AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC: ಜೂನ್ 14ರ ಬಳಿಕ ಲಾಕ್​ಡೌನ್ ತೆಗೆದರೆ ರಸ್ತೆಗಿಳಿಯಲಿವೆ ಸರ್ಕಾರಿ ಬಸ್​ಗಳು, ಟಿಕೆಟ್ ದರ ಹೆಚ್ಚಳ ಮಾಡಲ್ಲ​: ಸಾರಿಗೆ ಸಚಿವ ಲಕ್ಷ್ಮಣ ಸವದಿ

KSRTC: ಮತ್ತೆ ಬಸ್ ಸೇವೆ ಆರಂಭಿಸಿದ ನಂತತ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ 4 ನಿಗಮಗಳಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಿಸುವುದಿಲ್ಲ. ಸರ್ಕಾರಿ ಬಸ್​ಗಳಲ್ಲಿ ಓಡಾಡುವವರು ಬಡವರೇ ಆಗಿರುತ್ತಾರೆ. ಹೀಗಾಗಿ ಸಂಕಷ್ಟದ ಸಮಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ. ಪ್ರಯಾಣ ದರ ಏರಿಕೆಗೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

KSRTC: ಜೂನ್ 14ರ ಬಳಿಕ ಲಾಕ್​ಡೌನ್ ತೆಗೆದರೆ ರಸ್ತೆಗಿಳಿಯಲಿವೆ ಸರ್ಕಾರಿ ಬಸ್​ಗಳು, ಟಿಕೆಟ್ ದರ ಹೆಚ್ಚಳ ಮಾಡಲ್ಲ​: ಸಾರಿಗೆ ಸಚಿವ ಲಕ್ಷ್ಮಣ ಸವದಿ
ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್​ಗಳು
TV9 Web
| Edited By: |

Updated on:Jun 08, 2021 | 3:57 PM

Share

ಬೆಂಗಳೂರು: ಲಾಕ್​ಡೌನ್​ನಿಂದ ಕೆಎಸ್​​ಆರ್​ಟಿಸಿಗೆ 4,000 ಕೋಟಿ ನಷ್ಟವಾಗಿದ್ದು, ಜೂನ್ 14ರ ಬಳಿಕ ಕರ್ನಾಟಕದಲ್ಲಿ ಲಾಕ್​ಡೌನ್ ಸಡಿಲಿಸಿದರೆ ಹಂತ ಹಂತವಾಗಿ ಸರ್ಕಾರಿ ಬಸ್​ ಸೇವೆ ಆರಂಭಿಸುತ್ತೇವೆ ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೆಎಸ್​​ಆರ್​ಟಿಸಿಗೆ ಆದ ನಷ್ಟವನ್ನು ಸುಧಾರಿಸಿಕೊಳ್ಳಲು 4 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾಗಿ ಅವರು ತಿಳಿಸಿದರು. ಲಾಕ್​ಡೌನ್ ಸಡಿಲಿಕೆಯ ನಂತರ ಬಸ್ ಸಂಚಾರ ಆರಂಭಿಸಿದರೂ ಬಸ್​ಗಳಲ್ಲಿ ಕೊವಿಡ್ ತಡೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ದೈಹಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರ ಓಡಾಟ ನಡೆಸಬಹುದು. ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯೇ ಮಾಸ್ಕ್, ಸ್ಯಾನಿಟೈಸರ್​ ನೀಡಲಿದೆ ಎಂದು ಅವರು ಮಾಹಿತಿ ನೀಡಿದರು.

ಮತ್ತೆ ಬಸ್ ಸೇವೆ ಆರಂಭಿಸಿದ ನಂತತ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ 4 ನಿಗಮಗಳಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಿಸುವುದಿಲ್ಲ. ಸರ್ಕಾರಿ ಬಸ್​ಗಳಲ್ಲಿ ಓಡಾಡುವವರು ಬಡವರೇ ಆಗಿರುತ್ತಾರೆ. ಹೀಗಾಗಿ ಸಂಕಷ್ಟದ ಸಮಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ. ಪ್ರಯಾಣ ದರ ಏರಿಕೆಗೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕೊವಿಡ್ 2 ಡೋಸ್ ಲಸಿಕೆ ಪಡೆಯುವವರೆಗೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ಹಾಕುವುದಿಲ್ಲ. ಸಾರಿಗೆ ಸಿಬ್ಬಂದಿ 2 ಡೋಸ್ ಲಸಿಕೆ ಪಡೆದ ಬಳಿಕ ಸೇವೆಗೆ ಆಗಮಿಸುವಂತೆ ತಿಳಿಸುತ್ತೇವೆ ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋತಿಗಳೇಕೆ ಮನೆಗೆ ಬರುತ್ತಿವೆ? ಅರಣ್ಯ ಇಲಾಖೆಗೆ ಮಹತ್ವದ ಸೂಚನೆ ನೀಡಿದ ಹೈಕೋರ್ಟ್​

ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುವುದನ್ನು ನಿಲ್ಲಿಸಿ: ಸುಪ್ರೀಂಕೋರ್ಟ್ (KSRTC buses begin its service from June 14th if the lockdown is relaxed says Karnataka Transport Minister Laxman Savadi)

Published On - 3:51 pm, Tue, 8 June 21

ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್