ಐಕಿಯಾ ಮಾಲ್ಗೆ ಶಾಪಿಂಗ್ ಬಂದಿದ್ದ ವೇಳೆ ಕುಸಿದು ಬಿದ್ದ ಸದಾನಂದ ಗೌಡ ಪತ್ನಿ
ಬೆಂಗಳೂರಿನ ನಾಗಸಂದ್ರ ಮೆಟ್ರೋ ಬಳಿಯ ಐಕಿಯಾ ಮಾಲ್ಗೆ ಶಾಪಿಂಗ್ಗೆ ಬಂದಿದ್ದ ವೇಳೆ ಸದಾನಂದ ಗೌಡ ಪತ್ನಿ ಕುಸಿದು ಬಿದ್ದ ಘಟನೆ ನಡೆದಿದೆ. ಸಧ್ಯ ತೀವ್ರ ನಿಗಾ ಘಟಕದಲ್ಲಿ ಡಾಟಿ ಸದಾನಂದಗೌಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ವಿಷಯ ತಿಳಿದು ಪತ್ನಿ ನೋಡಲು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದಗೌಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಬೆಂಗಳೂರು, ಆ.31: ಶಾಪಿಂಗ್ಗೆ ಬಂದಿದ್ದ ವೇಳೆ ಸದಾನಂದ ಗೌಡ ಪತ್ನಿ ಕುಸಿದು ಬಿದ್ದ ಘಟನೆ ಬೆಂಗಳೂರಿನ ನಾಗಸಂದ್ರ ಮೆಟ್ರೋ ಬಳಿಯ ಐಕಿಯಾ ಮಾಲ್ನಲ್ಲಿ ನಡೆದಿದೆ. ಹಠಾತ್ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಡಾಟಿ ಸದಾನಂದಗೌಡ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಕಾರು ಚಾಲಕ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದೀಗ ವಿಷಯ ತಿಳಿದು ಪತ್ನಿ ನೋಡಲು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದಗೌಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಇನ್ನು ಸದಾನಂದಗೌಡ ಜೊತೆಗೆ ದಾಸರಹಳ್ಳಿಯಲ್ಲಿ ಶಾಸಕ ಮುನಿರಾಜು ಹಾಗೂ ಸುಜಾತ ಮುನಿರಾಜು ಕೂಡ ಅಸ್ಪತ್ರೆಗೆ ಆಗಮಿಸಿದ್ದಾರೆ. ಸಧ್ಯ ತೀವ್ರ ನಿಗಾ ಘಟಕದಲ್ಲಿ ಡಾಟಿ ಸದಾನಂದಗೌಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಸಮಬಲದಲ್ಲಿ ಕುಸ್ತಿ ಆಡಲು ದೈಹಿಕ, ಮಾನಸಿಕ ಸಾಮರ್ಥ್ಯ ಅಶೋಕ್ಗೆ ಇದೆ- ಸದಾನಂದ ಗೌಡ
ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಗೆ ಹೃದಯಾಘಾತ
ಗದಗ: ಸಶಸ್ತ್ರ ಮೀಸಲು ಪಡೆ ಪೊಲೀಸ್ ವಾಹನ ಚಾಲಕ ಬಸವರಾಜ ವಿಠ್ಠಲಾಪುರ ಎಂಬುವವರು ಕರ್ತವ್ಯದಲ್ಲಿರುವಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಗದಗನಿಂದ ಧಾರವಾಡಕ್ಕೆ ಕೈದಿ ವರ್ಗಾವಣೆ ಮಾಡುವಾಗ ಧಾರವಾಡದ ಕೋರ್ಟ್ ಬಳಿ ಘಟನೆ ನಡೆದಿದೆ. ವಾಹನ ಚಾಲನೆ ಮಾಡುವಾಗಲೇ ಎದೆನೋವು ಕಾಣಿಸಿಕೊಂಡು ಕೂಡಲೇ ರಸ್ತೆ ಪಕ್ಕಕ್ಕೆ ವಾಹನ ನಿಲ್ಲಿಸಿ, ಕ್ಷಣಮಾತ್ರದಲ್ಲೇ ಹೃದಯಾಘಾತವಾಗಿ ಬಸವರಾಜ ಕೊನೆಯುಸಿರೆಳೆದಿದ್ದಾರೆ. ಬಸವರಾಜ ಅಕಾಲಿಕ ನಿಧನಕ್ಕೆ ಗದಗ ಜಿಲ್ಲಾ ಪೊಲೀಸ್ ಸಂತಾಪ ಸೂಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 pm, Sat, 31 August 24