ಡಿಕೆಶಿಗೆ ಮತ್ತೆ ಶಾಕ್​: ವಿಚಾರಣೆಗೆ ಹಾಜರಾಗುವಂತೆ ಆಮಂತ್ರಣ ನೀಡಿದ CBI

ಡಿಕೆಶಿಗೆ ಮತ್ತೆ ಶಾಕ್​: ವಿಚಾರಣೆಗೆ ಹಾಜರಾಗುವಂತೆ ಆಮಂತ್ರಣ ನೀಡಿದ CBI

ಬೆಂಗಳೂರು: ಪುತ್ರಿ ಐಶ್ವರ್ಯಾಳ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ CBI ಶಾಕ್​ ನೀಡಿದೆ. ನವೆಂಬರ್ 19ರಂದು ನಿಶ್ಚಿತಾರ್ಥದ ದಿನ ಡಿಕೆಶಿ ಸಿಬಿಐನಿಂದ ನೋಟಿಸ್​ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್​ ನವೆಂಬರ್ 25ರಂದು ಸಿಬಿಐ ವಿಚಾರಣೆಗೆ ಹಾಜರಾಗುತ್ತೇನೆ. ನವೆಂಬರ್ 19ರಂದು ಸಿಬಿಐನಿಂದ ನನಗೆ ನೋಟಿಸ್ ಬಂದಿದೆ. ಬೆಂಗಳೂರಿನ ಸಿಬಿಐ ಕಚೇರಿಯಿಂದ ನೋಟಿಸ್ ಬಂದಿತ್ತು. ನ.23ರಂದು ವಿಚಾರಣೆಗೆ ಹಾಜರಾಗಲು ಸಿಬಿಐ ಸೂಚಿಸಿತ್ತು. ಆದರೆ, ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ.25ರಂದು ವಿಚಾರಣೆಗೆ ಹಾಜರಾಗ್ತೇನೆ. ಈ ಬಗ್ಗೆ ಸಿಬಿಐ […]

KUSHAL V

| Edited By: sadhu srinath

Nov 21, 2020 | 12:18 PM

ಬೆಂಗಳೂರು: ಪುತ್ರಿ ಐಶ್ವರ್ಯಾಳ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ CBI ಶಾಕ್​ ನೀಡಿದೆ. ನವೆಂಬರ್ 19ರಂದು ನಿಶ್ಚಿತಾರ್ಥದ ದಿನ ಡಿಕೆಶಿ ಸಿಬಿಐನಿಂದ ನೋಟಿಸ್​ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್​ ನವೆಂಬರ್ 25ರಂದು ಸಿಬಿಐ ವಿಚಾರಣೆಗೆ ಹಾಜರಾಗುತ್ತೇನೆ. ನವೆಂಬರ್ 19ರಂದು ಸಿಬಿಐನಿಂದ ನನಗೆ ನೋಟಿಸ್ ಬಂದಿದೆ. ಬೆಂಗಳೂರಿನ ಸಿಬಿಐ ಕಚೇರಿಯಿಂದ ನೋಟಿಸ್ ಬಂದಿತ್ತು. ನ.23ರಂದು ವಿಚಾರಣೆಗೆ ಹಾಜರಾಗಲು ಸಿಬಿಐ ಸೂಚಿಸಿತ್ತು. ಆದರೆ, ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ.25ರಂದು ವಿಚಾರಣೆಗೆ ಹಾಜರಾಗ್ತೇನೆ. ಈ ಬಗ್ಗೆ ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Follow us on

Related Stories

Most Read Stories

Click on your DTH Provider to Add TV9 Kannada