ಮಹಿಳೆಯರ ಹೆಸರಿನಲ್ಲಿ ಅಶ್ಲೀಲ ಫೋಟೋ ಹಂಚಿಕೊಳ್ಳುತ್ತಿದ್ದ ವ್ಯಕ್ತಿಗೆ ಮಹಿಳೆಯಿಂದಲೇ ಕಪಾಳಮೋಕ್ಷ

ಕೇವಲ ಸಂದೇಶವೊಂದೇ ಅಲ್ಲದೇ ಅಶ್ಲೀಲ ಫೋಟೋ, ವೀಡಿಯೋಗಳನ್ನು ಕಳುಹಿಸುತ್ತಿದ್ದ. ಈ ಮಧ್ಯೆ, ನಿಮ್ಮನ್ನ ಭೇಟಿಯಾಗಬೇಕು ಅಂತ ಹೇಳಿದ್ದ. ಇದೇ ಸರಿಯಾದ ಸಮಯ ಎಂದು ಮಹಿಳೆ ಮಡಿಕೇರಿ ಬಸ್​ಸ್ಟಾಪ್ಗೆ​ ಕರೆಸಿ ಮಹಿಳೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಮಹಿಳೆಯರ ಹೆಸರಿನಲ್ಲಿ ಅಶ್ಲೀಲ ಫೋಟೋ ಹಂಚಿಕೊಳ್ಳುತ್ತಿದ್ದ ವ್ಯಕ್ತಿಗೆ ಮಹಿಳೆಯಿಂದಲೇ ಕಪಾಳಮೋಕ್ಷ
ಸಾಂದರ್ಭಿಕ ಚಿತ್ರ
TV9kannada Web Team

| Edited By: shruti hegde

Jun 21, 2021 | 4:17 PM

ಮಡಿಕೇರಿ: ಫೇಸ್​ಬುಕ್​ನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮಾಡಿದ್ದಕ್ಕಾಗಿ ಬಸ್​ಸ್ಟ್ಯಾಂಡ್​ಗೆ ಕರೆಸಿಕೊಂಡು ಮಹಿಳೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಯುವತಿಯರ ಹೆಸರಿನಲ್ಲಿ ಯುವಕ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ, ಈ ವಿಷಯ ತಿಳಿದ ಯುವತಿ ಮಡಿಕೇರಿ ಬಸ್​ಸ್ಟ್ಯಾಂಡಿಗೆ ಆತನನ್ನು ಕರೆಸಿಕೊಂಡು ಏಟು ನೀಡಿದ್ದಾಳೆ. ಇದೀಗ ಯುವಕ ಪೊಲೀಸರ ವಶದಲ್ಲಿದ್ದಾನೆ.

ಮಡಿಕೇರಿ ಸಮೀಪದ ಹಾಕತ್ತೂರಿನ ಅಶ್ರಪ್ ಎಂಬ ಯುವಕ ಎಂಬುದು ತಿಳಿದು ಬಂದಿದೆ. ಯುವತಿಯ ಹೆಸರಲ್ಲಿ ಕಳೆದ 15 ದಿನಗಳಿಂದ‌ ಚಾಟಿಂಗ್ ಮಾಡುತ್ತಿದ್ದ. ನಂತರ ನನ್ನ ಹೆಸರು ಅರುಣ ಎಂದು ಹೇಳಿದ್ದ. ಇದೀಗ ಸಿಕ್ಕಿಬಿದ್ದಾಕ್ಷಣ ನನ್ನೊಟ್ಟಿಗೆ ಮತ್ತಿಬ್ಬರು ಇದ್ದಾರೆ ಎಂಬ ಮಾಹಿತಿ ಹೇಳಿದ್ದಾನೆ.

ಈತ ಫೇಸ್‍ಬುಕ್‍ನಲ್ಲಿ ಫೇಕ್ ಅಕೌಂಟ್ ಮಾಡಿಕೊಂಡು ಸ್ನೇಹ ಸಂಪಾದನೆ ಮಾಡುತ್ತಿದ್ದ. ರಶ್ಮಿ ಅಂತ ಅಕೌಂಟ್ ಹೊಂದಿದ್ದ ಈತ ಮಹಿಳೆಯೊಬ್ಬರನ್ನ ಪರಿಚಯ ಮಾಡಿಕೊಂಡಿದ್ದ. ನಂತರ ಹೇಗೋ ಮನವೊಲಿಸಿ ಫೋನ್​ ನಂಬರ್ ಪಡೆದುಕೊಂಡು ಪರಸ್ಪರ ಚಾಟ್ ಮಾಡೋಕೆ ಶುರುಮಾಡಿದ. ದಿನಕಳೆದಂತೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ನೀವಂದ್ರೆ ನನ್ನ ಸ್ನೇಹಿತರಿಗೆ ತುಂಬಾ ಇಷ್ಟ ಎಂದೆಲ್ಲಾ ಸಂದೇಶ ಕಳುಹಿಸುತ್ತಿದ್ದ. ಜತೆಗೆ ಬೇರೊಂದು ನಂಬರ್​ನಿಂದ ನಾನು ಅರುಣ್, ಪವನ್ ಅಂತೆಲ್ಲ ಮೆಸೇಜ್ ಮಾಡೋಕೆ ಪ್ರಾರಂಭಿಸಿದ.

ಕೇವಲ ಸಂದೇಶವೊಂದೇ ಅಲ್ಲದೇ ಅಶ್ಲೀಲ ಫೋಟೋ, ವೀಡಿಯೋಗಳನ್ನು ಕಳುಹಿಸುತ್ತಿದ್ದ. ಈ ಮಧ್ಯೆ, ನಿಮ್ಮನ್ನ ಭೇಟಿಯಾಗಬೇಕು ಅಂತ ಹೇಳಿದ್ದ. ಇದೇ ಸರಿಯಾದ ಸಮಯ ಎಂದು ಮಹಿಳೆ ಮಡಿಕೇರಿ ಬಸ್​ಸ್ಟಾಪ್ಗೆ​ ಕರೆಸಿ ಮಹಿಳೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ:

ಅಶ್ಲೀಲ‌ವಾಗಿ ಎಡಿಟ್ ಮಾಡಿದ್ದ ಫೋಟೋ ತೋರಿಸಿ ಗಣ್ಯರಿಗೆ ಬ್ಲ್ಯಾಕ್​ಮೇಲ್: ಕೋಳಿ ಫಾರ್ಮ್​ ಓನರ್​ ಅರೆಸ್ಟ್​​

ಅಶ್ಲೀಲ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರ ಫೋಟೋ ಅಪ್‌ಲೋಡ್‌ ಮಾಡುತ್ತಿದ್ದವರು ಅರೆಸ್ಟ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada