ಕೆಆರ್ಐಡಿಎಲ್ ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಗದಗನ ಕೆಆರ್ಐಡಿಎಲ್ ಎಇಇ ಪರ್ವೀಜ್ ನಾಪತ್ತೆಯಾಗಿ 16 ದಿನಗಳಾಗಿವೆ. ನಾಳೆ ಮೊಮ್ಮಗ ಮೊಹಮ್ಮದ್ ಸಾದ್‌ನ ಹುಟ್ಟುಹಬ್ಬವಿದ್ದು, ಮಗನಿಲ್ಲದ ನೋವಿನಲ್ಲಿ ತಂದೆ ಜಾಫರಸಾಬ್ ಕಣ್ಣೀರಿಟ್ಟಿದ್ದಾರೆ. ಪ್ರಾಮಾಣಿಕ ಕೆಲಸಗಾರನಾಗಿದ್ದ ಪರ್ವೀಜ್ ಅನ್ನು ಸುರಕ್ಷಿತವಾಗಿ ಹುಡುಕಿಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಫೋನ್ ಸಂಪರ್ಕ ಕಡಿತಗೊಂಡಿದ್ದು, ಎಲ್ಲರಲ್ಲೂ ಆತಂಕ ಮನೆಮಾಡಿದೆ.
ಗದಗ, ಸೆಪ್ಟೆಂಬರ್ 28: ಗದಗ ಜಿಲ್ಲೆಯ ಕೆಆರ್ಐಡಿಎಲ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರ್ವೇಜ್ ನಾಪತ್ತೆಯಾಗಿ ಇಂದಿಗೆ 16 ದಿನಗಳು ಕಳೆದಿವೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಕೊನೆಯದಾಗಿ ಮೊಬೈಲ್‌ನ ಲೊಕೇಶನ್ ಪತ್ತೆಯಾಗಿದ್ದು, ಬಿಟ್ಟರೆ ಬಾಕಿ ಯಾವುದೇ ಸುಳಿವು ಸಿಕ್ಕಿಲ್ಲ. ನಾಪತ್ತೆಯಾಗಿರುವ ಪರ್ವೇಜ್ ಅವರ ತಂದೆ ಜಾಫರಸಾಬ್ ಅವರು ಮಗನನ್ನು ನೆನೆದು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ್ದಾರೆ. ‘ನಾಳೆ ಮೊಮ್ಮಗನ ಮೊದಲ ಹುಟ್ಟುಹಬ್ಬವಿದ್ದು, ಈ ಸಂಭ್ರಮಕ್ಕೆ ಅಪ್ಪ ಇಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. ಅದ್ಧೂರಿ ಹುಟ್ಟುಹಬ್ಬ ಆಚರಿಸುವ ಕನಸು ಕಂಡಿದ್ದ ಕುಟುಂಬಸ್ಥರಿಗೆ ಈಗ ಕೇವಲ ಆತಂಕ ಮಾತ್ರ ಉಳಿದಿದೆ’ ಎಂದು ಕಣ್ಣೀರು ಹಾಕಿದ್ದಾರೆ. ಇನ್ನು ಪರ್ವಿಜ್ ತಂದೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ್ದು, ಧೈರ್ಯ ತುಂಬಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ಗೆ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!

