
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಹಬ್ಬುತ್ತಿರುವ ವೇಗಕ್ಕೆ ರಾಜ್ಯ ಸರ್ಕಾರ ಕಂಗಾಲಾಗಿ ಹೋಗಿದ್ದು, ಕಠಿಣ ನಿಯಮಾವಳಿಗಳನ್ನು ರೂಪಿಸುವ ಸಲುವಾಗಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಸಭೆ ನಡೆಸುತ್ತಿದ್ದಾರೆ. ನಾಳೆ (ಏಪ್ರಿಲ್ 17) ಉಪಚುನಾವಣೆ ಮುಗಿದ ಬಳಿಕ ಏಪ್ರಿಲ್ 18ರಂದು ಸರ್ವಪಕ್ಷ ಸಭೆ ಕರೆದು ಲಾಕ್ಡೌನ್ ಬಗ್ಗೆ ಚರ್ಚಿಸುವುದಾಗಿಯೂ ಈಗಾಗಲೇ ತಿಳಿಸಿದ್ದಾರೆ. ಆದರೆ, ಸಭೆಗೂ ಮುನ್ನವೇ ಲಾಕ್ಡೌನ್ ಹೇರುವ ಬಗ್ಗೆ ಕಾಂಗ್ರೆಸ್ ತನ್ನ ಅಭಿಪ್ರಾಯವನ್ನು ತಿಳಿಸಿದ್ದು, ಟ್ವೀಟ್ ಮಾಡುವ ಮೂಲಕ ಲಾಕ್ಡೌನ್ ಅತ್ಯಂತ ಭೀಕರವಾದದ್ದು ಎಂದು ಹೇಳಿದೆ.
ನಾಳೆ ನಡೆಯಲಿದೆ ಕೊರೊನಾ ಸರ್ವಪಕ್ಷ ಸಭೆ
ಲಾಕ್ಡೌನ್ ಬಗ್ಗೆ ಸರ್ಕಾರ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಬಾರದು. ದ್ವಂದ್ವ ನಿಲುವು ತಾಳದೇ ಸ್ಪಷ್ಟ ಸಂದೇಶವನ್ನು ನೀಡಬೇಕು. ಲಾಕ್ಡೌನ್ ಕೊರೊನಾಗಿಂತಲೂ ಭೀಕರವಾದದ್ದು, ಈ ಕಹಿಸತ್ಯ ಹಿಂದಿನ ಅನುಭವದಿಂದಲೇ ತಿಳಿದಿದೆ. ವಲಸೆ ಕಾರ್ಮಿಕರಿಂದ ಹಿಡಿದು ಕೈಗಾರಿಕೆಗಳು, ಕಂಪನಿಗಳವರೆಗೂ ಲಾಕ್ಡೌನ್ಗೆ ಒಗ್ಗುವುದು ಕಷ್ಟಕರ ಎಂದು ರಾಜ್ಯ ಕಾಂಗ್ರೆಸ್ ಘಟಕ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ. ಆ ಮೂಲಕ ನಾಳೆ ನಡೆಯುವ ಸರ್ವಪಕ್ಷ ಸಭೆಯಲ್ಲಿಯೂ ಲಾಕ್ಡೌನ್ ಕುರಿತಾಗಿ ಕಾಂಗ್ರೆಸ್ ಅಸಮಾಧಾನವನ್ನು ವ್ಯಕ್ತಪಡಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:
ಕೈ ಮೀರುತ್ತಿದೆ ಕೊರೊನಾ ಪರಿಸ್ಥಿತಿ.. ಚುನಾವಣೆ ಅವಸರ ಮುಗಿಯುತ್ತಿದ್ದಂತೆ ಇಂದೇ ತುರ್ತು ಸಭೆ ಕರೆದ ಸಿಎಂ ಯಡಿಯೂರಪ್ಪ
Published On - 10:09 am, Fri, 16 April 21