಗತ್ತಿನಿಂದ ದೂರ ಆಗುತ್ತೇವೆ ಎಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Bengaluru News| ಮದುವೆಯಾಗಲು ನಿರಾಕರಿಸಿದ್ದ ಪ್ರಿಯಕರನನ್ನ ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ ಮಹಿಳೆ

ಒಬ್ಬರನೊಬ್ಬರು ಬಿಟ್ಟರಿಲಾಗದೇ ಇಂದು ಜಮೀನಿಗೆ ತೆರಳಿ ಇಬ್ಬರು ಒಟ್ಟಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹನಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೀರಸಾಬ್ ಹಾಗೂ ಶಾರದಾ ಇಬ್ಬರಿಗೂ ಬೇರೆ ಬೇರೆ ಮದುವೆ ಆಗಿತ್ತು. ಆದರೂ ಸಹ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಅನೈತಿಕ ಸಂಬಂಧ ತಿಳಿದ ಪೀರಸಾಬನ ಪತ್ನಿ ಮೃತ ಶಾರದಾಳ ಜೊತೆ ಜಗಳವಾಡಿದ್ದಳು. ನನ್ನ ಗಂಡನ ಸಹವಾಸ ಬಿಡು ಎಂದು ಶಾರದಾ ಜೊತೆ ಆಗಾಗ ಗಲಾಟೆ ಮಾಡುತ್ತಿದ್ದಳು. ದೂರ ಆಗುವುದಾದರೇ ಇಬ್ಬರು ಜಗತ್ತಿನಿಂದ ದೂರ ಆಗುತ್ತೇವೆ ಎಂದು ಪೀರಸಾಬ್ ಹಾಗೂ ಶಾರದಾ ಅಂದಿದ್ದರಂತೆ. ಊರ ಹಿರಿಯರು ಇಬ್ಬರಿಗೂ ತಿಳುವಳಿಕೆ ಹೇಳಿದ್ದರು. ಆದರೂ ಕೂಡ ಪೀರಸಾಬ್ ಹಾಗೂ ಶಾರದಾ ಯಾರ ಮಾತು ಕೇಳಿರಲಿಲ್ಲ. ಕೊನೆಗೆ ಇಬ್ಬರೂ ತಮ್ಮ ಕುಟುಂಬವನ್ನು ನೋಡದೇ ಸಾವಿನ ಹಾದಿ ಹಿಡಿದಿರುವುದು ನಿಜಕ್ಕು ದುರಂತ.

Published On - 3:08 pm, Wed, 31 May 23

Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ