ವಿದ್ಯಾಕಾಶಿ ಧಾರವಾಡದಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಬಂಪರ್ ಗಿಫ್ಟ್; 15 ಹಾಸ್ಟೆಲ್​ಗಳ ನಿರ್ಮಾಣಕ್ಕೆ ಆದೇಶ

ವಿದ್ಯಾಕಾಶಿ ಧಾರವಾಡ, ನಿರಂತರವಾಗಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಬಹುದೊಡ್ಡ ನಗರವಾಗಿ ಬೆಳೆಯುತ್ತಿದೆ. ಹತ್ತಾರು ಡಿಗ್ರಿ ಕಾಲೇಜು ಸೇರಿ 2 ಪ್ರಮುಖ ವಿಶ್ವ ವಿದ್ಯಾಲಯಗಳು ಇಲ್ಲಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅವಶ್ಯಕತೆ ಹೆಚ್ಚಿದೆ. ಹೀಗಾಗಿಯೇ ಇದನ್ನರಿತ ಸರ್ಕಾರ ಇದೀಗ ಹೊಸ ಹಾಸ್ಟೆಲ್​ಗಳನ್ನ ಬಿಡುಗಡೆ ಮಾಡಿದೆ.

ವಿದ್ಯಾಕಾಶಿ ಧಾರವಾಡದಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಬಂಪರ್ ಗಿಫ್ಟ್; 15 ಹಾಸ್ಟೆಲ್​ಗಳ ನಿರ್ಮಾಣಕ್ಕೆ ಆದೇಶ
ವಿದ್ಯಾಕಾಶಿ ಧಾರವಾಡದಲ್ಲಿ 15 ಹಾಸ್ಟೆಲ್​ಗಳ ನಿರ್ಮಾಣಕ್ಕೆ ಸರ್ಕಾರ ಆದೇಶ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 10, 2024 | 10:23 PM

ಧಾರವಾಡ, ಜು.10: ಇಡೀ ರಾಜ್ಯದಲ್ಲಿಯೇ ವಿದ್ಯಾಕಾಶಿ ಅಂತಲೇ ಗುರುತಿಸಿಕೊಂಡಿರುವ ಧಾರವಾಡ(Dharwad). ಪ್ರತಿ ವರ್ಷವೂ ಸಹ ಇಲ್ಲಿಗೆ ಬಂದು ಕಲಿಯುವ ವಿದ್ಯಾರ್ಥಿಗಳ(Students) ಸಂಖ್ಯೆ ದ್ವಿಗುಣವಾಗುತ್ತಿದೆ. ಹತ್ತನೇ ತರಗತಿಯಿಂದ ಹಿಡಿದು ಪಿಯು ಸೇರಿ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅದರಂತೆ ಅವರಿಗೆ ತಕ್ಕಂತೆ ಬೇಕಾದ ಹಾಸ್ಟೆಲ್ ವ್ಯವಸ್ಥೆ ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಆದ್ರೆ, ಇದೀಗ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅದರಂತೆ ಧಾರವಾಡಕ್ಕೆ ಒಟ್ಟು 15 ಹಾಸ್ಟೆಲ್​ಗಳನ್ನ ನಿರ್ಮಾಣ ಮಾಡುವಂತೆ ಆದೇಶ ಮಾಡಿದೆ.

ಸದ್ಯ ಹಾಸ್ಟೆಲ್ ನಿರ್ಮಾಣಕ್ಕೆ ಸಮಯ ತೆಗೆದುಕೊಂಡಿದ್ದು, ಅಲ್ಲಿಯವರೆಗೆ ಬಾಡಿಗೆ ಕಟ್ಟಡಗಳನ್ನು ಪಡೆದು ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಹೇಳಿದ್ದಾರೆ. ಈಗಾಗಲೇ ಧಾರವಾಡ ನಗರಕ್ಕೆ ಮಾತ್ರ 15 ಹಾಸ್ಟೆಲ್​ಗಳು ಸಿಕ್ಕಿದ್ದು, ಅದರಲ್ಲಿ 7 ವಿದ್ಯಾರ್ಥಿನಿಯರು, 6 ವಿದ್ಯಾರ್ಥಿಗಳ ಹಾಸ್ಟೆಲ್​ಗಳನ್ನ ಸರ್ಕಾರ ಮಂಜೂರು ಮಾಡಿದೆ. ಈಗಾಗಲೇ ಸ್ಥಳ ಹುಡುಕುವ ಕಾರ್ಯ ಮಾಡಲಾಗಿದ್ದು, ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ:ಜಮ್ಮುವಿನಲ್ಲಿ 32,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ

ಪ್ರತಿ ವರ್ಷ 30 ರಿಂದ 40 ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್​ಗೆ ಅರ್ಜಿ ಸಲ್ಲಿಸುತ್ತಾರೆ. ಆದ್ರೆ, ಅದರಲ್ಲಿ ಹಾಸ್ಟೆಲ್ ಸಿಗುವುದು ಕೇವಲ 8 ರಿಂದ 10 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಅಳಲು ತೋಡಿಕೊಂಡಿದ್ದಾರೆ. ಶೀಘ್ರದಲ್ಲೇ ಹಾಸ್ಟೆಲ್​ಗಳನ್ನ ನಿರ್ಮಿಸಿ ವಿದ್ಯಾರ್ಥಿಗಳ ನೋವಿಗೆ ಸರ್ಕಾರ ಸ್ಪಂದಿಸಬೇಕು ಎನ್ನುವುದೇ ವಿದ್ಯಾರ್ಥಿಗಳ ದೊಡ್ಡ ಬೇಡಿಕೆಯಾಗಿದೆ. ಒಟ್ಟಾರೆ ಧಾರವಾಡ ನಗರಕ್ಕೆ 15 ಹಾಸ್ಟೆಲ್​ಗಳು ಬಂದಿದ್ದು ನಿಜಕ್ಕೂ ಖುಷಿಯ ಸಂಗತಿ. ಆದ್ರೆ, ಅವುಗಳ ನಿರ್ಮಾಣ ಕಾರ್ಯವನ್ನ ಶೀಘ್ರವಾಗಿ ಮಾಡಿದ್ರೆ ಮಾತ್ರ ಅವುಗಳ ಉಪಯೋಗ ಎಲ್ಲ ಬಡ ವಿದ್ಯಾರ್ಥಿಗಳಿಗೆ ಆಗಲಿದೆ. ಇಲ್ಲದಿದ್ರೆ ಸರ್ಕಾರ ಮೊದಲೇ ದುಡ್ಡಿಲ್ಲ ಎಂದು ಹೇಳಿಕೊಂಡು ಇದನ್ನೂ ಮುಂದೂಡುವ ಕಾರ್ಯ ಮಾಡಿದ್ರೆ, ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾಗೋದು ಮಾತ್ರ ಸತ್ಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ