ದುಪ್ಪಟ್ಟಾಗಲಿದೆ ಲಿಫ್ಟ್, ಜನರೇಟರ್ ತಪಾಸಣೆ ಹಾಗೂ ರಿನೀವಲ್ ಶುಲ್ಕ: ಮತ್ತೊಂದು ಬೆಲೆ ಏರಿಕೆಗೆ ಮುಂದಾದ ಇಂಧನ ಇಲಾಖೆ

ಬಿಎಂಟಿಸಿ,ಕೆಎಸ್​ಆರ್​ಟಿಸಿ, ಮೆಟ್ರೋ, ಹಾಲು,ನೀರು, ವಿದ್ಯುತ್ ಸೇರಿದಂತೆ ಈಗಾಗಲೇ ಎಲ್ಲಾ ದರಗಳು ಗಗನಕ್ಕೇರಿವೆ. ಇದರಿಂದ ಜನಸಾಮಾನ್ಯರು ರೋಸಿ ಹೋಗಿರುವ ಮಧ್ಯೆಯೇ ಇದೀಗ ಇಂಧನ ಇಲಾಖೆ ಲಿಫ್ಟ್, ಟ್ರಾನ್ಸ್​ಫರ್ಮರ್, ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಲು ಮುಂದಾಗಿದೆ. ಇದಕ್ಕೆ ಉದ್ಯಮ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ದುಪ್ಪಟ್ಟಾಗಲಿದೆ ಲಿಫ್ಟ್, ಜನರೇಟರ್ ತಪಾಸಣೆ ಹಾಗೂ ರಿನೀವಲ್ ಶುಲ್ಕ: ಮತ್ತೊಂದು ಬೆಲೆ ಏರಿಕೆಗೆ ಮುಂದಾದ ಇಂಧನ ಇಲಾಖೆ
ಸಾಂದರ್ಭಿಕ ಚಿತ್ರ
Edited By:

Updated on: Mar 31, 2025 | 7:41 AM

ಬೆಂಗಳೂರು, ಮಾರ್ಚ್ 31: ಸದ್ಯ ಕರ್ನಾಟಕದಲ್ಲಿ (Karnataka) ಮೆಟ್ರೋ, ಬಸ್, ಹಾಲು, ಕರೆಂಟ್ ಎಲ್ಲವೂ ದುಬಾರಿಯಾಗಿವೆ. ಈ ಬಾರಿ ಜನ ಸಾಮಾನ್ಯರ ಪಾಲಿಗೆ ‘ಏಪ್ರಿಲ್’ ಕಂಟಕವಾಗುತ್ತಿದೆ. ಏಪ್ರಿಲ್​ನಲ್ಲಿ ಜನರಿಗೆ ದುಬಾರಿ ದುನಿಯಾದ ರ್ಶನವಾಗುತ್ತಿದ್ದು, ಹಾಲು, ನೀರು, ಕರೆಂಟ್, ಟೋಲ್ ಶುಲ್ಕ, ಕಸದ ಸೆಸ್ ಎಲ್ಲವೂ (Price Hike) ಹೆಚ್ಚಾಗುತ್ತಿವೆ. ಮತ್ತೊಂದೆಡೆ ಎಟಿಎಂ ವಿತ್​​ಡ್ರಾ ಶುಲ್ಕವೂ ಹೆಚ್ಚಳವಾಗುತ್ತಿದೆ. ಇತ್ತ ಇಂಧನ ಇಲಾಖೆಯ ಅಡಿಯಲ್ಲಿ ಬರುವ Department of Electrical Inspectorate ನಿಂದ ಪರಿಶೀಲನೆ ಮತ್ತು ಪ್ರತಿ ವರ್ಷ ರಿನೀವಲ್ ಮಾಡುವ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಲಾಗುತ್ತಿದೆ. ಈ ಹಿಂದೆ ಮೂರು ಮಹಡಿಯ ಮನೆಗೆ ಲಿಫ್ಟ್ ಹಾಕಿಸಿಕೊಂಡಿದ್ದರೆ ಆ ಮನೆಯನ್ನು ಪರಿಶೀಲನೆ ಮಾಡಿ ರಿನೀವಲ್ ಮಾಡಲು 800 ರಿಂದ 1000 ರುಪಾಯಿ ಶುಲ್ಕ ತೆಗೆದುಕೊಳುತ್ತಿದ್ದ ಇಲಾಖೆ, ಈಗ ಆ ದರವನ್ನು 5 ಸಾವಿರ ರೂ.ನಿಂದ 8 ಸಾವಿರ ರೂಪಾಯಿಗೆ ಏರಿಕೆ ಮಾಡುತ್ತಿದೆ. ಈ ಹಿಂದೆ ಮನೆ, ಕಚೇರಿ, ಫ್ಯಾಕ್ಟರಿಗೆ 25 ಕೆವಿಎ ಟ್ರಾನ್ಸ್​​ಫಾರ್ಮರ್ ಹಾಕಿಸಿಕೊಂಡಿದ್ದರೆ ಅದನ್ನು ಪರಿಶೀಲನೆ ಮಾಡಲು 1300 ರೂ.ನಿಂದ 1500 ರೂ. ಶುಲ್ಕ ಪಡೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಆ ದರವನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ ಮಾಡಲು ತೀರ್ಮಾನಿಸಲಅಗಿದೆ ಎಂದು ಮೂಲಗಳು ತಿಳಿಸಿವೆ.

ಡಿಪಾರ್ಟ್​ಮೆಂಟ್ ಆಫ್ ಎಲೆಕ್ಟ್ರಿಕಲ್ ಇನ್ಸ್​ಪೆಕ್ಟರೇಟ್​ನ ಬೆಲೆ ಏರಿಕೆ ನಿರ್ಧಾರಕ್ಕೆ ಎಫ್​ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ 5 ರಿಂದ 10 ಕೆವಿಎ ಸಣ್ಣ ಜನರೇಟರ್ ಪರಿಶೀಲನೆ ಮತ್ತು ರಿನೀವಲ್​ಗೆ 2 ಸಾವಿರ ರೂ. ಇದ್ದ ಶುಲ್ಕವನ್ನು ಇದೀಗ 5 ರಿಂದ 8 ಸಾವಿರ ರೂ. ವರೆಗೆ ಏರಿಕೆ ಮಾಡಲಾಗಿದೆ. ಇದು ಕೇವಲ ಆರಂಭಿಕ ಶುಲ್ಕಗಳಷ್ಟೇ. ಮಹಡಿ ಹೆಚ್ಚಾದಂತೆ ಲಿಫ್ಟ್ ಶುಲ್ಕ, transformer ನ ಕೆವಿಎ ಹೆಚ್ಚಾದಂತೆ ಮತ್ತು ಜನರೇಟರ್ ಕೆವಿಎ ಹೆಚ್ಚಾದಂತೆ ರಿನೀವಲ್ ಶುಲ್ಕ ಹೆಚ್ಚಾಗುತ್ತಲೇ ಹೋಗುತ್ತದೆ. ಇದರಿಂದ ಹೊಸದಾಗಿ ಮನೆ, ಅಪಾರ್ಟ್​ಮೆಂಟ್, ಫ್ಯಾಕ್ಟರಿ ಕಟ್ಟುವವರಿಗೂ, ಮತ್ತು ಈಗಾಗಲೇ ನಿರ್ಮಾಣವಾಗಿರುವ ಅಪಾರ್ಟ್​ಮೆಂಟ್, ಫ್ಯಾಕ್ಟರಿ, ಮನೆ ಮಾಲೀಕರಿಗೂ ಹೆಚ್ಚಿನ ಹೊರೆ ಆಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕರು, ‘ಇದು ಸರಿಯಾದ ನಡೆಯಲ್ಲ. ಸರ್ಕಾರ ಗ್ಯಾರಂಟಿಗೆ ಹಣ ಹೊಂದಿಸಲು ಈ ರೀತಿ ದರ ಏರಿಕೆ ಮಾಡುವುದು ಸರಿಯಲ್ಲ’ ಎಂದಿದ್ದಾರೆ.

ಇದನ್ನೂ ಓದಿ
ಇಂದು ಚಾಮರಾಜಪೇಟೆ, ಮೈಸೂರು ರಸ್ತೆಗಳಲ್ಲಿ ಸಂಚರಿಸುವವರು ಗಮನಿಸಿ
ರಂಜಾನ್​ ಹಬ್ಬ: ಮಾ.31 ರಂದು ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ
ಬೆಂಗಳೂರಿನ ಆ ಸ್ಥಳದಲ್ಲಿ ಸ್ಫೋಟಕ ಇಡಲು ಪ್ಲಾನ್: ಬಾಯ್ಬಿಟ್ಟ ಅಬ್ದುಲ್
ಬ್ರಿಟಿಷ್ ಕಾಲದ ಟೋಪಿಗೆ ನಿವೃತ್ತಿ: ಪೊಲೀಸರ ತಲೆ ಮೇಲೆ ಸ್ಮಾರ್ಟ್​ ಹ್ಯಾಟ್​

ಇದನ್ನೂ ಓದಿ: ಹಾಲಿನ ದರ ಹೆಚ್ಚಳ ಪರಿಣಾಮ: ಕರ್ನಾಟಕದ ಹೋಟೆಲ್​​ಗಳಲ್ಲಿ ಏರಿಕೆಯಾಗುತ್ತಾ ಚಹಾ, ಕಾಫಿ ದರ?

ಒಟ್ಟಿನಲ್ಲಿ 2025 ದರ ಏರಿಕೆಯ ವರ್ಷವಾಗಿ ಪರಿಣಮಿಸುತ್ತಿದೆ ಎಂದರೆ ತಪ್ಪಾಗದೇನೋ. ಅದರಲ್ಲೂ ಏಪ್ರಿಲ್ ತಿಂಗಳಿನಿಂದ ಜನ ಸಾಮಾನ್ಯರಿಗೆ ನಾಲ್ಕೈದು ರೀತಿಯಲ್ಲಿ ಸರ್ಕಾರ ಶಾಕ್ ನೀಡಲು ಮುಂದಾಗಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ