Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಆಚರಿಸಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದವ ವಾಪಸ್​ ಬರಲೇ ಇಲ್ಲ..

ಹೋಳಿ ಆಚರಿಸಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದವ ನೀರುಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದಲ್ಲಿ ನಡೆದಿದೆ. ಗುರುಸಣಗಿ ಬಳಿ ಭೀಮಾ ನದಿಯಲ್ಲಿ ಯುವಕ ನೀರುಪಾಲಾಗಿದ್ದಾನೆ.

ಹೋಳಿ ಆಚರಿಸಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದವ ವಾಪಸ್​ ಬರಲೇ ಇಲ್ಲ..
ಹೋಳಿ ಆಚರಿಸಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದವ ನೀರುಪಾಲು
Follow us
KUSHAL V
|

Updated on: Mar 29, 2021 | 11:12 PM

ಹೋಳಿ ಆಚರಿಸಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದವ ನೀರುಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದಲ್ಲಿ ನಡೆದಿದೆ. ಗುರುಸಣಗಿ ಬಳಿ ಭೀಮಾ ನದಿಯಲ್ಲಿ ಯುವಕ ನೀರುಪಾಲಾಗಿದ್ದಾನೆ. ಮುದ್ನಾಳ ನಿವಾಸಿ ಶಂಕರ್ ಪವಾರ್(24) ನೀರುಪಾಲಾದ ಯುವಕ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಿಂಗನಳ್ಳಿಯಲ್ಲಿ ಸಿಡಿಲು ಬಡಿದು 17 ಕುರಿಗಳು ಸಾವು ಸಿಂಗನಳ್ಳಿಯಲ್ಲಿ ಸಿಡಿಲು ಬಡಿದು 17 ಕುರಿಗಳು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಸಿಂಗನಳ್ಳಿಯಲ್ಲಿ ವರದಿಯಾಗಿದೆ. ಮಾನು ನಾಗು ಶಳಕೆ ಎಂಬುವವರ 17 ಕುರಿಗಳು ಸಿಡಿಲು ಬಡಿದು ಸಾವಿಗೀಡಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಿಡಿಲು ಬಡಿದು ಒಂದು ಎತ್ತು ಮತ್ತು ಒಂದು ಆಕಳು ಸಾವು ಅತ್ತ, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಂಗಾಪುರದಲ್ಲಿ ಸಿಡಿಲು ಬಡಿದು ಒಂದು ಎತ್ತು ಮತ್ತು ಒಂದು ಆಕಳು ಸಾವಿಗೀಡಾಗಿದೆ. ಶಿವನಗೌಡ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಮತ್ತು ಆಕಳು ಸಾವನ್ನಪ್ಪಿದೆ. ಬಂಕಾಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಲಬುರಗಿಯ ಸುಂದರನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಕಲಬುರಗಿಯ ಸುಂದರನಗರದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಮನೆಗಳಿಗೆ ನುಗ್ಗಿ ಹಲವರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳು ನೂರಾರು ಬೈಕ್ ಹಾಗೂ ಕಾರುಗಳನ್ನ ಜಖಂ ಮಾಡಿದ್ದಾರೆ. ನೂರಾರು ದುಷ್ಕರ್ಮಿಗಳು ಏಕಕಾಲಕ್ಕೆ ಬಡಾವಣೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಅಷ್ಟೇ ಅಲ್ಲ, ಜಿಮ್ಸ್ ಆಸ್ಪತ್ರೆಗೆ ಸಹ ನುಗ್ಗಿ ಗಲಾಟೆ ಮಾಡಿರುವ ಪುಂಡರು ವ್ಯಕ್ತಿಯೊಬ್ಬನ ಕೊಲೆ ಹಿನ್ನೆಲೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಇದೀಗ, ಸುಂದರನಗರದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಜಾಲಗೇರಿ ತಾಂಡಾ 1ರಲ್ಲಿ ಕಳ್ಳಬಟ್ಟಿ ಕುಡಿದು ಯುವಕ ಸಾವು? ಜಾಲಗೇರಿ ತಾಂಡಾ 1ರಲ್ಲಿ ಕಳ್ಳಬಟ್ಟಿ ಕುಡಿದು ಯುವಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಜಾಲಗೇರಿ ತಾಂಡಾ 1ರಲ್ಲಿ ಕಳ್ಳಬಟ್ಟಿ ಕುಡಿದು ಸಹದೇವ ಜುಮ್ಮನ್ನಗೊಳ ಎಂಬಾತ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಲಾಗಿದೆ. ಹೋಳಿ ಹಬ್ಬದ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಈ ವೇಳೆ ಕಳ್ಳಬಟ್ಟಿ ಕುಡಿದು ಮೃತಪಟ್ಟಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಫೈನಾನ್ಸ್​ ಕಂಪನಿಗಳಿಗೆ ಕನ್ನ ಹಾಕುತ್ತಿದ್ದ 10 ಜನರ ಬಂಧನ ಫೈನಾನ್ಸ್​ ಕಂಪನಿಗಳಿಗೆ ಕನ್ನ ಹಾಕುತ್ತಿದ್ದ 10 ಜನರ ಬಂಧನವಾಗಿದೆ. ಬೆಂಗಳೂರಿನ ಹೆಚ್​ಎಎಲ್​ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ. ಖಮರುದ್ದೀನ್, ರಫೀಕ್, ಬದರುದ್ದೀನ್, ಅಯಾಸ್ ಸೇರಿ 10 ಆರೋಪಿಗಳ ಬಂಧನವಾಗಿದೆ.

ಅಂದ ಹಾಗೆ, ಈ ಕಿಲಾಡಿಗಳು ಸೆಕ್ಯುರಿಟಿ ಏಜೆನ್ಸಿ ನಡೆಸುವುದಾಗಿ ಅಂಗಡಿ ಬಾಡಿಗೆ ಪಡೀತಿದ್ರು. ಆರೋಪಿ ಖಮರುದ್ದೀನ್ ಫೈನಾನ್ಸ್ ಕಂಪನಿಗಳ ಪಕ್ಕದಲ್ಲೇ ಅಂಗಡಿ ಬಾಡಿಗೆಗೆ ಪಡೀತಿದ್ದ. ಬಳಿಕ, ಉತ್ತರ ಭಾರತದ ವಿವಿಧೆಡೆಯಿಂದ ಉಳಿದವರನ್ನ ಕರೆಸಿಕೊಳ್ತಿದ್ದ. ರಾತ್ರಿ ವೇಳೆ ಫೈನಾನ್ಸ್​ ಕಂಪನಿಗಳಿಗೆ ಕನ್ನ ಹಾಕಿ ದೋಚುತ್ತಿದ್ದರು. ಲಾಕರ್ ಮುರಿದು ಆರೋಪಿಗಳು ಚಿನ್ನಾಭರಣ ದೋಚುತ್ತಿದ್ದರು. ಸದ್ಯ, ಇವೆಲ್ಲರು ಅರೆಸ್ಟ್​ ಆಗಿದ್ದಾರೆ.

ಇದನ್ನೂ ಓದಿ: ಫಸ್ಟ್​ ಟೈಂ: ಮೆಗಾ ಲೋಕ ಅದಾಲತ್‌ನಲ್ಲಿ ದಾಖಲೆ ಪ್ರಮಾಣದ ಕೇಸ್ ಇತ್ಯರ್ಥ; ರಾಜ್ಯ ಸರ್ಕಾರಕ್ಕೆ 140 ಕೋಟಿ ಉಳಿತಾಯ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು