Lok Sabha Elections: ಕರ್ನಾಟಕದಲ್ಲಿ 38 ದಿನಗಳಲ್ಲಿ 406.73 ಕೋಟಿ ರೂ. ಮೌಲ್ಯದ ನಗದು, ಮದ್ಯ ಜಪ್ತಿ

ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಕೇವಲ 38 ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ 406.73 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ಮದ್ಯ ಜಪ್ತಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 177 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

Lok Sabha Elections: ಕರ್ನಾಟಕದಲ್ಲಿ 38 ದಿನಗಳಲ್ಲಿ 406.73 ಕೋಟಿ ರೂ. ಮೌಲ್ಯದ ನಗದು, ಮದ್ಯ ಜಪ್ತಿ
ಸಾಂದರ್ಭಿಕ ಚಿತ್ರ
Follow us
Vinayak Hanamant Gurav
| Updated By: Ganapathi Sharma

Updated on: Apr 24, 2024 | 3:10 PM

ಬೆಂಗಳೂರು, ಏಪ್ರಿಲ್ 24: ಲೋಕಸಭೆ ಚುನಾವಣೆ (Lok Sabha Elections) ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತ್ತೊಂದೆಡೆ ಮಾದರಿ‌ ನೀತಿ ಸಂಹಿತೆ (Model Code of Conduct) ಜಾರಿಯಾದಾಗಿನಿಂದ ಅಕ್ರಮ ಚಟುವಟಿಕೆ ಮೇಲೆ‌ ಹದ್ದಿನ ಕಣ್ಣು ಇಟ್ಟಿರುವ‌ ಚುನಾವಣಾ ಆಯೋಗ (Election Commission) ದಾಖಲೆ ಪ್ರಮಾಣದಲ್ಲಿ ದುಡ್ಡು, ಮದ್ಯ ಜಪ್ತಿ ಮಾಡಿದೆ. ಕರ್ನಾಟಕದಾದ್ಯಂತ ಕೇವಲ 38 ದಿನಗಳಲ್ಲಿ 406.73 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಾರ್ಚ್ 14 ರಂದು ಲೋಕಸಭಾ ಚುನಾವಣೆ ಘೋಷಣೆಯಾಗಿತ್ತು. ದೇಶದಲ್ಲಿ ಅಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಅವತ್ತಿನಿಂದ ಇವತ್ತಿನ ವರೆಗೆ, ಅಂದರೆ 38 ದಿನಗಳ ವರೆಗೆ ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದ ಆಯೋಗ ರಾಜ್ಯದಲ್ಲಿ ಈವರೆಗೆ ಯಾವುದೇ ಲೋಕಸಭಾ ಚುನಾವಣೆಯಲ್ಲಿ ಜಪ್ತಿ ಮಾಡದಷ್ಟು ಹಣ, ಹೆಂಡ, ಉಡುಗೊರೆ ಹಾಗೂ ಬಂಗಾರವನ್ನು ಜಪ್ತಿ ಮಾಡಿದೆ.

ದೇಶದಲ್ಲೇ ಅತಿ ಹೆಚ್ಚು ಮದ್ಯ ಜಪ್ತಿ

ಜಪ್ತಿಯಾಗಿರುವುದರಲ್ಲಿ ನಗದು, ಮದ್ಯದ ಪಾಲು ಎಷ್ಟು ಎಂದು ನೋಡುವುದಾದರೆ, 78 ಕೋಟಿ ರೂಪಾಯಿ ನಗದು, 177 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇಡೀ ದೇಶದಲ್ಲೆ ಅತಿಹೆಚ್ಚಿನ ಪ್ರಮಾಣದ ಮದ್ಯದ ಜಪ್ತಿ ಇದಾಗಿದೆ. ಉಳಿದಂತೆ 11.24 ಕೋಟಿ ರೂ. ಮೌಲ್ಯದ ಮಾದಕ ವಸ್ತು, 59 ಕೋಟಿ ರೂ. ಮೌಲ್ಯದ ಬೆಳ್ಳಿ, ಬಂಗಾರ ಹಾಗೂ ಡೈಮೆಂಡ್, 8.14 ಕೋಟಿ ರೂ. ಮೌಲ್ಯದ ಉಡುಗೊರೆಗಳಾದ ಮಿಕ್ಸರ್, ಫ್ಯಾನ್, ಕುಕ್ಕರ್ ಜಪ್ತಿ ಮಾಡಲಾಗಿದೆ. 72 ಕೋಟಿ ರೂ. ಮೌಲ್ಯದ ಇನ್ನಿತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತೀರಾ? ಹಾಗಾದರೆ ಗಮನಿಸಿ

ಒಟ್ಟಿನಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಕೋಟ್ಯಂತರ ರೂಪಾಯಿ ಹಣದ ಜೊತೆ ದೇಶದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಮದ್ಯ ಸೀಜ್ ಆಗಿರುವುದು ಚುನಾವಣಾ ಅಧಿಕಾರಿಗಳಿಗೂ ಅಚ್ಚರಿಯ ಸಂಗತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ