ಡಿಸೆಂಬರ್​ವರೆಗೂ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ನಡೆಯಲ್ಲ; ಸಚಿವ ಕೆ.ಎಸ್.ಈಶ್ವರಪ್ಪ

ಕೇವಲ ನಾಯಕತ್ವದ ಬದಲಾವಣೆ ಮಾತ್ರವಲ್ಲ. ಕೊರೊನಾ ನಿರ್ವಹಣೆ ಕ್ರಮಗಳ ಬಗ್ಗೆಯೂ ಚರ್ಚೆ ಆಗಿದೆ. ಸದ್ಯಕ್ಕೆ ಕೊರೊನಾ ಬಗ್ಗೆ ಮಾತ್ರ ಚರ್ಚೆ ಮಾಡಬೇಕು. ಈಗ ನಾಯಕತ್ವ ಬದಲಾವಣೆ ಮುಗಿದ ವಿಚಾರ. ಮೇಲಾಗಿ ಜಲಸಂಪನ್ಮೂಲ ಇಲಾಖೆ ಟೆಂಡರ್ ಬಗ್ಗೆ ಸಿಎಂ ಹಾಗೂ ಆ ಇಲಾಖೆ ಕಾರ್ಯದರ್ಶಿ ಉತ್ತರ ನೀಡಿದ್ದಾರೆ.

ಡಿಸೆಂಬರ್​ವರೆಗೂ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ನಡೆಯಲ್ಲ; ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ
Edited By: sandhya thejappa

Updated on: Jun 19, 2021 | 10:34 AM

ದಾವಣಗೆರೆ: ಸದ್ಯಕ್ಕೆ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಯುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಡಿಸೆಂಬರ್ವರೆಗೂ ಚುನಾವಣೆ ನಡೆಯಲ್ಲ. ಕೊರೊನಾ ಮೂರನೇ ಅಲೆ ಭೀತಿಯಿರುವ ಹಿನ್ನೆಲೆ ಸದ್ಯಕ್ಕೆ ಚುನಾವಣೆ ಬೇಡವೆಂದು ನಿರ್ಧರಿಸಲಾಗಿದೆ ಎಂದು ದಾವಣಗೆರೆಯಲ್ಲಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಬಿಜೆಪಿ ಒಂದು ಕುಟುಂಬ. ನಮ್ಮ ಅಭಿಪ್ರಾಯ ತಿಳಿಸುವುದಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವಕಾಶ ನೀಡಿದ್ದರು ಎಂದು ತಿಳಿಸಿದ ಅವರು ಇದೊಂದು ವಿಶೇಷ ಪದ್ಧತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ನಾಯಕತ್ವದ ಬದಲಾವಣೆ ಮಾತ್ರವಲ್ಲ. ಕೊರೊನಾ ನಿರ್ವಹಣೆ ಕ್ರಮಗಳ ಬಗ್ಗೆಯೂ ಚರ್ಚೆ ಆಗಿದೆ. ಸದ್ಯಕ್ಕೆ ಕೊರೊನಾ ಬಗ್ಗೆ ಮಾತ್ರ ಚರ್ಚೆ ಮಾಡಬೇಕು. ಈಗ ನಾಯಕತ್ವ ಬದಲಾವಣೆ ಮುಗಿದ ವಿಚಾರ. ಮೇಲಾಗಿ ಜಲಸಂಪನ್ಮೂಲ ಇಲಾಖೆ ಟೆಂಡರ್ ಬಗ್ಗೆ ಸಿಎಂ ಹಾಗೂ ಆ ಇಲಾಖೆ ಕಾರ್ಯದರ್ಶಿ ಉತ್ತರ ನೀಡಿದ್ದಾರೆ. ಇದರ ಬಗ್ಗೆ ಚರ್ಚೆಯೇ ಬೇಡ ಎಂದು ಸಚಿವರು ಅಭಿಪ್ರಾಯಪಟ್ಟರು.

ಮೆಚ್ಚುಗೆ ವ್ಯಕ್ತಪಡಿಸಿದ ಈಶ್ವರಪ್ಪ

ನಗರದ ಎಸ್ ಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಕೊರೊನಾ ಸೋಂಕಿತರಿಗೆ ಉಚಿತ ಊಟ ತಿಂಡಿ ವಿತರಣೆ ವೀಕ್ಷಿಸಿದ ಈಶ್ವರಪ್ಪ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಿರಿಗೆರೆ ತರಳುಬಾಳು ಗುರುಪೀಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾಧನೆ ಶ್ಲಾಘನೀಯ. 50 ದಿನಗಳಿಂದ ನಿತ್ಯ ಎರಡು ಸಾವಿರ ಜನರಿಗೆ ಊಟ ತಿಂಡಿ ನೀಡುತ್ತಿರುವುದು ಇತರ ಸ್ವಾಮೀಜಿಗೆ ಮಾದರಿ ಎಂದರು.

ಇದನ್ನೂ ಓದಿ

‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ

ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿಗಾಗಿ 6,316 ಮರಗಳ ತೆರವಿಗೆ ಆಲೋಚನೆ; ಪರಿಸರ ಪ್ರೇಮಿಗಳ ಆಕ್ರೋಶ

(KS Eshwarappa says there will be no Taluk And Zilla Panchayat Election till December)

Web contact

TV9 Kannada

Read More
Follow Us