
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಆರೋಪಿ ಪ್ರತಾಪ್ ಹಜಾರ್ನನ್ನು ಮಹಾರಾಷ್ಟ್ರ ಎಟಿಎಸ್ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್ ಮಾಡಿದ್ದಾರೆ.
ಆರೋಪಿ ಪ್ರತಾಪ್ ಹಜಾರ್, ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಸಾಹಿತಿ ಎಂ.ಎಂ.ಕಲಬುರಗಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ನುರಿತ ಬಾಂಬ್ ತಯಾರಕನಾಗಿದ್ದ ಪ್ರತಾಪ್, ಬೆಳಗಾವಿಯಲ್ಲಿ ನಡೆದಿದ್ದ ಗನ್ ಟ್ರೈನಿಂಗ್ನಲ್ಲಿ ಭಾಗಿಯಾಗಿದ್ದ. ಅಲ್ಲದೆ, ಉಳಿದ ಆರೋಪಿಗಳಿಗೂ ಗನ್ ಟ್ರೈನಿಂಗ್ ನೀಡಿದ್ದ ಎಂಬ ಮಾಹಿತಿ ಎಟಿಎಸ್ ತನಿಖೆ ವೇಳೆ ಬಯಲಾಗಿದೆ.
ಸದ್ಯ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳನ್ನು ಕರ್ನಾಟಕ ಎಸ್ಐಟಿ ಪೊಲೀಸರು ಸಂಪರ್ಕ ಮಾಡಿಲ್ಲ. ಮುಂದಿನ ಹಂತದಲ್ಲಿ ಆರೋಪಿ ಪ್ರತಾಪ್ನನ್ನು ವಶಕ್ಕೆ ಪಡೆದು ಎಸ್ಐಟಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.
Published On - 2:10 pm, Mon, 27 January 20