ಕಾರ್ಕಳ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣ: ಡ್ರಗ್ಸ್ ಬಂದಿದ್ದು ಎಲ್ಲಿಂದ? ನೀಡಿದ್ದು ಯಾವ ಡ್ರಗ್ಸ್? ಮಾಹಿತಿ ಬಯಲು
ಕಾರ್ಕಳ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್ಸ್ ಬಂದಿದ್ದು ಎಲ್ಲಿಂದ? ಯುವತಿಗೆ ನೀಡಿದ್ದು ಯಾವ ಡ್ರಗ್ಸ್, ಡ್ರಗ್ಸ್ ಪೆಡ್ಲರ್ ಪರಿಚಯವಾಗಿದ್ದು ಹೇಗೆ ಎಂಬ ಎಲ್ಲಾ ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಯುವತಿಗೆ ನೀಡಿದ್ದು ಸಿಂಥೆಟಿಕ್ ಡ್ರಗ್ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ತನಿಖೆ ಮುಂದುವರೆದಿದೆ.
ಉಡುಪಿ, ಆಗಸ್ಟ್.31: ಕಾರ್ಕಳದಲ್ಲಿ ಯುವತಿಗೆ ಡ್ರಗ್ಸ್ (Drugs) ನೀಡಿ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಯುವತಿಗೆ ನೀಡಲಾಗಿದ್ದ ಡ್ರಗ್ಸ್ ಯಾವುದು ಎಂಬ ಮಾಹಿತಿ ಸಿಕ್ಕಿದೆ. ಪೊಲೀಸ್ ತನಿಖೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಯುವತಿಗೆ ಸಿಂಥೆಟಿಕ್ ಡ್ರಗ್ಸ್ ನೀಡಿ ಅತ್ಯಾಚಾರವೆಸಗಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.
ಆರೋಪಿ ಅಲ್ತಾಫ್ ಕಾರಿನಲ್ಲಿ ಕರೆದೊಯ್ದು ಯುವತಿ ರೇಪ್ ಮಾಡಿದ್ದ. ಯುವತಿಗೆ ಸಿಂಥೆಟಿಕ್ ಡ್ರಗ್ಸ್ ನೀಡಲಾಗಿತ್ತು. ಆದರೆ ಅಲ್ತಾಫ್ ಡ್ರಗ್ಸ್ ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಲ್ತಾಫ್ & ಟೀಂ ಬೆಂಗಳೂರಿಗೆ ತೆರಳಿ ವ್ಯಕ್ತಿಯೋರ್ವನಿಂದ ಡ್ರಗ್ಸ್ ಖರೀದಿಸಿದ್ದರು. ಅದೇ ಡ್ರಗ್ಸ್ ಅನ್ನು ಮದ್ಯದಲ್ಲಿ ಬರೆಸಿ ಯುವತಿಗೆ ಕುಡಿಸಿ ಅಲ್ತಾಫ್ ಅತ್ಯಾಚಾರ ಎಸಗಿದ್ದ.
ಬೆಂಗಳೂರು ಡ್ರಗ್ ಪೆಡ್ಲರ್ ಅಲ್ತಾಫ್ಗೆ ಪರಿಚಯವಾಗಿದ್ದು ಹೇಗೆ?
ಬಿಜೆಪಿ ಕಾರ್ಯಕರ್ತ ಅಭಯ್ ಮೂಲಕ ಅಲ್ತಾಫ್ಗೆ ಬೆಂಗಳೂರು ಮೂಲದ ಡ್ರಗ್ಸ್ ಸೇಲ್ ಮಾಡುವ ವ್ಯಕ್ತಿಯೋರ್ವ ಪರಿಚಯವಾಗಿದ್ದ. ಆರೋಪಿ ಅಭಯ್ ತನ್ನ ಜೊತೆ ಅಲ್ತಾಫ್ & ಇತರರನ್ನು ಬೆಂಗಳೂರಿಗೆ ಕರೆದೊಯ್ದು ಡ್ರಗ್ಸ್ ಖರೀದಿಸಿ ಬಳಿಕ ಖರೀದಿಸಿದ್ದ ಡ್ರಗ್ಸ್ ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಉಳಿದ ಡ್ರಗ್ಸ್ ಅನ್ನ ಅಲ್ತಾಫ್ ಕೃತ್ಯಕ್ಕೆ ಬಳಕೆ ಮಾಡಿದ್ದ. ಇದುವರೆಗೆ ಪ್ರಕರಣ ಸಂಬಂಧ ಐವರನ್ನು ಅರೆಸ್ಟ್ ಮಾಡಲಾಗಿದೆ. ಕಾರ್ಕಳ ನಗರ ಠಾಣಾ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬ್ಯಾನ್ ಆದ್ರೂ ಸಿಂಥೆಟಿಕ್ ಡೈ ಕಲರ್ ಬಳಕೆ: ಮಕ್ಕಳ ಹೊಟ್ಟೆ ಸೇರ್ತಿದೆ ಸ್ಲೋ ಪಾಯಿಸನ್
ಚಲಿಸುತ್ತಿದ್ದ ರೈಲಿನಲ್ಲಿ ಯುವತಿ ಮೇಲೆ ಅತ್ಯಾಚಾರ ಯತ್ನ
ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ದೇಶವಿದೇಶಗಳಲ್ಲೂ ಕೂಡ ಪ್ರಖ್ಯಾತಿ. ಅದರಲ್ಲೂ ಎರಡು ದಿನಗಳ ಕಾಲ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾಗಲು ದೇಶ ವಿದೇಶದ ನಾನಾ ಮೂಲೆಗಳಲ್ಲಿ ನೆಲೆಸಿರುವ ಉಡುಪಿ ಮೂಲದವರು ಕೂಡ ಮರಳುತ್ತಾರೆ. ಹೀಗೆ ಅಷ್ಟಮಿಯ ಸಂಭ್ರಮದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಬೆಂಗಳೂರು ಮುರುಡೇಶ್ವರ ಎಕ್ಸ್ಪ್ರೆಸ್ ರೈಲಿನಲ್ಲಿ ಬಂದ ಯುವತಿಗೆ ಕಾಮಾಂಧನೊಬ್ಬ ಕೀಟಲೆ ಮಾಡಿದ್ದಾನೆ. ಘಟನೆ ಸಂಬಂಧ ದೂರು ದಾಖಲಾಗಿದ್ದು ಮಣಿಪಾಲ ಪೊಲೀಸರು ಕಾಮಾಂಧನ ಮನೆಗೆ ನುಗ್ಗಿ ಆತನ ಹೆಡೆಮುರಿ ಕಟ್ಟಿದ್ದಾರೆ. ಮಣಿಪಾಲ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರ ನೇತೃತ್ವದ ಪೊಲೀಸ್ ಸಿಬ್ಬಂದಿಗಳು ಅಕ್ಷರಶಹ ಯುವತಿಯ ಪಾಲಿಗೆ ಶ್ರೀ ಕೃಷ್ಣನಾಗಿ ಬಂದು ಆರೋಪಿಯನ್ನ ಜೈಲುಕಂಬಿಯ ಹಿಂದೆ ತಳ್ಳಿದ್ದಾರೆ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:11 am, Sat, 31 August 24