ಬಾಗಲಕೋಟೆ ಪುರಸಭೆ ಚುನಾವಣೆ ವೇಳೆ ಲಾಂಗು, ಮಚ್ಚಿನ ಸದ್ದು: 8 ಜನರ ವಿರುದ್ಧ FIR, ನಾಲ್ವರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 31, 2024 | 10:06 PM

ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಕ್ಷೇತ್ರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡಲಾಗಿದೆ. ಸಿದ್ದರಾಮಯ್ಯ ಆಪ್ತ ಹಾಗೂ ಬಾದಾಮಿ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಎರಡು ಬಣಗಳ ಬಡಿದಾಟದಲ್ಲಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿತ್ತು. ಸ್ಪಷ್ಟ ಬಹುಮತ ಇದ್ದರೂ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್​ ತೀವ್ರ ಮುಖಭಂಗ ಅನುಭವಿಸಿದೆ.

ಬಾಗಲಕೋಟೆ ಪುರಸಭೆ ಚುನಾವಣೆ ವೇಳೆ ಲಾಂಗು, ಮಚ್ಚಿನ ಸದ್ದು: 8 ಜನರ ವಿರುದ್ಧ FIR, ನಾಲ್ವರ ಬಂಧನ
ಬಾಗಲಕೋಟೆ ಪುರಸಭೆ ಚುನಾವಣೆ ವೇಳೆ ಲಾಂಗು, ಮಚ್ಚಿನ ಸದ್ದು: 8 ಜನರ ವಿರುದ್ಧ FIR, ನಾಲ್ವರ ಬಂಧನ
Follow us on

ಬಾಗಲಕೋಟೆ, ಆಗಸ್ಟ್​ 31: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಲಾಂಗು ಮತ್ತು ಮಚ್ಚಿನ ಸದ್ದು ಕೇಳಿಸಿದೆ. ನಿನ್ನೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಗುಳೆದಗುಡ್ಡ ಪಟ್ಟಣದಲ್ಲಿ ಘಟನೆ ನಡೆದಿದೆ. ಲಾಂಗು, ಮಚ್ಚು, ಕಟ್ಟಿಗೆ, ದೊಣ್ಣೆ, ಕಲ್ಲು ಸಮೇತ ಗುಂಪು ಬಂದಿದ್ದವು. ಪೊಲೀಸರ ಮುನ್ನೆಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ. 8 ಜನರ ವಿರುದ್ಧ ಎಫ್​​ಐಆರ್ (FIR)​ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವು ಕೊಡಬಾಗಿ, ಇಮಾಮ್ ಕಲಾಶಿ, ವಿಶ್ವನಾಥ ಅಂಬಿಗೇರ್, ಮೊಹಮ್ಮದ್ ಅಲಿ ಮಂಟೂರ್ ಬಂಧಿತರು. ಸಮೀರ್ ಮುಲ್ಲಾ, ವಿಲಾಸ್ ರಾಠೋಡ, ಇಮ್ರಾನ್ ಗಾಡಿ, ಸಮೀರ್ ಚಿಮ್ಮಲಗಿ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಿದ್ದರಾಮಯ್ಯ ಆಪ್ತ ಹಾಗೂ ಬಾದಾಮಿ ಶಾಸಕರ ನಡುವೆ ಮುಸುಕಿನ ಗುದ್ದಾಟ

ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಕ್ಷೇತ್ರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡಲಾಗಿದೆ. ಸಿದ್ದರಾಮಯ್ಯ ಆಪ್ತ ಹಾಗೂ ಬಾದಾಮಿ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಎರಡು ಬಣಗಳ ಬಡಿದಾಟದಲ್ಲಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿತ್ತು. ಸ್ಪಷ್ಟ ಬಹುಮತ ಇದ್ದರೂ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್​ ತೀವ್ರ ಮುಖಭಂಗ ಅನುಭವಿಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಆಪ್ತನ ಬಣ, ಶಾಸಕ ಬಣ ಬಡಿದಾಟದ ಮಧ್ಯ ಅಧಿಕಾರಕ್ಕೇರಿದ ಜೆಡಿಎಸ್

ಸಿದ್ದರಾಮಯ್ಯ ಆಪ್ತ ಹೊಳಬಸು ಶೆಟ್ಟರ್ ಹಾಗೂ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿತ್ತು. ಕಾಂಗ್ರೆಸ್ ಎರಡು ಬಣದಿಂದ ತಲಾ ಒಬ್ಬೊಬ್ಬರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು ಕಾಂಗ್ರೆಸ್​ನ ಇಬ್ಬರ ನಾಮಪತ್ರ ತಿರಸ್ಕೃತಗೊಂಡು ಅವಿರೋಧವಾಗಿ ಜೆಡಿಎಸ್​ ಆಯ್ಕೆ ಆಗಿತ್ತು.

ಇದನ್ನೂ ಓದಿ: ಬಿಜೆಪಿ ಮಾಜಿ ಸಿಎಂ ಒಬ್ಬರ ಅಶ್ಲೀಲ ವಿಡಿಯೋ ಬಿಡುಗಡೆ ಆಗಲಿದೆ: ಮಾಜಿ ಶಾಸಕ ಆನಂದ‌ ನ್ಯಾಮಗೌಡ

ಲಾಂಗ್, ಮಚ್ಚು ಹಿಡಿದು ಬಂದವರು ಯಾವ ಗುಂಪುನವರು ಎಂಬುದನ್ನು ಪೊಲೀಸರು ಮಾಹಿತಿ ಬಿಟ್ಟು ಕೊಟ್ಟಿಲ್ಲ. 23 ಸದ್ಯಸರ ಬಲದ ಗುಳೇದಗುಡ್ಡ ಪುರಸಭೆಯಲ್ಲಿ 15 ಜನ ಕಾಂಗ್ರೆಸ್, 5 ಜೆಡಿಎಸ್, 2 ಬಿಜೆಪಿ, ಓರ್ವ ಪಕ್ಷೇತರ ಸದಸ್ಯ ಬಲ ಹೊಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.