ಬೆಂಗಳೂರು: ಕೊರೊನಾ ಲಾಕ್ಡೌನ್ ಅವಧಿಯಲ್ಲೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಮೂರನೇ ದಿನವಾದ ಇಂದೂ ಭರ್ಜರಿಗಾಗಿ ಮದ್ಯ ಸೇಲಾಗಿದೆ. ಇಂದು ಒಂದೇ ದಿನ 216 ಕೋಟಿ ರೂಪಾಯಿ ಆದಾಯ ಬಂದಿದೆ.
30 ಲಕ್ಷ ಐಎಂಎಲ್ ಲೀಟರ್ ಮದ್ಯ ಸೇಲ್ ಆಗಿದ್ದು, 7 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಒಟ್ಟಾರೆಯಾಗಿ ಇಂದು ಒಂದೇ ದಿನ ಅಬಕಾರಿ ಇಲಾಖೆಗೆ 216 ಕೋಟಿ ರೂಪಾಯಿ ಆದಾಯ ಬಂದಿದೆ.
ಮೇ 04 ರಂದು 45 ಕೋಟಿ ರೂಪಾಯಿ ಲಾಭ ಬಂದಿತ್ತು. ಮೇ 5ರಂದು 197 ಕೋಟಿ ರೂ. ಆದಾಯ ಬಂದಿತ್ತು. ನಾಳೆಯಿಂದ ಅಬಕಾರಿ ಸುಂಕ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ನಾಳೆ 300 ಕೋಟಿ ಆದಾಯ ನಿರೀಕ್ಷೆಯನ್ನು ಅಬಕಾರಿ ಇಲಾಖೆ ಹೊಂದಿದೆ.