AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KN Rajanna: ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆ ಮಾಡಲ್ಲ, ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸಲಿ ಎಂದು ಬಯಸಿದ ರಾಜಣ್ಣ

Siddaramaiah: ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆ ಮಾಡಲ್ಲ, ಅಲ್ಲಿ ಕೆಲಸ ಮಾಡಿದ್ದಾರೆ. ಬಾದಾಮಿಗೆ ಹೋಗಿ ಬರುವುದಕ್ಕೆ ಅವರಿಗೆ ಸಮಯದ ತೊಂದರೆಯಾಗುತ್ತಿದೆ. ಹಾಗಾಗಿ ಸಿದ್ದರಾಮಯ್ಯ ಅವರು ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸಲಿ ಎಂದು ಬಯಸುವುದಾಗಿ ಮಧುಗಿರಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ ತುಮಕೂರಿನಲ್ಲಿ ಹೇಳಿದ್ದಾರೆ

KN Rajanna: ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆ ಮಾಡಲ್ಲ, ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸಲಿ ಎಂದು ಬಯಸಿದ ರಾಜಣ್ಣ
ಮಧುಗಿರಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ
TV9 Web
| Updated By: ಸಾಧು ಶ್ರೀನಾಥ್​|

Updated on: Jun 16, 2021 | 2:50 PM

Share

ತುಮಕೂರು: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಕೊನೆಯ 6 ತಿಂಗಳಲ್ಲಿ ಯಾರು, ಎಲ್ಲಿಂದ ಸ್ಪರ್ಧೆ ಎಂಬುದು ತೀರ್ಮಾನವಾಗಲಿದೆ. ಕಡೆಯಲ್ಲಿ ಏನುಬೇಕಾದರು ಆಗಬಹುದು ಎಂದು ವಿಶ್ಲೇಷಿಸಿರುವ ಮಾಜಿ ಶಾಸಕ ಕೆಎನ್ ರಾಜಣ್ಣ, ತಮ್ಮ ಪ್ರಕಾರ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸ್ಪರ್ಧೆ ಮಾಡಲ್ಲ, ಅಲ್ಲಿ ಕೆಲಸ ಮಾಡಿದ್ದಾರೆ. ಬಾದಾಮಿಗೆ ಹೋಗಿ ಬರುವುದಕ್ಕೆ ಅವರಿಗೆ ಸಮಯದ ತೊಂದರೆಯಾಗುತ್ತಿದೆ. ಹಾಗಾಗಿ ತಾವೂ ಕೂಡ ಸಿದ್ದರಾಮಯ್ಯ ಅವರು ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸಲಿ ಎಂದು ಬಯಸುವುದಾಗಿ ಹೇಳಿದ್ದಾರೆ.

ಮುಂದುವರಿದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಕೆಎನ್ ರಾಜಣ್ಣ, ಸಿದ್ದರಾಮಯ್ಯ ಕೋಲಾರಕ್ಕೆ ಹೋಗಬೇಕು ಅನ್ನೋ ಆಯ್ಕೆಯಿದೆ. ಜಮೀರ್ ಪಾಷಾ ಅವರದ್ದೂ ಒಂದು ಆಯ್ಕೆಯಿದೆ. ತುಮಕೂರು ಸಹ ಒಂದು ಆಯ್ಕೆಯಿದೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿಯೂ ಮಾತನಾಡಿದ ಕೆಎನ್ ರಾಜಣ್ಣ, ಜಿ.ಟಿ. ದೇವೇಗೌಡ ಕಾಂಗ್ರೆಸ್ ಗೆ ಬರ್ತಾರೆ, ಚಾಮುಂಡೇಶ್ವರಿಯಲ್ಲಿ ಅವರೇ ನಿಲ್ತಾರೆ. ಚುನಾವಣೆ 6 ತಿಂಗಳು ಇದ್ದಂತೆ ಬರುತ್ತಾರೆ ಎಂದು ಹೇಳಿದರು.

ಸಚಿವ ಸ್ಥಾನ ಸಿಕ್ಕ ಮೇಲೆ ಮತ್ತೆ ಮುಂದಿನ ಎಲೆಕ್ಷನ್‌ಗೆ ನಿಲ್ಲೋದಿಲ್ಲ- ರಾಜಣ್ಣ: ಕಾಂಗ್ರೆಸ್ ನಲ್ಲಿ ಮುಂದೆ ಯಾರು ಬೇಕಾದ್ರೂ ಮುಖ್ಯಮಂತ್ರಿ ಆಗಲಿ. ನನಗೆ ಮಾತ್ರ ಸಚಿವ ಸ್ಥಾನ ಕೊಡಬೇಕು, ಇಲ್ಲದಿದ್ರೆ ರಾಜೀನಾಮೆ ನೀಡುತ್ತೇನೆ. ನಾನು ಬಾಂಬೆಗೆಲ್ಲಾ ಹೋಗಲ್ಲ, ನಮ್ಮ ಕ್ಷೇತ್ರದಲ್ಲೇ ಇರ್ತೇನೆ.‌ ಎಲ್ಲಾ ಮುಖಂಡರಿಗೂ ಮನದಟ್ಟು ಮಾಡಿದ್ದೇನೆ. ಸಚಿವ ಸ್ಥಾನ ಸಿಕ್ಕ ಮೇಲೆ ಮತ್ತೆ ಮುಂದಿನ ಎಲೆಕ್ಷನ್‌ಗೆ ನಿಲ್ಲೋದಿಲ್ಲ, ಇದೇ ಕೊನೆ‌ ಎಲೆಕ್ಷನ್ ಎದು ತುಮಕೂರಿನಲ್ಲಿ ಮಾಜಿ ಶಾಸಕ ಕೆಎನ್ ರಾಜಣ್ಣ ಹೇಳಿದರು.

ಜಯೇಂದ್ರನೇ ಚೀಫ್ ಮಿನಿಸ್ಟರ್.‌ ಇದರಲ್ಲಿ ಯಾವುದೇ ಅನುಮಾನವಿಲ್ಲ… ಇನ್ನು, ರಾಜ್ಯ ಸರ್ಕಾರದ ನಾಯಕತ್ವದ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಮಧುಗಿರಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ ಬಿಜೆಪಿಯವ್ರಷ್ಟೇ ಅಲ್ಲ, ಕಾಂಗ್ರೆಸ್ ನವ್ರು ಕೂಡ ಯಡಿಯೂರಪ್ಪ ಪರ ಇದ್ದಾರೆ. ಯಡಿಯೂರಪ್ಪನ ಬದಲಾವಣೆ ಪರವಿಲ್ಲ. ಯಡಿಯೂರಪ್ಪನೇ ಇರ್ಬೇಕು ಎಂದು ಯಡಿಯೂರಪ್ಪನ‌ ಪರ ರಾಜಣ್ಣ ಬ್ಯಾಂಟಿಂಗ್ ಮಾಡಿದರು.

ವಯಸ್ಸಾಗಿದೆ ಎಂಬ ಕಾರಣವೊಡ್ಡಿ ಯಡಿಯೂರಪ್ಪ ಬದಲಾವಣೆ ಸರಿಯಲ್ಲ.‌ ಸುಭದ್ರವಾದ ಸರ್ಕಾರವಿದ್ದರೆ ಕೆಲಸವಾಗುತ್ತದೆ. ಅಭದ್ರತೆ ಸರ್ಕಾರದಲ್ಲಿ ಬಂದರೆ ಕೆಲಸ ಕಾರ್ಯವಾಗುವುದಿಲ್ಲ. ಜನರಿಗೆ ತೊಂದರೆಯಾಗಲಿದೆ.‌ ಬದಲಾವಣೆ ಮಾಡೋದು ಅವರ ಪಕ್ಷದ ವಿಚಾರ ಎಂದು ಯಡಿಯೂರಪ್ಪ ಬಗ್ಗೆ ರಾಜಣ್ಣ ಮೃಧು ಧೋರಣೆ ತೋರಿದರಾದರೂ ಅದಕ್ಕೆ ಕಾರಣ ಏನು ಎಂಬುದು ತಕ್ಷಣವೇ ಅವರ ಮಾತಿನಲ್ಲೇ ವ್ಯಕ್ತವಾಯಿತು.

ಸಿಎಂ ಯಡಿಯೂರಪ್ಪ ನಾಮ್​ ಕಾ ವಾಸ್ತೆ. ಎಲ್ಲ ನಡೆಸೋದು ವಿಜಯೇಂದ್ರ. ವಿಜಯೇಂದ್ರನೇ ಸರ್ಕಾರ ವಿಜಯೇಂದ್ರನೇ ಚೀಫ್ ಮಿನಿಸ್ಟರ್.‌ ಇದರಲ್ಲಿ ಯಾವುದೇ ಅನುಮಾನವಿಲ್ಲ. ವಿಜಯೇಂದ್ರ ಶಾಡೋ ಆಫ್ ಚೀಫ್ ಮಿನಿಸ್ಟರ್. ಯಡಿಯೂರಪ್ಪ ಇದ್ರೆ ಒಳ್ಳೇದು, ಕಾಂಗ್ರೆಸ್​ ಪಕ್ಷಕ್ಕೇ ಹೆಚ್ಚು ಲಾಭ. ಇನ್ ಎಫೆಕ್ಟಿವ್ ಸಿಎಂ ಇದ್ದರೆ ವಿರೋಧ ಪಕ್ಷಕ್ಕೇ ಒಳ್ಳೆಯದು ಅಲ್ವಾ? ಎಂದು ನಗೆಯಾಡುತ್ತಾ ಕೆಎನ್ ರಾಜಣ್ಣ ಪ್ರಶ್ನಿಸಿದರು.

(madhugiri ex mla from congress kn rajanna wants siddaramaiah to contest from chikkanayakanahalli)

ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ