AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ನಿಗಮಗಳ ಯಾವ ನೌಕರರು ಆತ್ಮಹತ್ಯೆ ಮಾಡಿಕೊಳ್ಳಬಾರದು: ಕೋಡಿಹಳ್ಳಿ ಚಂದ್ರಶೇಖರ್

ಸಾರಿಗೆ ನೌಕರರ ಆತ್ಮಹತ್ಯೆ ವಿಷಾದದ ಸಂಗತಿ. ಸಾರಿಗೆ ನಿಗಮಗಳ ನೌಕರರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಾರಿಗೆ ನಿಗಮಗಳ ಸಂಘಟನೆಗಳು ಕರೆ ನೀಡಿರುವ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ವಿನಂತಿಸಿದರು.

ಸಾರಿಗೆ ನಿಗಮಗಳ ಯಾವ ನೌಕರರು ಆತ್ಮಹತ್ಯೆ ಮಾಡಿಕೊಳ್ಳಬಾರದು: ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 09, 2021 | 3:49 PM

Share

ಬೆಂಗಳೂರು: ಸಮಸ್ಯೆಗಳು ಎದುರಾದಾಗ ದಿಟ್ಟತನದಿಂದ ಹೋರಾಡಿ ಪರಿಹಾರ ಕಂಡುಕೊಳ್ಳಬೇಕೇ ವಿನಃ ಹಿಂದೆ ಸರಿಯಬಾರದು. ಇದು ಎಲ್ಲ ನೌಕರರಲ್ಲಿ ನನ್ನ ಮನವಿ. ಸಾರಿಗೆ ನೌಕರರ ಆತ್ಮಹತ್ಯೆ ವಿಷಾದದ ಸಂಗತಿ. ಸಾರಿಗೆ ನಿಗಮಗಳ ನೌಕರರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಾರಿಗೆ ನಿಗಮಗಳ ಸಂಘಟನೆಗಳು ಕರೆ ನೀಡಿರುವ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ವಿನಂತಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು ಸರ್ಕಾರ ವೇತನ ಶ್ರೇಣಿಯ ವ್ಯತ್ಯಾಸ ಮಾಡುತ್ತಿದೆ. ಸಾರಿಗೆ ನೌಕರರ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ನಿನ್ನೆಯ ಸಭೆಯಲ್ಲಿ ಯಾವುದೇ ತೀರ್ಮಾನಗಳು ಆಗಿಲ್ಲ. ರಾಜ್ಯ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲೇಬೇಕು ಎಂದು ಒತ್ತಾಯಿಸಿದರು.

ಸಾರಿಗೆ ನೌಕರರಿಗೆ ಮನೆ ಖಾಲಿ ಮಾಡುವಂತೆ ಮತ್ತು ಕೆಲಸ ಮಾಡದಿದ್ದರೆ ಸೇವೆಯಿಂದ ವಜಾ ಮಾಡುತ್ತೇವೆ ಎಂದು ನೋಟಿಸ್ ನೀಡಿ ಸರ್ಕಾರ ಬೆದರಿಸಲು ಯತ್ನಿಸುತ್ತಿದೆ. ಇಂಥವಕ್ಕೆ ಸಾರಿಗೆ ನೌಕರರು ಹೆದರುವುದಿಲ್ಲ ಎಂದು ಹೇಳಿದರು. ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡುತ್ತಿದೆ. ರಾಜ್ಯ ಸರ್ಕಾರ ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುತ್ತಿದೆ. ಖಾಸಗೀಕರಣ ತಪ್ಪಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನ, ಮುಷ್ಕರ, ಪ್ರತಿಭಟನೆ ಮುಂದುವರಿಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ಘೋಷಿಸಿದರು.

‘ವಿದ್ಯಾರ್ಥಿನಿ ನೋಟಿಸ್​ಗೆ ಬಿಎಂಟಿಸಿ ಜವಾಬ್ದಾರಿ’ ‘ಬಿಎಂಟಿಸಿ ನೌಕರರು ಮುಷ್ಕರ ನಡೆಸುತ್ತಿರುವ ನನಗೆ ತೊಂದರೆಯಾಗಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ₹ 10 ಲಕ್ಷ ಪರಿಹಾರ ಕೇಳಿ ಲೀಗಲ್ ನೋಟಿಸ್ ನೀಡಿರುವ ವಿಚಾರದ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಆಕೆಗೆ ಆಗಿರುವ ತೊಂದರೆಗೆ ಬಿಎಂಟಿಸಿಯೇ ಜವಾಬ್ದಾರಿ. ಪಾಸ್‌ಗೆ ಹಣ ಪಡೆದಿರುವುದು ಬಿಎಂಟಿಸಿ. ಯಾವುದೇ ಲಾಭ, ನಷ್ಟವಾದರೂ ಅದಕ್ಕೆ ಅವರೇ ಹೊಣೆ. ವಿದ್ಯಾರ್ಥಿಗಳು ಕೇಳುವುದರಲ್ಲಿ ನ್ಯಾಯ ಇದೆ. ವೇತನ ಹೆಚ್ಚಳಕ್ಕೆ ನಾವು ಮುಷ್ಕರ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಸಮಸ್ಯೆ BMTC ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಾರಿಗೆ ನೌಕರ ನೇಣಿಗೆ ಶರಣು ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಸಾರಿಗೆ ನೌಕರ ಶಿವಕುಮಾರ್ ನೀಲಗಾರ(40) ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳ ಕಿರುಕುಳಕ್ಕೆ ನೊಂದು ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಾರಿಗೆ ನೌಕರರನ್ನು ಕರೆದು ಸರ್ಕಾರ ಚರ್ಚಿಸಬೇಕು ಸವದತ್ತಿಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಾರಿಗೆ ಸಚಿವರ ಜಿಲ್ಲೆಯಲ್ಲೇ ಹೀಗಾದರೆ ರಾಜ್ಯದ ಬೇರೆ ಜಿಲ್ಲೆಗಳ ಪರಿಸ್ಥಿತಿ ಏನೆಂದು ಡಿಕೆಶಿ ಪ್ರಶ್ನೆಸಿದ್ದಾರೆ. ಸಾರಿಗೆ ನೌಕರರನ್ನು ಕರೆದು ಸರ್ಕಾರ ಚರ್ಚಿಸಬೇಕು. ನೌಕರರನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳಿ. ಎಲ್ಲಾ ನೌಕರರ ಮೇಲೆ ಸಂಶಯ ಪಡಬೇಡಿ ಎಂದು ಡಿಕೆ ಶಿವಕುಮಾರ್ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡ್ರು.

ಇದನ್ನೂ ಓದಿ: ಸರಕಾರ ಮುಷ್ಕರ ನಿರತರನ್ನ ಬಹಳ ಅಸಡ್ಡೆಯಿಂದ ನೋಡುತ್ತಿದೆ: ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ

ಇದನ್ನೂ ಓದಿ: ಸಾರಿಗೆ ಮುಷ್ಕರ; ಕೋಡಿಹಳ್ಳಿ ಚಂದ್ರಶೇಖರ್​ಗೆ 10 ಲಕ್ಷ ರೂ. ಪರಿಹಾರ ಕೇಳಿ ಲೀಗಲ್ ನೋಟಿಸ್ ನೀಡಿದ ಬಿ.ಇ. ವಿದ್ಯಾರ್ಥಿನಿ

KSRTC BMTC Bus Strike Kodihalli Chandrashekar replies on Suicide Attempts of Employees

ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!