ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹೆಚ್ ಡಿ ದೇವೇಗೌಡರ ನಿಲುವು ಅಭಿನಂದಿಸಿದ ಸದಾನಂದಗೌಡ

ಪ್ರಜ್ವಲ್ ಪ್ರಕರಣ ಕುರಿತಂತೆ ಅತಿಹೆಚ್ಚು ಮಾತಾಡುತ್ತಿರೋದು ಕುಮಾರಸ್ವಾಮಿ, ಅವರ ಬಗ್ಗೆ ಸದಾನಂದಗೌಡರು ಜಾಣ ಮರೆವು ಪ್ರದರ್ಶಿಸುತ್ತಾರೆ! ನಂತರ ಅವರು, ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಬಂದು ಎಸ್ಐಟಿ ಮುಂದೆ ಹಾಜರಾಗಬೇಕು, ತಲೆಮರೆಸಿಕೊಂಡು ಓಡಾಡುತ್ತಿದ್ದರೆ ಅನುಮಾನದ ಹೊಗೆ ದಟ್ಟವಾಗುತ್ತದೆ ಅನ್ನುತ್ತಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹೆಚ್ ಡಿ ದೇವೇಗೌಡರ ನಿಲುವು ಅಭಿನಂದಿಸಿದ ಸದಾನಂದಗೌಡ
|

Updated on: May 21, 2024 | 7:00 PM

ಕೋಲಾರ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮಂತ್ರಿಗಳು ಮತ್ತು ಬೇರೆ ಬೇರೆ ಪಕ್ಷಗಳ ನಾಯಕರು ತಮಗೆ ತೋಚಿದ ಹೇಳಿಕೆ ನೀಡುತ್ತಿರುವುದನ್ನು ಸಂಸದ ಡಿವಿ ಸದಾನಂದಗೌಡ (DV Sadananda Gowda) ಖಂಡಿಸಿದರು. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ನೀಡುವ ಹೇಳಿಕೆಗಳು ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಮತ್ತು ತನಿಖಾಧಿಕಾರಿಗಳಿಗೆ ತನಿಖೆಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕೆನ್ನುವ ಸಂದೇಶ ರವಾನಿಸಿದಂತಾಗುತ್ತದೆ ಎಂದು ಸದಾನಂದಗೌಡ ಹೇಳಿದರು. ಈ ವಿಷಯಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿಲುವನ್ನು ಪ್ರಶಂಸಿದ ಅವರು, ಹಿರಿಯ ಮುತ್ಸದ್ದಿ ಪ್ರಕರಣದ ಬಗ್ಗೆ ಯಾವುದೇ ಮಾತಾಡದೆ ಮೌನವಾಗಿದ್ದಾರೆ, ನಿಜವಾದ ರಾಜಕಾರಣಿಯ ಲಕ್ಷಣವೇ ಅದು ಎಂದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದ ಬಗ್ಗೆ ಕಾಮೆಂಟ್ ಮಾಡಿಲ್ಲ, ಪರಮೇಶ್ವರ್ ಪತ್ರಕರ್ತರ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸುವುದಿಲ್ಲ ಮತ್ತು ಶಿವಕುಮಾರ್ ಸಹ ಕುಮಾರಸ್ವಾಮಿ ಮಾಡುತ್ತಿರುವ ವಾಗ್ದಾಳಿಗಳಿಗೆ ಮಾತ್ರ ಒಂದೆರಡು ಮಾತಿನಲ್ಲಿ ಪ್ರತಿಕ್ರಿಯೆ ನೀಡುತ್ತಾರೆಯೇ ಹೊರತು ಪ್ರಕರಣದ ಬಗ್ಗೆ ಮಾತಾಡಲ್ಲ. ಪ್ರಜ್ವಲ್ ಪ್ರಕರಣ ಕುರಿತಂತೆ ಅತಿಹೆಚ್ಚು ಮಾತಾಡುತ್ತಿರೋದು ಕುಮಾರಸ್ವಾಮಿ, ಅವರ ಬಗ್ಗೆ ಸದಾನಂದಗೌಡರು ಜಾಣ ಮರೆವು ಪ್ರದರ್ಶಿಸುತ್ತಾರೆ! ನಂತರ ಅವರು, ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಬಂದು ಎಸ್ಐಟಿ ಮುಂದೆ ಹಾಜರಾಗಬೇಕು, ತಲೆಮರೆಸಿಕೊಂಡು ಓಡಾಡುತ್ತಿದ್ದರೆ ಅನುಮಾನದ ಹೊಗೆ ದಟ್ಟವಾಗುತ್ತದೆ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಹಂಚಿಕೆ ರಾಜ್ಯಮಟ್ಟದ ಬಿಜೆಪಿ ನಾಯಕರೊಬ್ಬರ ಅಣತಿ ಮೇರೆಗೆ ನಡೆದಿದೆ: ರವಿ ಗಣಿಗ, ಶಾಸಕ

Follow us