ಬೆಳಗಾವಿಯಲ್ಲಿ ಹೆಚ್ಚಾಯ್ತು ಡ್ರಗ್ಸ್ ಹಾವಳಿ; ಆರು ತಿಂಗಳಲ್ಲಿ ನಗರದಲ್ಲಿ ಸಿಕ್ಕ ಗಾಂಜಾ ಎಷ್ಟು?

ಕುಂದಾನಗರಿ ಬೆಳಗಾವಿಯಲ್ಲಿ ಕುಂದಾಗಿಂತ ಡ್ರಗ್ಸ್, ಗಾಂಜಾ ಹೆಚ್ಚಾಗಿ ಸಿಗ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಎರಡು ರಾಜ್ಯಗಳಿಗೆ ಹೊಂದಿಕೊಂಡಿರುವ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅಲರ್ಟ್ ಆಗಿರುವ ಬೆಳಗಾವಿ ನಗರ ಪೊಲೀಸರು, ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ. ಅಷ್ಟಕ್ಕೂ ಆರು ತಿಂಗಳ ಅವಧಿಯಲ್ಲಿ ನಗರದಲ್ಲಿ ಸಿಕ್ಕ ಗಾಂಜಾ ಎಷ್ಟು?  ಈ ಕುರಿತು ಒಂದು ವರದಿ ಇಲ್ಲಿದೆ.

ಬೆಳಗಾವಿಯಲ್ಲಿ ಹೆಚ್ಚಾಯ್ತು ಡ್ರಗ್ಸ್ ಹಾವಳಿ; ಆರು ತಿಂಗಳಲ್ಲಿ ನಗರದಲ್ಲಿ ಸಿಕ್ಕ ಗಾಂಜಾ ಎಷ್ಟು?
ಬೆಳಗಾವಿಯಲ್ಲಿ ಹೆಚ್ಚಾಯ್ತು ಡ್ರಗ್ಸ್ ಹಾವಳಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 31, 2024 | 10:27 PM

ಬೆಳಗಾವಿ, ಆ.31: ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ(Belagavi) ನಗರದಲ್ಲಿ ಇತ್ತಿಚೀನ ದಿನಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಈ ವರೆಗೂ ಗಾಂಜಾ ಮತ್ತು ಡ್ರಗ್ಸ್ ಮಾತ್ರ ನಗರದಲ್ಲಿ ಸಪ್ಲೈ ಆಗುತ್ತಿತ್ತು. ಆದರೆ, ಇತ್ತಿಚೀನ ದಿನಗಳಲ್ಲಿ ಹೆರಾಯಿನ್ ಕೂಡ ಸಿಗುತ್ತಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಕ್ಕೆ ಹೊಂದಿಕೊಂಡಿರುವ ಬೆಳಗಾವಿ ನಗರದಲ್ಲಿ ಕುಂದಾದಂತೆ ಎಲ್ಲೆಂದರಲ್ಲಿ ಗಾಂಜಾ ಸಿಗುತ್ತಿದೆ. ಡ್ರಗ್ಸ್ ಮಾರಾಟ ಮಾಡುವುದನ್ನೇ ಬಿಜಿನೆಸ್ ಮಾಡಿಕೊಂಡಿರುವ ದುಷ್ಕರ್ಮಿಗಳು, ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿರುವುದು ಬೆಳಕಿಗೆ ಬಂದಿದೆ.

ನಗರದಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಬೇರೆ ಬೇರೆ ವಿಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಗಾಂಜಾ ಮಾರಾಟ ಮಾಡುತ್ತಿರುವ ಸಂಶಯದಲ್ಲಿ ಬೆಳಗಾವಿ ನಗರ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರು ಆರೋಪಿಗಳನ್ನ ಮಾಳಮಾರುತಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಇನ್ನು ಆರು ತಿಂಗಳ ಅವಧಿಯಲ್ಲಿ ಸುಮಾರು 110ಕೆಜಿ ಗಾಂಜಾ ಮತ್ತು 700ಗ್ರಾಂ ಬೇರೆ ಬೇರೆ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:ಕಾರ್ಕಳ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣ: ಡ್ರಗ್ಸ್ ಬಂದಿದ್ದು ಎಲ್ಲಿಂದ? ನೀಡಿದ್ದು ಯಾವ ಡ್ರಗ್ಸ್? ಮಾಹಿತಿ ಬಯಲು

ಐದು ಜನ ಆರೋಪಿಗಳ ಬಂಧನ

ಗಾಂಜಾ, ಡ್ರಗ್ಸ್ ಹಾವಳಿ ನಡುವೆ ಬೆಳಗಾವಿಗೆ ಮತ್ತೊಂದು ಡೆಂಜರಸ್ ಡ್ರಗ್ಸ್ ಎಂಟ್ರಿಯಾಗಿದೆ. ಹೆರಾಯಿನ್ ಹೆಸರಿನ ಡ್ರಗ್ಸ್ ಇದೀಗ ಬೆಳಗಾವಿ ನಗರದಲ್ಲಿ ಸಪ್ಲೈ ಮಾಡಲಾಗುತ್ತಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಎಲ್ಲ ಠಾಣೆಗಳಿಗೆ ಸೂಚನೆ ನೀಡಿದ್ದರು. ಡ್ರಗ್ಸ್ ಹಾವಳಿ ಕಂಟ್ರೋಲ್ ಮಾಡುವುದಕ್ಕೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುವಂತೆ ಸೂಚಿಸಿದ್ದರು. ಈ ಆಧಾರದ ಮೇಲೆ ಆ್ಯಕ್ಟೀವ್ ಆಗಿದ್ದ ಟಿಳಕವಾಡಿ ಠಾಣೆ ಪೊಲೀಸರು ಹೆರಾಯಿನ್ ಸಪ್ಲೈ ಮಾಡುತ್ತಿದ್ದ ಐದು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಶಾಂತ್ ಕಂಗ್ರಾಳ್ಕರ್, ನಾರಾಯಣ್ ಪಾಟೀಲ್, ಪ್ರಫುಲ್ ಪಾಟೀಲ್, ಸುನೀಲ್ ಅಸಲ್ಕರ್, ಸಲ್ಮಾನ್ ಮುಕಾಶಿ ಬಂಧಿಸಿ 5ಗ್ರಾಂ 150ಮಿಲಿಗ್ರಾಂ ಹೆರಾಯಿನ್ ಕೂಡ ಜಪ್ತಿ ಮಾಡಿದ್ದಾರೆ. ಇನ್ನೂ ನಗರದಲ್ಲಿ ಡ್ರಗ್ಸ್ ಕಂಟ್ರೋಲ್ ಮಾಡಲು ವಿಶೇಷ ತಂಡ ರಚನೆ ಮಾಡಲಾಗುವುದು ಜೊತೆಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕೂಡ ಮೂಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಒಟ್ಟಿನಲ್ಲಿ ಒಂದು ಕಡೆ ಗಾಂಜಾ ಹಾವಳಿ ನಡುವೆ ಇದೀಗ ಹೆರಾಯಿನ್ ಕೂಡ ಸಿಗ್ತಿದ್ದು ಪೊಲೀಸರು ಅಲರ್ಟ್ ಆಗಿ ಡ್ರಗ್ಸ್ ಮಟ್ಟ ಹಾಕಲು ಸಜ್ಜಾಗಿದ್ದಾರೆ. ಪೆಡ್ಲರ್ ಗಳನ್ನ ಪತ್ತೆ ಹಚ್ಚಿ ಎಲ್ಲಿಂದ ಸಪ್ಲೈ ಆಗ್ತಿದೆ ಮತ್ತು ನಗರಕ್ಕೆ ಡ್ರಗ್ಸ್ ಎಂಟ್ರಿಯಾಗದಂತೆ ನಿಗಾ ಕೂಡ ವಹಿಸಿದ್ದಾರೆ. ಅದೇನೆ ಇರಲಿ ಕಲಿಯುವ ಮಕ್ಕಳನ್ನೇ ಟಾರ್ಗೆಟ್ ಮಾಡಿ ದುಡ್ಡು ಮಾಡುವ ಕೆಲಸ ಮಾಡ್ತಿರುವ ದುಷ್ಕರ್ಮಿಗಳನ್ನ ಮಟ್ಟ ಹಾಕಿ ಡ್ರಗ್ಸ್ ನ ಹಾವಳಿ ತಪ್ಪಿಸಿ ಕ್ಲೀನ್ ಸಿಟಿ ಮಾಡುವ ಕೆಲಸ ನಗರ ಪೊಲೀಸರು ಮಾಡಲಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು