K. Annamalai: ನೇಹಾ ಕೊಲೆ ಬಗ್ಗೆ ಕೆ ಅಣ್ಣಾಮಲೈ ಮಾತು: ಕಾಂಗ್ರೆಸ್​ ವಿರುದ್ಧ ವಾಗ್ದಾಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 23, 2024 | 7:11 PM

ಬಿಜೆಪಿ ನವಯುಗ ನವಪಥ ಸಂಕಲ್ಪ ಪತ್ರ ಬಿಡುಗಡೆಯಲ್ಲಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಭಾಗವಹಿಸಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣದಲ್ಲಿ ಎಲ್ಲಾ ವಿಚಾರ ನೋಡಿದ್ದೇವೆ. ಕಾಂಗ್ರೆಸ್ ಬಂದ್ಮೇಲೆ ಕಾನೂನು ಸುವ್ಯವಸ್ಥೆ ಪಾಲನೆ ಆಗುತ್ತಿಲ್ಲ. ಒಬ್ಬ ಹುಡುಗಿಯನ್ನ ಹೀಗೆ ಹತ್ಯೆಗೈಯೋದು ಯಾರೂ ಒಪ್ಪಲ್ಲ. ಗೃಹಸಚಿವರ ಹೇಳಿಕೆಯನ್ನು ನಾಗರಿಕ ಸಮಾಜದಲ್ಲಿ ಒಪ್ಪಲ್ಲ ಎಂದಿದ್ದಾರೆ.

K. Annamalai: ನೇಹಾ ಕೊಲೆ ಬಗ್ಗೆ ಕೆ ಅಣ್ಣಾಮಲೈ ಮಾತು: ಕಾಂಗ್ರೆಸ್​ ವಿರುದ್ಧ ವಾಗ್ದಾಳಿ
ಮೃತ ನೇಹಾ, ಕೆ.ಅಣ್ಣಾಮಲೈ
Follow us on

ಮಂಗಳೂರು, ಏಪ್ರಿಲ್​ 23: ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ (Neha Murder Case) ನಡೆದು ಆರು ದಿನ ಕಳೆದಿದೆ. ಪ್ರಕರಣವನ್ನು ಸಿಐಡಿಗೆ ವಹಿಸುತ್ತಿದ್ದಂತೆಯೇ ಇಂದು ಸಿಐಡಿ ತಂಡ ವಾಣಿಜ್ಯ ನಗರಿಗೆ ಆಗಮಿಸಿ ತನಿಖೆ ಆರಂಭಿಸಿದೆ. ಪೊಲೀಸ್ ಆಯುಕ್ತರನ್ನು ಭೇಟಿಯಾದ ತಂಡ, ಮಾಹಿತಿ ಪಡೆದುಕೊಂಡಿದೆ. ಇನ್ನು ಈ ಪ್ರಕರಣ ಕುರಿತಾಗಿ ಮಂಗಳೂರಿನಲ್ಲಿ ಬಿಜೆಪಿ ನಾಯಕ ಕೆ.ಅಣ್ಣಾಮಲೈ (K. Annamalai) ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಬಂದ್ಮೇಲೆ ಕಾನೂನು ಸುವ್ಯವಸ್ಥೆ ಪಾಲನೆ ಆಗುತ್ತಿಲ್ಲ. ಒಬ್ಬ ಹುಡುಗಿಯನ್ನ ಹೀಗೆ ಹತ್ಯೆಗೈಯೋದು ಯಾರೂ ಒಪ್ಪಲ್ಲ. ಗೃಹಸಚಿವರ ಭಾಷೆಯನ್ನ ನಾಗರಿಕ ಸಮಾಜದಲ್ಲಿ ಒಪ್ಪಲ್ಲ ಎಂದು ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ ವೋಟರ್ ಲಿಸ್ಟ್​ನಿಂದ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರು ಕೈಬಿಡಲಾಗಿದೆ. ಜಾಣ್ಮೆಯಿಂದ ಮತದಾರರ ಲಿಸ್ಟ್​ನಿಂದ ಹೆಸರು ಕೈಬಿಟ್ಟಿದ್ದಾರೆ. ಮನೆಯಲ್ಲಿ ಗಂಡ ಹೆಂಡತಿ ಇದ್ದರೆ ಹೆಂಡತಿ ಹೆಸರು ಔಟ್. ಒಂದು ಬೂತ್​​ನಲ್ಲಿ 20-25 ಮತದಾರರ ಹೆಸರು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗಿ, ಬಿಎನ್ ಚಂದ್ರಪ್ಪ ಪರ ಮತಯಾಚನೆ

ತಮಿಳುನಾಡು ಪೂರ್ತಿ ಈ ಅಕ್ರಮದ ಬಗ್ಗೆ ಮಾಹಿತಿ ಕಲೆ ಹಾಕಿ ಚುನಾವಣಾ ಆಯೋಗಕ್ಕೂ ಪತ್ರದ ಮೂಲಕ ತಿಳಿಸುತ್ತೇವೆ. ವ್ಯವಸ್ಥಿತವಾಗಿ ಈ ಕೃತ್ಯ ನಡೆಸಿದ್ದಾರೆ. ನಾವು ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ ಜಾಹೀರಾತಿನಲ್ಲಿ ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಸೇರಬೇಕಾ ಎಂಬ ಪ್ರಶ್ನೆ ವಿಚಾರವಾಗಿ ಮಾತನಾಡಿದ್ದು, ಕರ್ನಾಟಕ, ತಮಿಳುನಾಡು ಜನ ಸಹೋದರ, ಸಹೋದರಿಯರು. ಕರ್ನಾಟಕದ ಸಾವಿರಾರು ಜನ ತಮಿಳುನಾಡಲ್ಲಿ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿದ ಸಾವಿರಾರು ಜನ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 100 ಪರ್ಸೆಂಟ್ ನೀರಿನ ಸಮಸ್ಯೆ ಇರುವುದು ನಿಜ. ದ್ವೇಷದ ಭಾವನೆ ಬಿಟ್ಟು ಎಲ್ಲಾ ರಾಜ್ಯದವರು ಚೆನ್ನಾಗಿರಬೇಕೆಂದು ಬಯಸಬೇಕು ಎಂದಿದ್ದಾರೆ.

ಕರ್ನಾಟಕ, ತಮಿಳುನಾಡಿಗೆ ಒಳ್ಳೆದಾಗಬೇಕೆನ್ನುವುದರಲ್ಲಿ 2 ಮಾತಿಲ್ಲ: ಕೆ.ಅಣ್ಣಾಮಲೈ

ನಿಯಮದ ಪ್ರಕಾರ ಮೇಕೆದಾಟು ಯೋಜನೆ ಜಾರಿಯಾದರೆ ಚೆನ್ನಾಗಿರುತ್ತೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎಲ್ಲವನ್ನು ನೋಡಿ ನಿರ್ಧರಿಸುತ್ತೆ. ಕಾವೇರಿ ವಿಚಾರದಲ್ಲಿ ಭಾವನಾತ್ಮಕವಾಗಿ ಮಾತನಾಡುವುದು ಬೇಕಾಗಿಲ್ಲ. ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್, CWMA ಸಮಾನವಾಗಿ ನೀಡುತ್ತೆ. ಕಾವೇರಿ ನೀರಿನ ವಿಚಾರದಲ್ಲಿ ಯಾವ ರಾಜ್ಯಕ್ಕೂ ಅನ್ಯಾಯ ಮಾಡಲ್ಲ. ಎಷ್ಟು ನೀರು ಬಿಡಬೇಕೆಂದು ಎಲ್ಲದಕ್ಕೂ ಒಂದು ಫಾರ್ಮುಲಾ ಇದೆ. ಕರ್ನಾಟಕ, ತಮಿಳುನಾಡಿಗೆ ಒಳ್ಳೆದಾಗಬೇಕೆನ್ನುವುದರಲ್ಲಿ 2 ಮಾತಿಲ್ಲ. ಕರ್ನಾಟಕ ರಾಜ್ಯ, ತಮಿಳುನಾಡಿನಲ್ಲಿರುವ ಎಲ್ಲರೂ ಚೆನ್ನಾಗಿರಬೇಕು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.