ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ವೃದ್ಧ ಸಾವು

77 ವರ್ಷದ ಹಿರಿಯ ನಾಗರೀಕ ಅಂಗವಿಕಲರಾಗಿದ್ದ ಚನ್ನಪ್ಪ ಜಿಗಣಿಯಿಂದ ಬಂದಿದ್ದರು. ಚನ್ನಪ್ಪ ಎಂಬ ವೃದ್ಧ ಟೀ ಕುಡಿಯುತ್ತ ಕುಳಿತ್ತಿದ್ದರು. ಟೀ ಕುಡಿಯುತ್ತಿದ್ದಂತೆ ಕುಸಿದು ಬಿದ್ದ ಚನ್ನಪ್ಪ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ.

ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ವೃದ್ಧ ಸಾವು
ಪ್ರಾತಿನಿಧಿಕ ಚಿತ್ರ
Follow us
sandhya thejappa
|

Updated on:Apr 07, 2021 | 10:59 AM

ಬೆಂಗಳೂರು: ಮೆಜೆಸ್ಟಿಕ್​ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ವೃದ್ಧ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್​ನ ಚಿಕ್ಕನಹಳ್ಳಿಯ ಚನ್ನಪ್ಪ ಎಂಬ ವೃದ್ಧ ಮೃತ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಮೃತ ವ್ಯಕ್ತಿಯ ದೇಹವನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕೊವಿಡ್ ಟೆಸ್ಟ್ ಬಳಿಕ ಸಂಬಂಧಿಕರಿಗೆ ಮೃತ ದೇಹ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ.

77 ವರ್ಷದ ಹಿರಿಯ ನಾಗರೀಕ ಅಂಗವಿಕಲರಾಗಿದ್ದ ಚನ್ನಪ್ಪ ಜಿಗಣಿಯಿಂದ ಬಂದಿದ್ದರು. ಚನ್ನಪ್ಪ ಎಂಬ ವೃದ್ಧ ಟೀ ಕುಡಿಯುತ್ತ ಕುಳಿತ್ತಿದ್ದರು. ಟೀ ಕುಡಿಯುತ್ತಿದ್ದಂತೆ ಕುಸಿದು ಬಿದ್ದ ಚನ್ನಪ್ಪ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ನಂತರ ಪೊಲೀಸರು ವೃದ್ಧನ ಅಳಿಯನಿಗೆ ಪೋನ್ ಮಾಡಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

ಬಸ್​ಗಳಿಲ್ಲದೆ ತಾಯಿ, 5 ತಿಂಗಳ ಮಗು ಪರದಾಟ ಯಾದಗಿರಿ: ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ಬಸ್​ಗಳಿಲ್ಲದೆ ಬಾಣಂತಿ ಮತ್ತು ಮಗು ಪರದಾಟ ಪಡುತ್ತಿದ್ದಾರೆ. ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ತಾಯಿ ಮತ್ತು ಐದು ತಿಂಗಳ ಮಗು ಸಮಸ್ಯೆಗೆ ಒಳಗಾಗಿದ್ದಾರೆ. ಮಗುವಿಗೆ ಅನಾರೋಗ್ಯದಿಂದಾಗಿ ಯಾದಗಿರಿಯಿಂದ ರಾಯಚೂರು ಆಸ್ಪತ್ರೆಗೆ ತಾಯಿ ಮತ್ತು ಮಗು ಹೋಗಬೇಕಿತ್ತು. ಆದರೆ ಯಾದಗಿರಿಯಲ್ಲಿ ಒಂದೂ ಬಸ್ ಸಿಗದೇ ತೀರಾ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ

ಸಾರಿಗೆ ಸಿಬ್ಬಂದಿ ಮುಷ್ಕರ: ಎಲ್ಲಿದ್ದಾರೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ?

Coronavirus India Update: 1,15,736 ಹೊಸ ಕೊವಿಡ್ ಪ್ರಕರಣ ಪತ್ತೆ, ಮುಂದಿನ ನಾಲ್ಕು ವಾರಗಳಲ್ಲಿ ಗಂಭೀರ ಪರಿಸ್ಥಿತಿ ಎದುರಾಗಬಹುದು: ಕೇಂದ್ರ ಎಚ್ಚರಿಕೆ

man died of a heart attack at majestic BMTC bus stop

Published On - 10:52 am, Wed, 7 April 21