AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Benki Falls: ಶಿಂಷಾನದಿ ತುಂಬಿ ಹರಿದಾಗ ಸೃಷ್ಟಿಯಾಗುವ, ಕಾಡಿನ ಮರೆಯಲ್ಲಿ ಮೆರೆಯುತ್ತಿರುವ ಬೆಂಕಿಫಾಲ್ಸ್‌ ಗತವೈಭವ ಕಂಡಿರಾ?

ಮಂಡ್ಯ ಜಿಲ್ಲೆ ಅಂದ್ರೆ ನಮ್ಮ ಕಣ್ಣೆದುರು ಬರೋದೇ ಗಗನಚುಕ್ಕಿ ಜಲಪಾತ. ಕಾವೇರಿ ನದಿಯ ರುದ್ರನರ್ತನ ಅಲ್ಲಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತೆ. ಆದ್ರೆ ಅದಕ್ಕಿಂತಲೂ ಕಣ್ಮನ ಸೆಳೆಯೋ ಮತ್ತೊಂದು ಫಾಲ್ಸ್‌ ಅದೇ ಮಂಡ್ಯ ಜಿಲ್ಲೆಯಲ್ಲಿದೆ.

Benki Falls: ಶಿಂಷಾನದಿ ತುಂಬಿ ಹರಿದಾಗ ಸೃಷ್ಟಿಯಾಗುವ, ಕಾಡಿನ ಮರೆಯಲ್ಲಿ ಮೆರೆಯುತ್ತಿರುವ ಬೆಂಕಿಫಾಲ್ಸ್‌ ಗತವೈಭವ ಕಂಡಿರಾ?
ಬೆಂಕಿಫಾಲ್ಸ್‌ ಗತವೈಭವ
TV9 Web
| Updated By: ಆಯೇಷಾ ಬಾನು|

Updated on:Oct 25, 2021 | 7:37 AM

Share

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿರುವ ಜಲಪಾತ ಗಗನಚುಕ್ಕಿ ಜಲಪಾತ(Gaganachukki Falls). ಆದ್ರೆ ಇದೇ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಮತ್ತೊಂದು ಜಲಪಾತವಿದೆ. ಕಾಡಿನಮಧ್ಯೆ ಮರೆಯಾಗಿರೋ ಅದೇ ಜಲಪಾತ ಸಧ್ಯ ಧುಮ್ಮಿಕ್ಕುತ್ತಿದೆ. ಮಳವಳ್ಳಿ ತಾಲೂಕಿನ ಗಾಣಾಳು ಗ್ರಾಮದ ಬಳಿ ಮುತ್ತತ್ತಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರೋ ಗಾಣಾಳು ಫಾಲ್ಸ್(Ganalu Falls) ಭೋರ್ಗರೆಯುತ್ತಿದೆ. ಕಳೆದ ವಾರ ಸುರಿದ ಭಾರೀ ಮಳೆಗೆ ಅದ್ರಲ್ಲೂ ತುಮಕೂರು ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಗಾಣಾಳು ಫಾಲ್ಸ್‌ ಗತವೈಭವಕ್ಕೆ ಮರಳಿದೆ. ಇಷ್ಟೆಲ್ಲಾ ಸೊಬಗು ಸೃಷ್ಟಿಯಾಗಿದ್ರೂ, ಪ್ರವಾಸಿಗರಿಗೆ ಮಾತ್ರ ಇದನ್ನ ಕಣ್ತುಂಬಿಕೊಳ್ಳೋ ಅವಕಾಶ ಇಲ್ಲ.

ಅಷ್ಟಕ್ಕೂ ಈ ಜಲಪಾತ ವರ್ಷಪೂರ್ತಿ ಇರೋದಿಲ್ಲ. ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗ್ತಿದ್ದಂತೆ ಶಿಂಷಾನದಿ ತುಂಬಿ ಹರಿಯುತ್ತೇ. ಆಗ ಇಲ್ಲಿ ಫಾಲ್ಸ್‌ ಸೃಷ್ಟಿಯಾಗುತ್ತೆ. ನೀರಿನ ರಭಸಕ್ಕೆ ಮಂಜಿನ ಹೊಗೆ ಸೃಷ್ಟಿಯಾಗೋದ್ರಿಂದ ಇದನ್ನ ಬೆಂಕಿ ಫಾಲ್ಸ್ ಅಂತಾನೂ ಕರೆಯುತ್ತಾರೆ. ಇನ್ನು ಕಾಡಿನ ಮಧ್ಯೆ ಇರೋ ಈ ಪಾಲ್ಸ್‌ಗೆ ಸರಿಯಾದ ರಸ್ತೆಮಾರ್ಗ ಇಲ್ಲ. ಮಂಡ್ಯ ಜಿಲ್ಲೆ ಜನರಿಗೂ ಕೂಡಾ ಈ ಜಲಪಾತದ ಬಗ್ಗೆ ಗೊತ್ತೇ ಇಲ್ಲ. ಆದ್ರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪಾಲ್ಸ್‌ ಬಗ್ಗೆ ತಿಳಿದುಕೊಂಡ ಜನ ಇಲ್ಲಿಗೆ ಲಗ್ಗೆ ಹಾಕಿದ್ರು. ಈ ವೇಳೆ ಪಾಲ್ಸ್‌ಗೆ ಬಿದ್ದು ಕೆಲವರು ಪ್ರಾಣ ಕಳೆದುಕೊಳ್ತಿದ್ದಂತೆ, ಪ್ರವಾಸಿಗರ ಎಂಟ್ರಿಗೆ ಬ್ರೇಕ್‌ ಬಿದ್ದಿದೆ. ನೆಗಡಿಯಾದ್ರೆ ಮೂಗು ಕೊಯ್ದುಕೊಂಡ್ರು ಅನ್ನೋ ಹಾಗೇ ಪೊಲೀಸರನ್ನ ನಿಯೋಜಿಸಿ ರಕ್ಷಣೆ ನೀಡೋ ಬದಲು. ಪ್ರವಾಸಿಗರ ಎಂಟ್ರಿಯನ್ನೇ ಬಂದ್‌ ಮಾಡಿದ್ದಾರೆ.

ಒಟ್ನಲ್ಲಿ ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳೋ ಗಾಣಾಳು ಫಾಲ್ಸ್‌, ಅಕ್ಟೋಬರ್‌ ತಿಂಗಳ ಮಳೆಗೆ ಧುಮ್ಮಿಕ್ಕುತ್ತಿದೆ. ಇಂಥಾ ಸ್ಥಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕಿದ್ದ ಸರ್ಕಾರ, ಪ್ರವಾಸಿಗರೇ ಬ್ರೇಕ್‌ ಹಾಕಿದ್ದು ನಿಜಕ್ಕೂ ವಿಪರ್ಯಾಸ.

benki falls

ಬೆಂಕಿಫಾಲ್ಸ್‌

benki falls

ಬೆಂಕಿಫಾಲ್ಸ್‌

ಇದನ್ನೂ ಓದಿ: Temple Tour: ಅಮೃತ ಶಿಲೆಯಲ್ಲಿ ದಿವ್ಯ ಸ್ವರೂಪನಾಗಿ ಕಂಗೊಳಿಸುತ್ತಿದ್ದಾನೆ ಸಾಯಿಬಾಬಾ

Published On - 7:34 am, Mon, 25 October 21