ಮತ್ತೆ ಮುನ್ನೆಲೆಗೆ ಬಂದ ಮಂಡ್ಯ ಜಾಮೀಯಾ ಮಸೀದಿ: ಹೈಕೋರ್ಟ್‌ನಲ್ಲಿ ದಾವೆ ಹೂಡಿದ ಹನುಮ ಭಕ್ತರು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2024 | 10:57 PM

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಚಾರವಾಗಿ ಇಷ್ಟು ದಿನ ಪ್ರತಿಭಟನೆ ಮೂಲಕ‌ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಾರಂಪರಿಕ ಕಟ್ಟಡದಲ್ಲಿ ಮದರಸವನ್ನು ನಡೆಸಲಾಗುತ್ತಿದೆ. ಅಲ್ಲದೆ ಜಾಮಿಯಾ ಒಂದು ಮಸೀದಯಲ್ಲ. ಇದು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ. ಇದೀಗ ಭಜರಂಗ ಸೇನೆ, 101 ಹನುಮ ಭಕ್ತರ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.

ಮತ್ತೆ ಮುನ್ನೆಲೆಗೆ ಬಂದ ಮಂಡ್ಯ ಜಾಮೀಯಾ ಮಸೀದಿ: ಹೈಕೋರ್ಟ್‌ನಲ್ಲಿ ದಾವೆ ಹೂಡಿದ ಹನುಮ ಭಕ್ತರು
ಮತ್ತೆ ಮುನ್ನೆಲೆಗೆ ಬಂದ ಮಂಡ್ಯ ಜಾಮೀಯಾ ಮಸೀದಿ: ಹೈಕೋರ್ಟ್‌ನಲ್ಲಿ ದಾವೆ ಹೂಡಿದ ಹನುಮ ಭಕ್ತರು
Follow us on

ಮಂಡ್ಯ, ಜುಲೈ 10: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ (Srirangapatna) ಜಾಮಿಯಾ ಮಸೀದಿಯ ವಿವಾದ ಹಲವು ವರ್ಷಗಳಿಂದ‌ ಕೇಳಿ ಬರುತ್ತಿದೆ. ಇದೀಗ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Jamia Masjid), ಅದು ಮಸೀದಿ ಅಲ್ಲ. ಮಂದಿರ ಎಂಬ ಹೋರಾಟ ಇದೀಗ ಮತ್ತೆ ಮುನ್ನೆಲ್ಲೆಗೆ ಬಂದಿದೆ. ಇಷ್ಟು ದಿನ ಪ್ರತಿಭಟನೆ ಹಾಗೂ ಹನುಮ ಸಂಕೀತನಾ ಯಾತ್ರೆ ಮೂಲಕ ನಡೆಯುತ್ತಿದ್ದ ಹೋರಾಟ ಇದೀಗ ನ್ಯಾಯಾಲಯದ ಮೂಲಕ ಹೋರಾಟಕ್ಕೆ ಮುಂದಾಗಿದ್ದಾರೆ.

ಹೈಕೋರ್ಟ್‌ನಲ್ಲಿ ದಾವೆ ಹೂಡಿದ ಭಜರಂಗ ಸೇನೆ, ಹನುಮ ಭಕ್ತರು

ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕೆಡುಗಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ನಮಗೆ ಮತ್ತೆ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಮಾಡಬೇಕೆಂದು ಹಲವು ವರ್ಷಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಹನುಮಂತ ಭಕ್ತರು ಪ್ರತಿಭಟನೆ ಹಾಗೂ ಬೃಹತ್ ಹನುಮ ಸಂಕೀರ್ತನಾ ಯಾತ್ರೆಯ ಮೂಲಕ ಹೋರಾಟ ಮಾಡುತ್ತಾ ಇದ್ದರು. ಇದೀಗ ಭಜರಂಗ ಸೇನೆ, 101 ಹನುಮ ಭಕ್ತರ ಮೂಲಕ ಹೈಕೋರ್ಟ್‌ನಲ್ಲಿ ದಾವೆಯನ್ನು ಹೂಡಿದೆ.

ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ: ಹೈಕೋರ್ಟ್​​ಗೆ ಬಜರಂಗಸೇನೆ ಕಾರ್ಯಕರ್ತರಿಂದ ಪಿಐಎಲ್​ ಸಲ್ಲಿಕೆ

ಅಂದಹಾಗೆ ಇಷ್ಟು ದಿನಗಳ ಕಾಲ ಪ್ರತಿಭಟನೆಗಳ ಮೂಲಕ‌ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಾರಂಪರಿಕ ಕಟ್ಟಡದಲ್ಲಿ ಮದರಸವನ್ನು ನಡೆಸಲಾಗುತ್ತಿದೆ. ಅಲ್ಲದೆ ಜಾಮಿಯಾ ಒಂದು ಮಸೀದಯಲ್ಲ. ಇದು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ. ಟಿಪ್ಪು ಸುಲ್ತಾನ ದೇವಾಲಯ ಕೆಡುವಿ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇದು ದೇವಸ್ಥಾನ ಎನ್ನಲು ಇಲ್ಲಿನ ಗೋಡೆಗಳಲ್ಲಿ ಇರುವ ಹಿಂದೂ ದೇವಸ್ಥಾನ ಕಲ್ಲುಗಳು, ಅದರಲ್ಲಿ ಇರುವ ಕೆತ್ತನೆಗಳು, ಅಲ್ಲದೇ ಮಸೀದಿಯ ಒಳ ಭಾಗದಲ್ಲಿಯೇ ಹಿಂದೂ ದೇವಸ್ಥಾನದ ಕಲ್ಯಾಣಿ ಹಾಗೂ ಗೋಪುರದಲ್ಲಿ ಕಳಶ ಇದೆ.

ಇವುಗಳು ಇದು ಮಸೀದಿಯಲ್ಲ, ಮಂದಿರ ಎಂದು ನಿರೂಪಿಸುತ್ತವೆ. ಹೀಗಾಗಿ ಜಾಮಿಯಾ ಮಸೀದಿಯ ಜಾಗದಲ್ಲಿ ಮೊದಲು ಇದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಸ್ಥಾಪನೆಗೆ ಸರ್ವೇ ನಡೆಸಿ ಅವಕಾಶ ಕಲ್ಪಿಸಿಕೊಡಬೇಕೆಂದು ಭಜರಂಗ ಸೇನೆ ಹೈಕೋರ್ಟ್‌ಗೆ ದಾವೆ ಹೂಡಿದೆ.

ಇದನ್ನೂ ಓದಿ: ಜಾಮಿಯಾ ಮಸೀದಿ ವಿವಾದ: ಹಿಂದೂ ಪರ ಸಂಘಟನೆಗಳಿಂದ ಇಂದು ಶ್ರೀರಂಗಪಟ್ಟಣ ಚಲೋ

ಕೇಸ್‌ನ್ನು ಹೈಕೋರ್ಟ್ ಫೈಲ್ ಮಾಡಿಕೊಂಡಿದ್ದೂ ಹೀಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಂಡ್ಯ ಡಿಸಿ, ವಕ್ಫ್ ಹಾಗೂ ಧಾರ್ಮಿಕ ದತ್ತಿ ಇಲಾಖೆಗಳಿಗೆ ಕೋರ್ಟ್ ನೋಟಿಸ್​ ನೀಡಿದೆ. ಈ ಕೇಸ್‌ ಸಂಬಂಧ ಮೊದಲ ವಾದ ವಿವಾದಗಳು ಜುಲೈ 11ರಂದು ನಡೆಯಲಿದೆ. ಅಂದು ನೋಟಿಸ್​ ನೀಡಿರುವ ಎಲ್ಲಾ ಇಲಾಖೆಯ ಮುಖ್ಯಸ್ಥರು ಕೋರ್ಟ್‌ಗೆ ಬರುವಂತೆ ನ್ಯಾಯಾಧೀಶರು ಕೋರಿದ್ದಾರೆ.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಸಂಬಂಧ ಇಷ್ಟು ದಿನಗಳ ಕಾಲ ಪ್ರತಿಭಟನೆ ಮೂಲಕ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳು ಇದೀಗ ನ್ಯಾಯಾಲಯದ ಮೊರೆ ಹೋಗಿವೆ. ಇದೀಗ ಹೈಕೋರ್ಟ್‌ನಲ್ಲಿ ಈ ವಿಚಾರ ಯಾವೆಲ್ಲಾ ಬೆಳವಣಿಗೆ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:57 pm, Wed, 10 July 24