ಬ್ಯಾನ್ ಆದ್ರೂ ಸಿಂಥೆಟಿಕ್ ಡೈ ಕಲರ್ ಬಳಕೆ: ಮಕ್ಕಳ ಹೊಟ್ಟೆ ಸೇರ್ತಿದೆ ಸ್ಲೋ ಪಾಯಿಸನ್

ಫುಡ್ಡಿಗಳನ್ನು ಸೆಳೆಯಲು ನಾನಾ ರೀತಿಯ ತಿನಿಸುಗಳು ಮಾರುಕಟ್ಟೆಗೆ ಪ್ರತಿ ನಿತ್ಯ ಲಗ್ಗೆ ಇಡಿತ್ತಿವೆ. ಆದರೆ ಮಾರ್ಕೆಟ್ ಟು ಪ್ಲೇಟ್ ನೀವೆನೂ ತಿನ್ನುತ್ತೀರಾ ಅನ್ನೊ ಬಗ್ಗೆ ಗಮನ ಇರಬೇಕು ಅಂತ ವೈದ್ಯರು ಎಚ್ಚರಿಸಿದ್ದಾರೆ. ಯಾಕಂದ್ರೆ ಬ್ಯಾನ್ ಇದ್ರೂ ಕೆಲವೊಂದು ಉತ್ಪನ್ನಗಳು ಬಳಕೆಯಲ್ಲಿದೆ. ಈ ಪೈಕಿ ಸಿಂಥೆಟಿಕ್ ಡೈ ಕಲರ್ ಕೂಡ ಒಂದು.

ಬ್ಯಾನ್ ಆದ್ರೂ ಸಿಂಥೆಟಿಕ್ ಡೈ ಕಲರ್ ಬಳಕೆ: ಮಕ್ಕಳ ಹೊಟ್ಟೆ ಸೇರ್ತಿದೆ ಸ್ಲೋ ಪಾಯಿಸನ್
ಬ್ಯಾನ್ ಆದ್ರೂ ಸಿಂಥೆಟಿಕ್ ಡೈ ಕಲರ್ ಬಳಕೆ: ಮಕ್ಕಳ ಹೊಟ್ಟೆ ಸೇರ್ತಿದೆ ಸ್ಲೋ ಪಾಯಿಸನ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2024 | 10:44 PM

ಬೆಂಗಳೂರು, ಆಗಸ್ಟ್​​ 30: ನಿಮ್ಮ ಮಕ್ಕಳು ಕಲರ್ಕಲರ್ ಕ್ಯಾಂಡಿಗಳಿಗೆ ಮಾರು ಹೋಗಿದ್ದಾರಾ? ಕೆಲವೊಂದು ಸಲ ಕಲರ್ ಫುಲ್ ಫುಡ್ (food) ಬೇಕೇಬೇಕು ಅಂತ ರಚ್ಚೆ ಹಿಡಿತಾರಾ? ಹಾಗಿದ್ದರೆ ಇನ್ಮೇಲೆ ಅವರ ದೇಹದ ತೂಕದ ಮೇಲೆ ಒಂದು ಕಣ್ಣಿಡೋದು ಒಳ್ಳೆದು. ಯಾಕಂದರೆ ನಿಮಗೆ ಗೊತ್ತಿಲ್ಲದೆ ನಿಮ್ಮ ಮಕ್ಕಳ ಹೊಟ್ಟೆಗೆ ಸ್ಲೋ ಪಾಯಿಸನ್ ಸೇರುತ್ತಿದೆ.

ಈಗಿನ ಪರಿಸ್ಥಿತಿ ಹೇಗಿದೆ ಅಂದರೆ ಮನೆ ಆಹಾರ ಉತ್ತಮ ಅನ್ನೊ ಹಾಗಾಗಿದೆ. ಅಪರೂಪಕ್ಕೊಮ್ಮೆ ತಿನ್ನುವ ಆಹಾರ ಕೂಡ ಅನ್ಸೇಫ್ ಆರೋಗ್ಯಕ್ಕೆ ಅಂತಾಗಿದೆ. ಫುಡ್ಡಿಗಳನ್ನು ಸೆಳೆಯಲು ನಾನಾ ರೀತಿಯ ತಿನಿಸುಗಳು ಮಾರುಕಟ್ಟೆಗೆ ಪ್ರತಿ ನಿತ್ಯ ಲಗ್ಗೆ ಇಡಿತ್ತಿವೆ. ಆದರೆ ಮಾರ್ಕೆಟ್ ಟು ಪ್ಲೇಟ್ ನೀವೆನೂ ತಿನ್ನುತ್ತೀರಾ ಅನ್ನೊ ಬಗ್ಗೆ ಗಮನ ಇರಬೇಕು ಅಂತ ವೈದ್ಯರು ಎಚ್ಚರಿಸಿದ್ದಾರೆ. ಯಾಕಂದ್ರೆ ಬ್ಯಾನ್ ಇದ್ರೂ ಕೆಲವೊಂದು ಉತ್ಪನ್ನಗಳು ಬಳಕೆಯಲ್ಲಿದೆ. ಈ ಪೈಕಿ ಸಿಂಥೆಟಿಕ್ ಡೈ ಕಲರ್ ಕೂಡ ಒಂದು. ರಾಜ್ಯದಲ್ಲಿ ಸಿಂಥೆಟಿಕ್ ಡೈ ಕಲರ್ ನಿಷೇಧವಾಗಿದ್ರೂ, ಆಹಾರಗಳಲ್ಲಿ ಇದರ ಬಳಕೆ ಆಗ್ತಿದೆ. ಬಣ್ಣ ಬಣ್ಣದ ಸಿಂಥೆಟಿಕ್ ಡೈ ಕಲರ್ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾದ್ರೆ, ಮಕ್ಕಳಲ್ಲಿ ಹಾನಿಕಾರ ಬೊಜ್ಜು ಬೆಳೆಯುತ್ತದೆ.

ಇದನ್ನೂ ಓದಿ: ಟೇಸ್ಟ್‌ಲೆಸ್ ಆಗುತ್ತಾ ಕೇಕ್‌? ಗೋಬಿ, ಕಬಾಯ್ ಆಯ್ತು ಈಗ ಕೇಕ್, ಬೇಕರಿ ತಿನಿಸುಗಳ ಮೇಲೆ ಕ್ರಮಕ್ಕೆ ಸಿದ್ಧತೆ

ಫುಡ್ ಆಕರ್ಷಕವಾಗಿ ಕಾಣಲು ಈ ಸಿಂಥೆಟಿಕ್ ಡೈ ಕಲರ್ ಬಳಸಲಾಗುತ್ತದೆ. ಇದು ಫುಡ್ ಪ್ರಿಯರನ್ನು ಸೆಳೆಯುವು ಮಾತ್ರವಲ್ಲ, ಮತ್ತೆ ಮತ್ತೆ ತಿನ್ನಬೇಕು ಅನ್ನುವ ನಾಲಿಗೆ ರುಚಿ ಹೆಚ್ಚಿಸುತ್ತದೆ. ಮುಖ್ಯವಾಗಿ ಜಂಕ್ ಫುಡ್ಗಳಿಗೆ ಇದರ ಬಳಕೆ ಹೆಚ್ಚು. ಈಗಿನ ಮಕ್ಕಳು ಹೆಚ್ಚು ಜಂಕ್ ಪ್ರಿಯರು. ಹೀಗಾಗಿ ಮಕ್ಕಳು ಇಂತಹ ಫುಡ್ ತಿನ್ನದಾದ ಬೊಜ್ಜು ಬೆಳೆಯುತ್ತದೆ. ಅತಿಯಾದ ಬೊಜ್ಜಿನಿಂದ ಹೃದಯ ಸಮಸ್ಯೆ, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಬಿಪಿ, ಸಕ್ಕರೆ ಕೂಡ ಮಕ್ಕಳನ್ನು ಬಾಧಿಸುತ್ತದೆ ಎಂದು ಆಹಾರ ತಜ್ಞರು ಡಾ.ಕೀರ್ತಿ ಹಿರಿಸಾವೆ ಹೇಳುತ್ತಾರೆ.

ಇನ್ನು ನಗರದ ಹೋಟೆಲ್ ರೆಸ್ಟೋರೆಂಟ್​ಗಳಲ್ಲಿ ಶುಚಿತ್ವ ಕಾಪಾಡದ ಆರೋಪ ಹಾಗೂ ಅವಧಿ ಮೀರಿದ ಆಹಾರ ತಿನಿಸು ಮಾರಾಟ ದೂರು ಕೇಳಿ ಬಂದಿದೆ. ಸಚಿವರು ಈ ಬಗ್ಗೆ ಆಹಾರ ಇಲಾಖೆಗೆ ಚಾಟಿ ಹಿನ್ನಲೆ ಇಂದಿನಿಂದ ಆಹಾರ ಇಲಾಖೆ ಹೋಟೆಲ್ ರೆಸ್ಟೋರೆಂಟ್ ಪರಿಶೀಲನೆಗೆ ಮುಂದಾಗಿದ್ರು. ಇಂದು ನಗರದ ಯಲಹಂಕ ನ್ಯೂ ಟೌನ್ ಬಳಿಯ ವಿಷ್ಣು ಪಾರ್ಕ್ ಹೋಟೆಲ್ ನಲ್ಲಿ ಪರಿಶೀಲನೆ ಮಾಡಿದ್ದರು.

ಈ ವೇಳೆ ಹೋಟೆಲ್ ನಲ್ಲಿ ಲೈಸೆನ್ಸ್ ಡಿಸ್ಪ್ಲೇ ಮಾಡಿರಲಿಲ್ಲ ಹಾಗೂ ಕಿಚನ್ ಸ್ವಚ್ಛತೆ ಇಲ್ಲದ ಹಿನ್ನೆಲೆ ಶ್ರೀ ವಿಷ್ಣು ಪಾರ್ಕ್ ಹೋಟೆಲ್ ಗೆ ಆಹಾರ ಇಲಾಖೆ ನೋಟೀಸ್ ನೀಡಿದ್ರು. ಕೇವಲ ಕಾಟಾಚಾರಕ್ಕೆ ಕೆಲವು ಕಡೆ ದಾಳಿ ಮಾಡಿದ್ರು. ಈ ವೇಳ ಮಾತನಾಡಿದ ಆಹಾರ ಇಲಾಖೆ ಅಂಕಿತಾಧಿಕಾರಿ ಜನಾರ್ಧನ್ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಆಹಾರ ಗುಣಮಟ್ಟ ಕಾಯ್ದುಕೊಳ್ಳದ ಬಗ್ಗೆ ದೂರು ಬಂದಿತ್ತು ಹೀಗಾಗಿ ಆರೋಗ್ಯ ಸಚಿವರ ಸೂಚನೆಯಂತೆ ಇಂದಿನಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಈರುಳ್ಳಿ ಬೆಲೆ ದಿಢೀರ್ ಏರಿಕೆ: ಇನ್ನಷ್ಟು ಹೆಚ್ಚಳ ಸಾಧ್ಯತೆ, ಉತ್ಪಾದನೆ ಕುಸಿತವೇ ಕಾರಣ

ಇಂದು ಯಲಹಂಕ, ಹೆಬ್ಬಾಳ, ದಾಸರಹಳ್ಳಿ ಭಾಗದಲ್ಲಿ ಪರಿಶೀಲನೆ ನಡೆಸಲಾಗ್ತಿದೆ ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್​ಗಳಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ. ಇನ್ನು ಕೆಲ ಹೋಟೆಲ್​ಗಳಲ್ಲಿ ಲೈಸೆನ್ಸ್ ಡಿಸ್ಪ್ಲೆ ಮಾಡಿಲ್ಲ ಅಂತಹ ಹೋಟೆಲ್ ಮಾಲಿಕರಿಗೆ ನೋಟಿಸ್ ನೀಡಲಾಗಿದೆ. ಉತ್ತರಿಸುವಂತೆ ನೋಟಿಸ್ ನೀಡಲಾಗಿದೆ. ಅವಧಿ ಮೀರಿದ ಆಹಾರ ಪದಾರ್ಥಗಳು ಕಂಡುಬಂದಲ್ಲಿ ದಂಡಾಸ್ತ್ರ ಪ್ರಯೋಗ ಮಾಡ್ತೀವಿ. 20 ಸಾವಿರ ರೂ. ದಂಡ ಹಾಕಲು ಅಧಿಕಾರವಿದೆ, ಅಗತ್ಯ ಬಂದಲ್ಲಿ ದಂಡ ಕೂಡ ಹಾಕಲಾಗುತ್ತೆ ನಾಳೆಯೂ ಪರಿಶೀಲನೆ ಮುಂದುವರೆಯಲಿದೆ ಅಂತಾ ಹೇಳಿದ್ದಾರೆ.

ಸಿಂಥೆಟಿಕ್ ಡೈ ಕಲರ್ನಲ್ಲಿ ಮೂಡ್ ಸ್ಟಿಮ್ಯೂಲೇಟ್ ಮಾಡುವ ಅಂಶ ಪತ್ತೆಯಾಗ್ತಿದೆ. ಈ ಆಹಾರ ಸೇವಿಸಿದಾಗ ಮೂಡ್ನಿಂದ ಆಕರ್ಷಣೆ ಉಂಟಾಗುತ್ತದೆ. ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತದೆ. ನಾಲಿಗೆ ರುಚಿ ಹತ್ತಿರುತ್ತೆ. ಕ್ರೇವಿಂಗ್ ಹೆಚ್ಚಾಗುತ್ತೆ. ಹೀಗಾಗಿ ಮಕ್ಕಳು ಹಠ ಮಾಡಲು ಶುರು ಮಾಡ್ತಾರೆ. ಹಠ ಮಾಡಿದ್ರು ಅಂತ ಕೊಡಿಸುವ ಫುಡ್ನಿಂದ ಕ್ಯಾಲರಿ ಹೆಚ್ಚಾಗುತ್ತೆ. ಇದು ಒಬೆಸಿಟಿಗೆ ಕಾರಣವಾಗುತ್ತೆ. ಬೊಜ್ಜಿನಿಂದ ನಾನಾ ಆರೋಗ್ಯ ಸಮಸ್ಯೆ ಶುರುವಾಗುತ್ತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?