ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ!

ವ್ಯಕ್ತಿಯೊಬ್ಬರು ವಿಧಾನಸೌಧದ ಪಡಸಾಲೆಯಲ್ಲಿ ಚಿನ್ನಾಭರಣ ಹಾಗೂ ನಗದು ಇದ್ದ ಕೈಚೀಲ ಬಿಟ್ಟು ಹೋದ ಘಟನೆ ವರದಿಯಾಗಿದ್ದು, ನಂತರ ಪೊಲೀಸರು ಅದನ್ನು ಪತ್ತೆಹಚ್ಚಿ ಅವರಿಗೆ ಮರಳಿಸಿದ್ದಾರೆ. ಇದರಿಂದಾಗಿ ಕೆಲ ವದಂತಿಗಳೂ ಹರಡುವಂತಾಯಿತು. ಕೊನೆಗೆ ವಿಧಾನಸೌಧದ ಠಾಣೆ ಪೊಲೀಸರ ಮಧ್ಯ ಪ್ರವೇಶದಿಂದ ಪ್ರಕರಣ ಸುಖಾಂತ್ಯವಾಯಿತು.

ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ!
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Feb 11, 2026 | 3:10 PM

ಬೆಂಗಳೂರು, ಫೆಬ್ರವರಿ 10: ವಿಧಾನಸೌಧದ ಸಚಿವರ ಕಚೇರಿಯೊಂದರ ಬಳಿ ವ್ಯಕ್ತಿಯೊಬ್ಬರು 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಬಿಟ್ಟುಹೋದ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಸಚಿವರೊಬ್ಬರನ್ನು ಭೇಟಿಯಾಗಲು ಬಂದಾಗ ಕೈಚೀಲವನ್ನು ಮರೆತುಹೋಗಿದ್ದರು. ಮರುದಿನ ಬಂದಾಗ ಚೀಲ ಅಲ್ಲಿ ಇಲ್ಲದೇ ಇದ್ದುದು ಕಂಡು ಗಾಬರಿಯಾಗಿದ್ದಾರೆ. ನಂತರ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ಹೊತ್ತುಕೊಂಡು ಹೋಗಿರುವುದು ಪತ್ತೆಯಾಗಿದೆ. ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಏತನ್ಮಧ್ಯೆ, ಸಚಿವರ ಕಚೇರಿಯಿಂದಲೇ ಚಿನ್ನ, ನಗದು ಇದ್ದ ಬ್ಯಾಗ್ ಕಳವಾಗಿದೆ ಎಂಬ ವದಂತಿ ಹರಡಿದೆ. ಈ ವಿಚಾರವಾಗಿ ಸಚಿವರ ಕಚೇರಿ ಸ್ಪಷ್ಟನೆ ನೀಡಿದ್ದು, ಕಚೇರಿಯಲ್ಲಿ ಎಲ್ಲೂ ಕಳ್ಳತನವಾಗಿಲ್ಲ ಎಂದು ದೃಢಪಡಿಸಿದೆ. ವ್ಯಕ್ತಿಯೊಬ್ಬರು ವಿಧಾನಸೌಧದ ಪಡಸಾಲೆಯಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಭದ್ರತಾ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕಚೇರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 am, Tue, 10 February 26

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us